September 15, 2025
IMG-20241128-WA0183.jpg

ವರದಿ: ಕೆ.ಟಿ.ಮೋಹನ್ ಕುಮಾರ್

ಸಾಲಿಗ್ರಾಮ (ಮೈಸೂರು ಜಿಲ್ಲೆ): ತಂದ್ರೆಕೊಪ್ಪಲು ಗ್ರಾಮದಿಂದ ಕುಪ್ಪಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ ಮೂರುವರೆ ಕೋಟಿ ರೂ ಅನುದಾನವನ್ನು ನೀಡಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಅವರು ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಬಿಎಂಸಿ ಕಟ್ಟಡವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಹಾಸನ – ಮೈಸೂರು ಮುಖ್ಯ ರಸ್ತೆಯ ಮುಂಜನಹಳ್ಳಿ ಗ್ರಾಮದಿಂದ ಮುದುಗುಪ್ಪೆ, ಕುಪ್ಪಹಳ್ಳಿ, ತಂದ್ರೆ ಅಂಕನಹಳ್ಳಿ ಗ್ರಾಮದ ಮಾರ್ಗವಾಗಿ ಸಾಲಿಗ್ರಾಮ – ಹೊಳೆನರಸೀಪುರ ಮುಖ್ಯ ರಸ್ತೆಗೆ ಸಂಪರ್ಕವಾಗುವ ರಸ್ತೆಯ ಅಭಿವೃದ್ಧಿಯನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಮಾಡಲಾಗುವುದು ಎಂದರು.

ಕುಪ್ಪಹಳ್ಳಿ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕಾಗಿದ್ದು ಹಂತ ಹಂತವಾಗಿ ಅವುಗಳನ್ನು ಅನುಷ್ಠಾನ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಯನ್ನು ಮಾಡಲಾಗುವುದು ಎಂದರು.

ಗ್ರಾಮದಲ್ಲಿ ಸರ್ವರು ಒಗ್ಗಟ್ಟಾಗಿದ್ದು ಅಭಿವೃದ್ಧಿ ಕೆಲಸಗಳಿಗೆ ಕೈಜೋಡಿಸಬೇಕು ಆ ಮೂಲಕ ಮಾದರಿ ಗ್ರಾಮದ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

ಹೈನುಗಾರಿಕೆಯನ್ನು ಗ್ರಾಮೀಣ ಪ್ರದೇಶದಲ್ಲಿ ಅತಿ ಹೆಚ್ಚಿನ ಜನರು ಮಾಡುತ್ತಿರುವುದರಿಂದ ಕುಟುಂಬದ ಆರ್ಥಿಕ ಬೆಳವಣಿಗೆ, ಸಾಮಾಜಿಕ ಜಾಗೃತಿ ಹಾಗೂ ಶೈಕ್ಷಣಿಕ ಅಭಿವೃದ್ಧಿಯಾಗುತ್ತಿದೆ ಎಂದರು.

ಅತಿ ಶೀಘ್ರದಲ್ಲೇ ಕ್ಷೇತ್ರದ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ವಿವಿಧ ಇಲಾಖೆಯ ಸಚಿವರುಗಳ ಸಮ್ಮುಖದಲ್ಲಿ ಕೆ.ಆರ್.ನಗರ ಪಟ್ಟಣದಲ್ಲಿ ಬೃಹತ್ ಕಾರ್ಯಕ್ರಮವನ್ನು ಮಾಡುವ ಮೂಲಕ ಚಾಲನೆ ನೀಡಲಾಗುತ್ತದೆ ಎಂದರು.

ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯತೀತವಾಗಿ ಹಾಗೂ ಪಕ್ಷಾತೀತವಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಮೈಮುಲ್ ಅಧ್ಯಕ್ಷ ಆರ್.ಚಲುವರಾಜ್ ಮಾತನಾಡಿ ಹಾಲು ಉತ್ಪಾದಕರುಗಳಿಗೆ ರಾಜ್ಯದಲ್ಲೇ ಅತಿ ಹೆಚ್ಚಿನ ದರವನ್ನು ನೀಡುತ್ತಿರುವುದು ಮೈಸೂರು ಹಾಲು ಒಕ್ಕೂಟದಲ್ಲಿ ಮಾತ್ರ ಎಂದರು.

ನಂದಿನಿ ಉತ್ಪನ್ನಗಳು ಹೊರದೇಶ ಮತ್ತು ಹೊರ ರಾಜ್ಯಗಳಲ್ಲೂ ಮಾರಾಟವಾಗುತ್ತಿವೆ. ಸಾರ್ವಜನಿಕರು ದಿನನಿತ್ಯ ತಮ್ಮ ಮನೆಗಳಲ್ಲಿ ನಂದಿನಿ ಉತ್ಪನ್ನಗಳನ್ನು ಬಳಸಬೇಕು ಅದಕ್ಕಾಗಿ ಅಂಗಡಿಗಳಲ್ಲಿ ನಂದಿನಿ ಉತ್ಪನ್ನಗಳನ್ನು ಕೇಳಿ ಪಡೆಯಬೇಕು ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘದ ಬೆಳವಣಿಗೆಯ ಜೊತೆಗೆ ಹಾಲು ಉತ್ಪಾದಕರುಗಳು ಅಭಿವೃದ್ಧಿಯಾಗಬೇಕು ಎಂದರು.

ಸಮಾರಂಭದಲ್ಲಿ ಮೈಮುಲ್ ನಿರ್ದೇಶಕರುಗಳಾದ
ಎ.ಟಿ.ಸೋಮಶೇಖರ್, ಸದಾನಂದ, ಮಹೇಶ್, ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯಕ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಉದಯಶಂಕರ್, ಸಂಘದ ಅಧ್ಯಕ್ಷ ಅಶೋಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ, ಮೈಮುಲ್ ವ್ಯವಸ್ಥಾಪಕ ಕರಿಬಸವರಾಜು, ಉಪ ವ್ಯವಸ್ಥಾಪಕ ಸಂತೋಷ್, ಸಹಾಯಕ ವ್ಯವಸ್ಥಾಪಕ ಪ್ರವೀಣ್ ಪತ್ತಾರ್, ಮಾರ್ಗ ವಿಸ್ತರಣಾಧಿಕಾರಿಗಳಾದ ವರಲಕ್ಷ್ಮಿ ನೇಮಿನಾಥ ಮಾಕಣಿ, ಹಾಲಿನ ಡೇರಿಗಳ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಿ.ಕೆ.ಮಹದೇವ, ಉಪಾಧ್ಯಕ್ಷ ದಿನೇಶ್, ಡೇರಿಯ ಉಪಾಧ್ಯಕ್ಷ ಘನಕುಮಾರ, ನಿರ್ದೇಶಕರುಗಳಾದ ರಾಜೇಗೌಡ, ಕೆ.ಮಹದೇವಶೆಟ್ಟಿ, ಕುಮಾರ ಮಂಜುಳಾಬಾಯಿ, ಸುಮತಿ, ಮಹದೇವಶೆಟ್ಟಿ,
ಕೆ.ವಿ.ಚಂದ್ರನಾಯಕ, ಸಿಇಓ ಕೆ.ಎಂ.ಜಗನ್ನಾಥ್, ಹಾಲು ಪರೀಕ್ಷಕಿ ಗೌರಮ್ಮ, ಮುಖಂಡರುಗಳಾದ ಸಂಪತ್ ಕುಮಾರ್, ಮಹದೇವ, ಧರ್ಮ, ದಿಲೀಪ, ಬಸವರಾಜು, ಗೋವಿಂದೇಗೌಡ, ಪ್ರಕಾಶ್, ವೆಂಕಟರಾಮು,
ಹಳ್ಳಿಮೇಷ್ಟ್ರು, ರಮೇಶ್, ಸುಂದರ, ರಂಗಪ್ಪ, ಪ್ರತಾಪ್, ಜಗ, ಪಿಡಿಒ ಮಹದೇವ್ ಸೇರಿದಂತೆ ಹಲವರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading