
ಚಳ್ಳಕೆರೆ
ಇತ್ತೀಚಿನ ದಿನಮಾನಗಳಲ್ಲಿ ಬಾಲ್ಯ ವಿವಾಹ ಪದ್ಧತಿ, ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ಮೂರು ಹಾಗೂ ಚಳ್ಳಕೆರೆಯಲ್ಲಿ ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿದೆ ಇದನ್ನು ತಡೆಗಟ್ಟಲು ಇಂದಿನ ಯುವ ಪೀಳಿಗೆ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಮೀರ್ P ನಂದ್ಯಾಳ್ ಮಕ್ಕಳಿಗೆ ಕಿವಿ ಮಾತು ಹೇಳಿದರು,
ಇವರು ನಗರದ ಚಿನ್ಮಯ್ ಪಬ್ಲಿಕ್ ಶಾಲೆಯ ತಾಲೂಕು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಯೋಗದೊಂದಿಗೆ ಬಾಲ್ಯ ವಿವಾ ಪದ್ಧತಿಯ ನಿರ್ಮೂಲನೆ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು ,

ಪ್ರಸ್ತುತ ದಿನಮಾನಗಳಲ್ಲಿ ಮೌಢ್ಯತೆಯ ಆಧಾರದ ಮೇಲೆ ಇಂದಿನ ಜನಸಾಮಾನ್ಯರು ಬಾಲ್ಯ ವಿವಾಹವನ್ನು ಮಾಡುತ್ತಿದ್ದಾರೆ ಇದು ಕಾನೂನಿನ ಪ್ರಕಾರ ಘೋರ ಅಪರಾಧವಾಗಿರುತ್ತದೆ ಹೆಣ್ಣು ಮಗುವಿಗೆ 18 ವರ್ಷದ ಒಳಗೆ ಗಂಡು ಮಕ್ಕಳಿಗೆ 21ರ ಒಳಗೆ ಮದುವೆ ಮಾಡಿಸಿದರೆ ಬಾಲ್ಯ ವಿವಾಹ ವಾಗುತ್ತದೆ ಈ ಹಿನ್ನೆಲೆಯಲ್ಲಿ ಇಂದಿನ ಯುವ ಪೀಳಿಗೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗಿ ತಮ್ಮ ಆತ್ಮಸ್ಥೈರ್ಯ ಜೀವನದ ನಿರಾಶದಾಯಕವಾಗಿ ಮಾನಸಿಕ ಅಸ್ವಸ್ಥರಾಗುತ್ತಾರೆ, ಅಲ್ಲದೆ ಅಪ್ರಾಪ್ತರು ಮದುವೆಯಾಗಿ ಮಕ್ಕಳಾದರೆ ಮಕ್ಕಳ ಬೆಳವಣಿಗೆ ಕೂಡ ಕುಂಠಿತಗೊಳ್ಳುತ್ತದೆ ಅಲ್ಲದೆ ಚಿಕ್ಕ ವಯಸ್ಸಿನಲ್ಲಿ ವಿವಾಹ ಆದ ಸಂದರ್ಭದಲ್ಲಿ ಗಂಡ ಹೆಂಡರ ಮಧ್ಯೆ ವಿರಸ ಉಂಟಾಗಿ ಡೈವರ್ ಆಗುವಂತಹ ಸಾಧ್ಯತೆ ಇರುತ್ತದೆ ಈ ಕಾರಣದಿಂದಾಗಿ ಇಂದಿನ ಮಕ್ಕಳು ಎಲ್ಲಿ ಬಾಲ್ಯ ವಿವಾಹ ನಡೆಯುತ್ತದೆಯೋ ಅಲ್ಲಿಂದ 10 2 ಹಾಗೂ 1098 ಸಂಖ್ಯೆಗೆ ಫೋನ್ ಮುಖಾಂತರ ತಿಳಿಸಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿ ಇಟ್ಟು ಯಾವ ಚೌಟೆರಿಯಲ್ಲಿ ಮದುವೆ ಆಗುತ್ತದೆ ತಿಳಿಸಿ ಸಂಬಂಧಪಟ್ಟ ಅಧಿಕಾರಿಗಳು ದಾಳಿ ಮಾಡಿ ಮದುವೆ ನಿಲ್ಲಿಸುತ್ತಾರೆ ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಯುವಕರು ಬಾಲ್ಯ ವಿವಾಹ ಪದ್ದತಿಯನ್ನು ನಿರ್ಮೂಲನೆ ಗೊಳಿಸುವಲ್ಲಿ ಮುಂದಾಗಬೇಕು ಎಂದು ಮಕ್ಕಳಿಗೆ ತಿಳಿಸಿದರು
ಇನ್ನು ಈ ವೇಳೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್ಆರ್ ಹೇಮ ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಮಾತನಾಡಿದರು
ಇನ್ನು ಈ ವೇಳೆ ವಕೀಲರಾದ ಎಮ್ ಸಿದ್ದರಾಜು, ಬಿ ಪಾಲಯ್ಯ, ರುದ್ರಯ್ಯ, ಮಾರುತಿ, ಸುಭ ಲೋಕೇಶ್, ಸೇರಿದಂತೆ ಇತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.