ನಾಯಕನಹಟ್ಟಿ :ಅ.28. ಸೋಮವಾರ ಪಟ್ಟಣದ ಐತಿಹಾಸಿಕ ಕ್ಷೇತ್ರವಾದ ಶ್ರೀಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದಂತಹ ಚಿಕ್ಕಕೆರೆಗೆ ಎರಡನೇ ಬಾರಿಗೆ ಮೊಳಕಾಲ್ಮೂರು ಜನಪ್ರಿಯ ಶಾಸಕ ಎನ್.ವೈ. ಗೋಪಾಲಕೃಷ್ಣ ರವರು ಬಾಗಿನ ಅರ್ಪಿಸಿದರು.
ಈ ವೇಳೆ ಮಾತಾನಾಡಿದ ಅವರು ಹಿರೇಮಲ್ಲನಹೊಳೆಯಿಂದ ಏತ ನೀರಾವರಿ ಯೋಜನೆ ಮೂಲಕ ಚಿಕ್ಕಕೆರೆ ಹಾಗೂ ಗುಂತಕೊಲಮ್ಮನಹಳ್ಳಿ, ರೇಖಲಗರೆ, ರಾಮಸಾಗರ, ಕೋಡಿಹಳ್ಳಿ ಮತ್ತು ತಳಕು ಸುತ್ತಮುತ್ತ ಇರುವ ಕೆರೆಗಳಿಗೆ ಸುಮಾರು ೫ ಕೋಟಿ ವೆಚ್ಚದಲ್ಲಿ ನೀರು ಒದಗಿಸುವ ಕಾಮಗಾರಿ ನಡೆಯುತಿದ್ದು ಅರ್ಧಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.ಚಿಕ್ಕಕೆರೆ ಕೋಡಿನೀರು ಹರಿಯುವ ಸ್ಥಳ ಪರಿಶೀಲನೆ ನಡೆಸಿ ಕೋಡಿ ನೀರು ಹರಿಯುವ ಸ್ಥಳದಲ್ಲಿ ಕಾಲುವೆ ನಿರ್ಮಿಸಲು ಸುಮಾರು ೪೫ ಲಕ್ಷÀ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಇನ್ನೂ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿ ಹಾಗೂ ರಾಜ್ಯ ರೈತ ಸಂಘ ಹಸಿರು ಸೇನೆ ಸದಸ್ಯರಿಂದ ಹೋಬಳಿ ಸುತ್ತಲು ಇರುವ ಕೆರೆಗಳಿಗೆ ಕಾಲುವೆ ನಿರ್ಮಿಸಲು ಸರ್ಕಾರಕ್ಕೆ ಶಾಸಕರ ಮುಖಾಂತರ ಮನವಿ ಪತ್ರವನ್ನು ಸಲ್ಲಿಸಿದರು. ಮನಮೈನಹಟ್ಟಿ ಮೂಲಕ ಹಾದು ಹೋಗಿರುವ ಅರಬಾವಿ ಚಳ್ಳಕೆರೆ ರಸ್ತೆಯಲ್ಲಿನ ಸೇತುವೆ ಹಾಗೂ ಮಾಳಪ್ಪನಹಟ್ಟಿ ರಸ್ತೆಯಲ್ಲಿನ ಸೇತುವೆ ನಿರ್ಮಾಣ ಕಾಮಗಾರಿಯನ್ನು ಅದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಸದಸ್ಯರಾದ ಸೈಯದ್ ಅನ್ವರ್, ಜೆ ಆರ್ ರವಿಕುಮಾರ್ ,ಟಿ. ಮಹೇಶ್ವರಿ ಕೆ.ಓ. ರಾಜಯ್ಯ, ಶ್ರೀಮತಿ ಸುನಿತಾ ಜಿ.ಬಿ ಮುದಿಯಪ್ಪ, ಪಾಪಮ್ಮ, ಅಬಕಾರಿ ತಿಪ್ಪೇಸ್ವಾಮಿ ,ಪಿ.ಓಬಯ್ಯ ದಾಸ್ ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಟಿ ಬಸಪ್ಪ ನಾಯಕ.

ಪ.ಪಂ.ಮುಖ್ಯ ಅಧಿಕಾರಿ ಓ.ಶ್ರೀನಿವಾಸ್, ಕೆ.ಪಿ.ಸಿ.ಸಿ ರಾಜ್ಯ ಸಂಚಾಲಕರು ಹೀರೆಹಳ್ಳಿ ಮಲ್ಲೇಶ್, ಹೋಬಳಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಮುದಿಯಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಾಲರಾಜ್, ಕಾಂಗ್ರೇಸ್ ಮುಖಂಡ ಪ್ರಭುಸ್ವಾಮಿ, ನೇರಲಗುಂಟೆ ಸೂರನಾಯಕ, ಬಂಡೆ ಕಪಿಲೆ ಓಬಣ್ಣ,ಸಹಾಯಕ ಕಾರ್ಯನಿರ್ವಾಹಕರಾದ ರಮೇಶ್, ಮಾಜಿ ಗ್ರಾ ಪಂ. ಸದಸ್ಯ ಶ್ರೀಕಾಂತ್, ವಕೀಲ ಉಮಾಪತಿ, ಕರವೇ ಹೋಬಳಿ ಅಧ್ಯಕ್ಷ ಪಿ.ಮುತ್ತಯ್ಯ, ಉಪಾಧ್ಯಕ್ಷ ರಾಘವೇಂದ್ರ, ರಾಜ್ಯ ರೈತ ಸಂಘ ಹಸಿರು ಸೇನೆ ಹೋಬಳಿ ಅಧ್ಯಕ್ಷ ನಾಗರಾಜ್ ಮೀಸೆ, ಜಾಕೀರ್‌ಹುಸೇನ್, ರಾಮಸಾಗರ ಕಾಟಯ್ಯ, ಶಾಸಕರ ಆಪ್ತಕಾರ್ಯದರ್ಶಿ ಶ್ರೀಕಾಂತ್, ಪೋಲಿಸ್ ನಿರೀಕ್ಷಕರಾದ ಹನುಮಂತಪ್ಪ ಎಸ್ ಶಿರೇಹಳ್ಳಿ, ಪಿ.ಎಸ್.ಐ. ದೇವರಾಜ್, ಶಿವಕುಮಾರ್, ತಳಕು ಪಿ.ಎಸ್.ಐ.ಲೊಕೇಶ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್ ಗಂಗಾಧರಪ್ಪ, ಬಂಗಾರಪ್ಪ, ದಾಸೋಹ ಸಹಾಯಕರಾದ ಸತೀಶ್, ಮಲ್ಲೂರಹಳ್ಳಿ ಕಾಟಯ್ಯ, ಕೆ ಟಿ ನಾಗರಾಜ್, ಗೌಡಗೆರೆ ಟಿ ರಂಗಪ್ಪ , ರೇಖಲಗೆರೆ ಅಶೋಕ್, ನಾಯಕನಹಟ್ಟಿ ಓಬಳೇಶ್, ಗುಂತಕೋಲಮ್ಮನಹಳ್ಳಿ ಕೆ.ಟಿ. ಮಲ್ಲಿಕಾರ್ಜುನ್ ವಕೀಲ ಮಲ್ಲೇಶ್, ಕುಮಾರ್, ಹೀರೆಹಳ್ಳಿ ದುರುಗೇಶ್, ದೇವಸ್ಥಾನ ಸಿಬ್ಬಂದಿವರ್ಗದವರು, ಕಾಂಗ್ರೇಸ್ ಮುಖಂಡರು, ಪಟ್ಟಣ ಪಂಚಾಯಿತಿ ಸಿಬ್ಬಂದಿವರ್ಗದವರು, ಪ.ಪಂ.ಮಾಜಿ ಸದಸ್ಯರು, ಪೌರಕಾರ್ಮಿಕರು, ಪಟ್ಟಣದ ಸಮಸ್ತ ನಾಗರೀಕರು ಹಾಜರಿದ್ದರು.







About The Author
Discover more from JANADHWANI NEWS
Subscribe to get the latest posts sent to your email.