ಮೊಳಕಾಲ್ಮೂರುನ.28:
ಇತ್ತೀಚಿಗೆ ಆವಿಷ್ಕರಿಸಲ್ಪಪಟ್ಟ ಆಧುನೀಕರಣ ತಂತ್ರಜ್ಞಾನ ಬಳಸಿ ಸಾಂಸ್ಕøತಿಕ ಪರಂಪರೆಯ ಬೇರುಗಳನ್ನು ಮರೆಮಾಚದೇ ಉತ್ಪಾದನೆಯಲ್ಲಿ ತೊಡಗಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ ಹೇಳಿದರು.
ಮೊಳಕಾಲ್ಮುರಿನ ಪಾಂಚಜನ್ಯ ಕಾಂಪ್ಲೆಕ್ಸ್‍ನಲ್ಲಿ ಶುಕ್ರವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಟೆಕ್ಸಾಕ್, ಕೆಸಿಟಿಯು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ಆರ್‍ಎಎಂಪಿ ಯೋಜನೆಯಡಿ ಎರಡು ದಿನಗಳ ಮೊಳಕಾಲ್ಮುರು ರೇಷ್ಮೆ ಸೀರೆ ತಾಂತ್ರಿಕತೆ ಕುರಿತಂತೆ ಇಂಡಸ್ಟ್ರೀಸ್ ಟೆಕ್ನಾಲಜಿ ಕ್ಲಿನಿಕ್ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೈಗಾರಿಕೋದ್ಯಮದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಯ ಬಗ್ಗೆ ಒಲವು ತೋರಬೇಕೆಂದು ಕೈಗಾರಿಕೋದ್ಯಮಿಗಳಿಗೆ ಕರೆ ಕೊಟ್ಟರು.
ಮೊಳಕಾಲೂರು ರೇಷ್ಮೆ ಸೀರೆ ಕೈಗಾರಿಕೆಯು ಶತಮಾನದ ಇತಿಹಾಸ ಹೊಂದಿದೆ. ಮೈಸೂರು ರಾಜ ಮನೆತನದ ಕಾಲದಲ್ಲಿ ಒಂದು ಸೀರೆ ಅರಸರ ಗಮನ ಸೆಳೆದಾಗ ಅದನ್ನು ಸಿಂಹಾಸನದ ಸೀರೆ ಎಂದು ಕರೆಯಲಾಗುತ್ತಿತ್ತು. ಅವರಿಂದ ಪ್ರೋತ್ಸಾಹ ಪಡೆದ ಕೈಗಾರಿಕೆಯು ಈಗಲೂ ಸಂಪ್ರದಾಯಿಕ ಕೈಮಗ್ಗ ತಂತ್ರಗಳನ್ನು ಬಳಸಿ ಪ್ರಕೃತಿ ಪ್ರೇರಿತ ವಿನ್ಯಾಸದ ಸೀರೆಗಳನ್ನು ತಯಾರಿಸಲಾಗುತ್ತಿದೆ. ಮೊಳಕಾಲ್ಮುರು ಸೀರೆಗೆ 2006ರಲ್ಲಿ ಭೌಗೋಳಿಕ ಸೂಚನೆ ಹೆಗ್ಗುರುತು Geographical Indication (Gi) Tag ಖಿಚಿg ದೊರೆತಿದೆ. ಇದು ವಿಶೇಷ ಉತ್ಪಾದನೆಯನ್ನು ರಕ್ಷಿಸುತ್ತದೆ. ಇದು ಶುದ್ಧ ರೇಷ್ಮೆಯಿಂದ ಸಂಪ್ರದಾಯಕ ಕೈಮಗ್ಗಗಳನ್ನು ಬಳಸಿ ತಯಾರಿಸಲಾಗುತ್ತದೆ. ವಿಶಿಷ್ಟ ವಿಶ್ವಾಸಗಳು ಇಲ್ಲಿನ ಸೀರೆಗಳು ವಿಶೇಷವಾಗಿ ತಮ್ಮ ಮನಮೋಹಕ ಅಂಚುಗಳಿಗೆ ಹೆಸರುವಾಸಿಯಾಗಿದೆ ಇಂತಹ ರೇಷ್ಮೆ ಸೀರೆಗಳನ್ನು ಹೆಚ್ಚಾಗಿ ಸಿನಿ ತಾರೆಯರು ಅಲ್ಲದೇ ಎಲ್ಲಾ ಕ್ಷೇತ್ರದ ಸೆಲಿಬ್ರಿಟಿ ಹೆಣ್ಣು ಮಕ್ಕಳು ಇಷ್ಟ ಪಡುತ್ತಾರೆ, ಅಷ್ಟೇ ಅಲ್ಲದೇ ಈ ಸೀರೆಗಳು ದೇಶಾದ್ಯಂತ ಹಾಗೂ ವಿದೇಶಗಳಾದ ಮಲೇಷಿಯಾ, ಆಸ್ಟ್ರೇಲಿಯಾ, ಅಮೇರಿಕಾ ದಂತಹ ದೇಶಗಳಿಗೂ ರಫ್ತಾಗುತ್ತವೆ ಅಂದರೇ ಈ ಸೀರೆ ಉತ್ಪಾಧಿಸುವಾಗ ಸಂಪ್ರದಾಯಕ ಕರಕುಶಲತೆ ಎಷ್ಟಿದೆ ಎಂಬುದನ್ನು ಎಲ್ಲಾ ಕೈಗಾರಿಕೋದ್ಯಮಿಗಳು ಅರೆಯಬೇಕು ಎಂದರು.
ಮೊಳಕಾಲ್ಮುರು ಸಿಲ್ಕ್ ಸಿಟಿ ಎಂಟರ್‍ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಎಂ.ಮಂಜುನಾಥ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಹಲವಾರು ರಿಯಾಯತಿಗಳು, ಪ್ರೋತ್ಸಾಹಗಳು, ಸಾಲ ಸೌಲಭ್ಯ ಹಾಗೂ ಸಹಾಯಧನದಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು, ಅಂತಹವುಗಳನ್ನು ಬಳಸಿಕೊಂಡು ಯುವಕ-ಯುವತಿಯರು ಕೈಗಾರಿಕೆ ಸ್ಥಾಪಿಸುವಲ್ಲಿ ಒಲವು ತೋರಿಸಬೇಕು ಎಂದರು ಹೇಳಿದರು.
ಮೊಳಕಾಲೂರು ರೇಷ್ಮೆ ಸೀರೆಗಳು ವಿಶಿಷ್ಟ ವಿನ್ಯಾಸಗಳನ್ನು ಹೊಂದಿದ್ದು, ವಿಶೇಷತೆ ಅಂದರೆ ಈ ಸೀರೆಗಳು ದೀರ್ಘ ಬಾಳಿಕೆ ಮತ್ತು ಗಟ್ಟಿ ಬಣ್ಣಗಳಿಗೆ ಹೆಸರುವಾಸಿಯಾಗಿದೆ. ಬನಾರಸ್, ಕಾಂಚೀಪುರಂ ಮತ್ತು ಧರ್ಮಾವರಂ ಸೀರೆಗಳಿಗೆ ಇದು ಪ್ರಬಲ ಸ್ಪರ್ಧೆ ನೀಡುತ್ತಿದೆ. ಅಲ್ಲದೇ ಮೊಳಕಾಲ್ಮರು ರೇಷ್ಮೆ ಸೀರೆಗಳಿಗೆ ರಾಷ್ಟ್ರೀಯ ಪುರಸ್ಕಾರಗಳ ಮನ್ನಣೆ ದೊರೆತಿದೆ. ಪಟ್ಟಣದ ನೇಕಾರರಾದ ರಮೇಶ್ ವಾಂದ್ರೆಯವರಿಗೆ ಕೈಮಗ್ಗ, ರೇಷ್ಮೆ ಸೀರೆಗಳ ಪಾರಂಪರಿಕ ನೈಯ್ಗೆಯಲ್ಲಿನ ನೈಪುಣ್ಯತೆ ಗುರುತಿಸಿ, 2015ರ ಅಂತರಾಷ್ಟ್ರೀಯ ಕೈಮಗ್ಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೇಂದ್ರದ ಜವಳಿ ಇಲಾಖೆ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿದೆ ಎಂದರು.
ಕರ್ನಾಟಕ ತಾಂತ್ರಿಕ ಸಲಹಾ ಸೇವಾ ಸಂಸ್ಥೆ ಸಿಇಒ ಸಿದ್ಧರಾಜು ಮಾತನಾಡಿ, ಕೈಗಾರಿಕಾ ಕ್ರಾಂತಿಯು 18 ಮತ್ತು 19ನೇ ಶತಮಾನದಲ್ಲಿ ಸಂಭವಿಸಿದೆ. ಅಂತಹ ಶತಮಾನದಿಂದ ಬೆಳೆದು ಬಂದಿರುವ ಮೊಳಕಾಲ್ಮುರು ರೇಷ್ಮೆ ಸೀರೆ ಉದ್ಯಮದ ಬಗ್ಗೆ, ನಾವೆಲ್ಲರೂ ಹೆಮ್ಮೆ ಪಡುವಂತಹ ವಿಷಯ. ಆ ಅವಧಿಯಲ್ಲಿ ಕೃಷಿ ಉತ್ಪಾಧನೆ, ಗಣಿಗಾರಿಕೆ ಮತ್ತು ಸಾರಿಗೆಯಲ್ಲಿ ಪ್ರಮುಖ ಬದಲಾವಣೆಗಳಿಂದ ಸಮಾಜಿಕ ಆರ್ಥಿಕ ಮತ್ತು ಸಾಂಸ್ಕøತಿಕ ಸ್ಥಿತಿಗತಿಗಳ ಮೇಲೆ ಗಾಢ ಪರಿಣಾಮ ಬೀರಿತು. ಯುನೈಟೆಡ್ ಕಿಂಗಡಮ್‍ನಲ್ಲಿ ಪ್ರಾರಂಭವಾದ ಕೈಗಾರಿಕಾ ಕ್ರಾಂತಿ ತರುವಾಯ ವಿಶ್ವದೆಲ್ಲೆಡೆ ಹರಡಿತು. ಕೈಗಾರಿಕಾ ಕ್ರಾಂತಿಯ ಪ್ರಾರಂಭವು ಮಾನವ ಇತಿಹಾಸದಲ್ಲಿ ಪ್ರಮುಖ ತಿರುವು ಎಂದು ಗುರುತಿಸಲಾಗಿದೆ. ಬಹುತೇಕರ ಜನಜೀವನದ ಪ್ರತಿಯೊಂದು ಅಂಶದ ಮೇಲೆ ಅಂತಿಮವಾಗಿ ಕೆಲವು ರೀತಿಯಲ್ಲಿ ಪ್ರಭಾವ ಬೀರಿದೆ. ಈಗ 21ನೇ ಶತಮಾನದಲ್ಲಿರುವ ನಾವುಗಳು ಕಾಲಕ್ಕೆ ತಕ್ಕಂತೆ ಬದಲಾಗಬೇಕಾಗುತ್ತದೆ. ಹೊಸ ಹೊಸ ತಂತ್ರಜ್ಞಾನ ಅವಿಷ್ಕರಿತ ಎಐ ನಂತಹ ತಂತ್ರಜ್ಞಾನ ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ಆಧುನೀಕರಣ ತಂತ್ರಜ್ಞಾನವನ್ನು ಸಂಪ್ರದಾಯಕ ಕುಶಲತೆಯನ್ನು ಮರೆಯಾಗದಂತೆ ಬಳಸಿಕೊಳ್ಳಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಮೊಳಕಾಲ್ಮುರು ಸಿಲ್ಕ್ ಸಿಟಿ ಟೆಕ್ಸ್‍ಟೈಲ್ ಪೌಂಡೇಷನ್ ಅಧ್ಯಕ್ಷ ಕಿರಣ್ ಗಾಯಕ್ವಾಡ್, ಡೈರೆಕ್ಟರ್ ಯುನಿವರ್ಸಲ್ ಗ್ರೂಪ್‍ನ ಉಪನ್ಯಾಸಕರಾದ ಕಣ್ಣನ್ ಕೃಷ್ಣಮೂರ್ತಿ, ವೆಂಕಟೇಶ್ ಗೌಡ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.