September 15, 2025
IMG-20241128-WA0230.jpg

ನಾಯಕನಹಟ್ಟಿ : ಐತಿಹಾಸಿಕ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಕಟ್ಟಿಸಿದಂತಹ ದೊಡ್ಡಕೆರೆ ಕೋಡಿ ಬಿದ್ದಿದ್ದು ಶಾಸಕ ಎನ್.ವೈ.ಗೋಪಾಲಕೃಷ್ಣ ಗುರುವಾರ ಭಾಗಿನ ಅರ್ಪಿಸಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಭಾಗಿನ ಅರ್ಪಿಸುವುದಕ್ಕೆ ನನ್ನನ್ನು ಆಹ್ವಾನ ನೀಡಿದ ನಾಯಕನಹಟ್ಟಿ ಪಟ್ಟಣದ ಗ್ರಾಮಸ್ಥರಿಗೆ, ದೈವಸ್ಥರಿಗೆ ಅಭಿನಂದನಗೆಳನ್ನು ಸಲ್ಲಿಸುತ್ತೇನೆ ಎಂದರು.

ನಾನು ಶಾಸಕನಾದ ಸಂದರ್ಭದಲ್ಲಿ ತೆಪ್ಪೋತ್ಸವಕ್ಕೆ ಭಾಗಿಯಾಗಿದ್ದೆ, ನನ್ನ ಕಾಲದಲ್ಲಿ ಕೆರೆ ತುಂಬಿದ್ದು ವಿಜೃಂಭಣೆಯಿAದ ಅಚರಿಸಿದ್ದರು.
ಅಕ್ಕ-ಪಕ್ಕದ ಎಲ್ಲಾ ಹಳ್ಳಿಗಳೂ ಸೇರಿ ಈಗ ಕೂಡ ದೊಡ್ಡಕೆರೆ ಹಾಗೂ ಚಿಕ್ಕಕೆರೆ ತುಂಬಿ ಕೋಡಿ ಬಿದ್ದಿದ್ದು ತೆಪ್ಪೋತ್ಸವನ್ನು ಜರುಗಿಸಬೇಕಿತ್ತು. ಕಾರ್ತಿಕೋತ್ಸವ ಇರುವುದರಿಂದ ತೆಪ್ಪೋತ್ಸವ ಮಾಡುತ್ತಿಲ್ಲ. ಎಲ್ಲಾ ಕೆರೆಗಳು ತುಂಬಿದ ಮೇಲೆ ಭಾಗಿನ ಅರ್ಪಿಸುವುದು ವಾಡಿಕೆ. ಈಗ ತಾನೆ ಭಾಗಿನ ಅರ್ಪಿಸಿದ್ದೇವೆ. ನಾವೆಲ್ಲರೂ ಸೇರಿ ಗಂಗಮ್ಮನ ಪಾತ್ರಕ್ಕೆ ಭಾಗಿನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ತೆಪ್ಪೊತ್ಸವವನ್ನು ಹಿರಿಯರು, ಗ್ರಾಮಸ್ಥರು ಸೇರಿ ತೀರ್ಮಾನ ತೆಗೆದುಕೊಂಡು ಯಾವ ದಿನಾಂಕದೊAದು ತೆಪ್ಪೋತ್ಸವ ಜರುಗಿಸಬೇಕೆಂದು ಚರ್ಚಿಸಿ ಆ ದಿನ ತೆಪ್ಪೋತ್ಸವವನ್ನು ಜರುಗಿಸಲಾಗುವುದು ಎಂದರು.

ಇನ್ನೂ ಬೋಸೆದೇವರಹಟ್ಟಿ ರಸ್ತೆಯ ಸೇತುವೆ ಕೊಚ್ಚಿಕೊಂಡು ಹೋಗಿದ್ದು ಮಳೆ ಬಂದ ದಿನಗಳಲ್ಲಿ ಜನರಿಗೆ, ರೈತರು, ಸಾರ್ವಜನಿಕರು ಆ ರಸ್ತೆಯಲ್ಲಿ ಓಡಾಡುವುಕ್ಕೆ ಬಹಳ ತೊಂದರೆಯಾಗಿದೆ. ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಅಧಿಕಾರಿಗಳ ಹತ್ತಿರ ಚರ್ಚಿಸಿ ತುರ್ತಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಕೆಲಸ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಪ.ಪಂ ಅಧ್ಯಕ್ಷೆ ಮಂಜುಳ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಪ.ಪಂ ಸದಸ್ಯ ಕೆ.ಪಿ.ತಿಪ್ಪೇಸ್ವಾಮಿ, ವಿನುತಾ, ಜೆ.ಆರ್.ರವಿಕುಮಾರ್, ಮಾಜಿ ಗ್ರಾ.ಪಂ ಸದಸ್ಯ ಆರ್.ಶ್ರೀಕಾಂತ್, ಮಾಜಿ ಪ.ಪಂ ಸದಸ್ಯ ಮತ್ತು ವಕೀಲರಾದ ಉಮಾಪತಿ, ಪ.ಪಂ ಮುಖ್ಯಾಧಿಕಾರಿ ಓ.ಶ್ರೀನಿವಾಸ್, ತಳಕು ಮತ್ತು ನಾಯಕಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಕಾಂಗ್ರೆಸ್ ಮುಖಂಡ ನೇರಲಗುಂಟೆ ಸೂರನಾಯಕ, ಬಗರ್‌ಹುಕ್ಕಂ ಕಮಿಟಿ ಸದಸ್ಯ ಪಿ .ಜಿ. ಬೋರನಾಯಕ, ತೊರೆಕೋಲಮ್ಮನಹಳ್ಳಿ ಆರ್.ಬಸಪ್ಪ, ಪ್ರಭುಸ್ವಾಮಿ, ಮಾಜಿ ಗ್ರಾ.ಪಂ ಅಧ್ಯಕ್ಷ ರಂಗಪ್ಪ, ದೇವಸ್ಥಾನದ ಮಾಜಿ ಅಧ್ಯಕ್ಷ ರವಿಶಂಕರ್, ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಬಿ.ಮುದಿಯಪ್ಪ, ಮಾಜಿ ಗ್ರಾ.ಪಂ.ಅಧ್ಯಕ್ಷ ಬಂಡೆಕಪಿಲೆ ಓಬಣ್ಣ, ತಿಮ್ಮಪ್ಪಯ್ಯನಹಳ್ಳಿ ಪ್ರಕಾಶ್, ಪ.ಪಂ. ಪಕ್ಷೇತರ ಅಭ್ಯರ್ಥಿ ಜಾಗನೂರಹಟ್ಟಿ ಮಂಜುನಾಥ, ದೇವಸ್ಥಾನದ ಸಿಬ್ಬಂದಿ ಸತೀಶ್, ಜಾಗನೂರಹಟ್ಟಿ ಮುತ್ತಯ್ಯ, ಮಾಜಿ ಪ.ಪಂ ಸದಸ್ಯ ಟಿ.ಬಸಪ್ಪ ನಾಯಕ, ದೇವಸ್ಥಾನದ ಅರ್ಚಕರಾದ ಮಹಂತೇಶ್, ದಿವಾಕರ್, ಬಾಲೆಹಳ್ಳಿ ತಿಪ್ಪೇಸ್ವಾಮಿ, ನಾಯಕನಹಟ್ಟಿ ಪೊಲೀಸ್ ಠಾಣೆಯ ಪಿಎಸ್ಐ ದೇವರಾಜ್ ,ಹಾಗೂ ಸಿಬ್ಬಂದಿಗಳು, ನಾಯಕನಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ದೈವಸ್ಥರು, ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading