September 15, 2025
FB_IMG_1732805184738.jpg


ಮೊಳಕಾಲ್ಮೂರು ನ.28:
ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಜನಪರ ಯೋಜನೆಗಳನ್ನು ಪರಿಚಯಿಸಿದ್ದು, ಜನಸಾಮಾನ್ಯರು ಈ ಎಲ್ಲಾ ಯೋಜನೆಗಳ ಅನುಕೂಲತೆ ಪಡೆದುಕೊಳ್ಳಬೇಕು ಎಂದು ರಾಂಪುರ ಎಸ್‍ಪಿಎಸ್‍ಆರ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಎಚ್.ಎ. ರಾಜು ಹೇಳಿದರು.
ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಎಸ್‍ಪಿಎಸ್‍ಆರ್ ಪದವಿ ಪೂರ್ವ ಕಾಲೇಜಿನಲ್ಲಿ ಬಳ್ಳಾರಿಯ ಕೇಂದ್ರ ಸಂವಹನ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ನೀಡುವ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಗ್ರಾಮೀಣ ಭಾಗಗಳಿಗೆ ತಲುಪಿಸುವ ಅಗತ್ಯವಿದೆ. ಹಳ್ಳಿಗಳ ಜನರು ಕೇಂದ್ರ ಸರ್ಕಾರದ ಕೃಷಿ ಪಿಂಚಣಿ ಹಾಗೂ ವಿಮಾ ಯೋಜನೆಗಳ ಅನುಕೂಲತೆಗಳನ್ನು ಪಡೆಯಬೇಕು. ಆರೋಗ್ಯ ರಕ್ಷಣೆಗಾಗಿ ಪರಿಚಯಿಸುವ ಆಯುಷ್ಮಾನ್ ಭಾರತ್ ಯೋಜನಾ ಅನುಕೂಲವನ್ನು 70 ವರ್ಷದ ವಯೋಮಾನದವರಿಗೂ ವಿಸ್ತರಿಸಲಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗಾಗಿ ಹಲವಾರು ಉತ್ತಮ ಯೋಜನೆಗಳಿವೆ ಎಂದರು.
ಕೆ.ಪಿ.ಟಿ.ಸಿ.ಎಲ್ ಸಹಾಯಕ ಅಭಿಯಂತರ ಹನುಮಂತ್ ರೆಡ್ಡಿ ಮಾತನಾಡಿ, ಸೂರ್ಯಘರ್ ಯೋಜನೆ ಅಡಿ ಗ್ರಾಮೀಣ ಭಾಗಗಳ ಜನರು ಸೋಲಾರ್ ಅಳವಡಿಸಿ ಉಳಿತಾಯ ಮಾಡಬಹುದು ಅವರು ಹೇಳಿದರು.
ರಾಂಪುರ ಪದವಿ ಪೂರ್ವ ಕಾಲೇಜಿನ ಪೂರ್ವ ಕಾಲೇಜಿನ ಪ್ರಾಚಾರ್ಯರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತರಾದ ಡಾ.ತಿಮ್ಮಣ್ಣ ಮಾತನಾಡಿ, ಸರ್ಕಾರದ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಗುರುಸಿದ್ದಪ್ಪ ಅವರು ಸಂವಿಧಾನ ಮತ್ತು ರಾಷ್ಟ್ರೀಐ ಏಕತಾ ದಿವಸ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಕಲಾ ತಂಡದವರಿಂದ ಜಾನಪದ ಗೀತೆಗಳು, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಬೋರಯ್ಯ, ಸುಂದರಮೂರ್ತಿ, ಭೀಮಸೇನಾ, ವಿಶಾಲಾಕ್ಷ ಮತ್ತಿತರರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading