ಚಳ್ಳಕೆರೆ: ನಗರದ ಇತಿಹಾಸ ಪ್ರಸಿದ್ಧ ಪುರಾತನ ಕೆರೆಗಳಲ್ಲಿ ಒಂದಾದ ಕರೆಕಲ್ ಕೆರೆ ವರುಣನ ಕೃಪೆಯಿಂದ ಮೈದುಂಬಿ ಹರಿದು ಕೋಡಿ ಬಿದ್ದ ಹಿನ್ನೆಲೆಯಲ್ಲಿ ತಾಲೂಕಿನ ಆರಾಧ್ಯ ದೈವಗಳಾದ ಚಳ್ಳಕೆರಮ್ಮ ಹಾಗೂ ಉಡುಸಲಮ್ಮ ದೇವತೆಗಳನ್ನು ಉರುಮೆ ಸದ್ದಿನೊಂದಿಗೆ ಕೆರೆಗೆ ಕರೆ ತಂದು ಚಳ್ಳಕೆರಮ್ಮ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಗಂಗಾ ಪೂಜೆ ನೆರವೇರಿಸಿದರು.


































ಈ ವೇಳೆ ಮಾತನಾಡಿದ ಚಳ್ಳಕೆರಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಧರ್ಮದರ್ಶಿ ಗೌಡ್ರು ರಾಮಣ್ಣ ಕರೆಕಲ್ ಕೆರೆ ತಾಲೂಕಿನಲ್ಲಿ ಪ್ರಸಿದ್ಧ ಕೆರೆಯಾಗಿದ್ದು ಈ ಕೆರೆಯು ಸುಮಾರು 56 ವರ್ಷಗಳ ಹಿಂದೆ ತುಂಬಿತ್ತು ಈಗ ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕರೆಕಲ್ ಕೆರೆಯು ತುಂಬಿ ಕೋಡಿ ಬಿದ್ದಿದ್ದು ತಾಲೂಕಿನ ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ತುಂಬಾ ಸಂತೋಷದಾಯಕ ವಿಷಯವಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ಕರೆಕಲ್ ಕೆರೆಗೆ ದೇವತೆಗಳನ್ನು ಕರೆತಂದು ಗಂಗಾ ಪೂಜೆ ನೆರವೇರಿಸಲಾಗಿದೆ ಮುಂದಿನ ದಿನಗಳಲ್ಲಿ ತಾಲೂಕಿಗೆ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿಯಾಗಲಿ ಎಂಬ ಕಾರಣಕ್ಕೆ ಪೂಜೆ ಸಲ್ಲಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಸೂಜಿ ಮಲ್ಲೇಶ್ವರ ನಗರದ ನಿವಾಸಿ ಜಯಣ್ಣ ಮಾತನಾಡಿ ಕರೆಕಲ್ ಕೆರೆಯು ಕೋಡಿ ಬಿದ್ದಿರುವುದರಿಂದ ಜನ ಜನವಾರುಗಳಿಗೆ ಕುಡಿಯುವ ನೀರಿನ ಅಭಾವ ಮರೆಯಾಗಿದ್ದು ಈ ಕೆರೆ ಕೋಡಿ ಬಿದ್ದು ಸುಮಾರು ಐದು ದಶಕಗಳೇ ಕಳೆದಿದ್ದರಿಂದ ಸಾರ್ವಜನಿಕರಿಗೆ ಇನ್ನಿಲ್ಲದ ಸಂತಸ ಉಂಟಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರಮ್ಮದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಪುರೋಹಿತರು ತಳವಾರ ಸಮುದಾಯದ ಮುಖಂಡರು ಆಯಗಾರರು ನಗರಸಭೆಯ ಹಾಲಿ ಹಾಗೂ ಮಾಜಿ ಸದಸ್ಯರುಗಳು ಸೇರಿದಂತೆ ಭಕ್ತ ವೃಂದ ಹಾಗೂ ಸಾರ್ವಜನಿಕರು ಪೂಜಾ ಕೈಂಕರ್ಯಗಳಿಗೆ ಸಾಕ್ಷಿಯಾದರು.
About The Author
Discover more from JANADHWANI NEWS
Subscribe to get the latest posts sent to your email.