December 14, 2025
IMG-20251128-WA0308.jpg

ಚಳ್ಳಕೆರೆ: ರಾಜಕೀಯ ಪಕ್ಷಗಳ ಮುಖಂಡರು ತಮ್ಮ ರಾಜಕೀಯ ಸ್ಥಾನಮಾನಕ್ಕಾಗಿ ಕನ್ನಡದ ಅಸ್ಮಿತಿಯನ್ನು ಪ್ರಶ್ನಿಸುವ ರಾಜಕಾರಣಿಗಳ ವಿರುದ್ಧ ಕನ್ನಡ ಪರ ಸಂಘಟನೆಗಳು ಜಾಗೃತರಾಗಬೇಕು ಎಂದು ಸಾಹಿತಿ ಕೊರಲಕುಂಟೆ ತಿಪ್ಪೇಸ್ವಾಮಿ ಕರೆ ನೀಡಿದರು. ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನ್ನಡ ಭಾಷೆಗೆ ತನ್ನದೇ ಆದ ಸಾವಿರಾರು ವರ್ಷಗಳ ಇತಿಹಾಸವಿದೆ ದೇಶದಲ್ಲಿ ಇತರೆ ಭಾಷೆಗಳಿಗಿಂತ ಕನ್ನಡ ಭಾಷೆಗೆ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ದೊರೆತಿರುವುದೇ ಇದಕ್ಕೆ ಸಾಕ್ಷಿ ಆಗಿದೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯನ್ನು ಸರ್ಕಾರದ ಇಲಾಖೆಗಳಲ್ಲಿ ಜಾರಿಗೊಳಿಸಬೇಕು ಎಂಬ ಸುತ್ತೋಲೆಗಳು ಇದ್ದರೂ ಸಹ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕನ್ನಡ ಭಾಷೆ ಕಚೇರಿಗಳಲ್ಲಿ ಜಾರಿಯಾಗಿಲ್ಲ ಈ ಹಿಂದೆ ಮಾಜಿ ಸಚಿವ ವಿಶ್ವೇಶ್ವರ ಹೆಗಡೆಯವರು ಕಾರ್ಯಕ್ರಮ ಒಂದರಲ್ಲಿ ನಾಡಗೀತೆಗೆ ಗೌರವ ಕೊಡುವ ಅಗತ್ಯವಿಲ್ಲ ವಂದೇ ಮಾತರಂ ಗೀತೆಗೆ ಗೌರವ ನೀಡೋಣ ಎನ್ನುವ ಉದ್ಧಟತನ ಪ್ರದರ್ಶಿಸಿದ್ದರು ಇಂತಹ ರಾಜಕಾರಣಿಗಳು ತಮ್ಮ ಭಾಷೆ ನೆಲ ಜಲದ ಬಗ್ಗೆ ಯಾವುದೇ ಗೌರವವನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಇಂತಹ ರಾಜಕಾರಣಿಗಳು ತಮ್ಮ ಅಧಿಕಾರದ ಲಾಲಸೆಗಾಗಿ ಮಾತನಾಡುತ್ತಿರುತ್ತಾರೆ ಇಂತಹವರ ವಿರುದ್ಧ ಕನ್ನಡಪರ ಸಂಘಟನೆಗಳು ಹೆಚ್ಚು ಜಾಗೃತಗೊಂಡು ಕನ್ನಡ ಭಾಷೆ ಉಳಿವಿಗೆ ಶ್ರಮಿಸಬೇಕಿದೆ ಎಂದು ತಿಳಿಸಿದರು.ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ನೇತಾಜಿ ಆರ್ ಪ್ರಸನ್ನ ಮಾತನಾಡಿ ಕನ್ನಡ ನಾಡು ನುಡಿ ಸಂರಕ್ಷಣೆ ಪ್ರತಿಯೊಬ್ಬರ ಕನ್ನಡಿಗನ ಜವಾಬ್ದಾರಿಯಾಗಿದ್ದು ಪ್ರತಿ ಮನೆ ಮನಗಳಲ್ಲೂ ಕನ್ನಡ ಭಾಷೆ ರಾರಾಜಿಸಬೇಕುಕರ್ನಾಟಕ ಶಾಂತಿ ಸೌಹಾರ್ದತೆಯ ನಾಡಾಗಿದ್ದು ಕುವೆಂಪುರವರ ಮಾತಿನಂತೆ ಕರುನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು ಎಲ್ಲಾ ಭಾಷೆಯ ಜನರು ಇಲ್ಲಿ ವಾಸ ಮಾಡುತ್ತಿದ್ದಾರೆ. ಅನ್ಯ ಭಾಷಿಗರು ಕನ್ನಡವನ್ನು ಕಲಿತು ನಾಡಿನ ನಡೆ-ನುಡಿ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದುಕಬೇಕಾಗಿದೆ ನೆಲ ಜಲ ಭಾಷೆ ವಿಚಾರವಾಗಿ ನಾಡಿಗೆ ಅನ್ಯಾಯವಾದರೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಿ ನಮ್ಮ ತನವನ್ನು ಪ್ರದರ್ಶಿಸೋಣ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಮಂಜುನಾಥ್ ಗೌರವಾಧ್ಯಕ್ಷ ಸಿ ಬೋಜರಾಜ ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ನೌಕರರ ಸಂಘದ ಅಧ್ಯಕ್ಷ ಸಿ ಟಿ ವೀರೇಶ್ ನೇತಾಜಿ ಪ್ರಸನ್ನ ಕೆ ಮುರಳಿ ಭಾನುಪ್ರಿಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading