“. ಚಳ್ಳಕೆರೆ:-ನಿತ್ಯ ಬದುಕಿನಲ್ಲಿ ಸತ್ಸಂಗದ ಮಹಿಮೆ ಬಹಳ ದೊಡ್ಡದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಿಂದ “ನವರಾತ್ರಿ”ಯ ಪ್ರಯುಕ್ತ ಲಯನ್ಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಧ್ಯಾನವನ್ನು ನಡೆಸಿಕೊಟ್ಟ ಅವರು “ನವರಾತ್ರಿಯ ಮಹಿಮೆ” ಎಂಬ ವಿಷಯವಾಗಿ ಪ್ರವಚನ ನೀಡುತ್ತ ಮಾತನಾಡಿದರು. ನವರಾತ್ರಿಯಲ್ಲಿ ತಾಯಿಯನ್ನು ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದ ಮಾತೆ,ಕಾತ್ಯಾಯನಿ,ಕಾಲರಾತ್ರಿ,ಮಹಾ ಗೌರಿ,ಸಿದ್ಧಿದಾತ್ರಿಯಾಗಿ ವಿಶೇಷವಾಗಿ ಆರಾಧನೆ ಮಾಡಲಾಗುತ್ತದೆ. ಅಲ್ಲದೆ ಮಹಾಕಾಳಿ, ಮಹಾಲಕ್ಷ್ಮೀ , ಮಹಾಸರಸ್ವತಿಯಾಗಿಯೂ ಪೂಜಿಸಲಾಗುತ್ತದೆ. ವಿಜಯ ದಶಮಿ ಎಂಬುದು ಹತ್ತು ತಲೆಯ ರಾವಣನೆಂಬ ಅಸುರನನ್ನು ಶ್ರೀರಾಮಚಂದ್ರ ಸಂಹರಿಸಿದ ವಿಜಯದ ದಿನವಾಗಿದೆ ಎಂದರು. ಈ ಸತ್ಸಂಗದ ಪ್ರಯುಕ್ತ ನಗರದ ಶ್ರೀಗುರು ಬಸವ ಸಂಗೀತ ಶಾಲೆಯ ಮುಖ್ಯಸ್ಥರಾದ ಶಿವಯೋಗಿ ಮತ್ತು ಶ್ರೀನಿವಾಸ್ ತಂಡದವರಿಂದ ವಿಶೇಷ ಭಜನೆ,ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದಲ್ಲಿ ಸಾಮೂಹಿಕ “ಶ್ರೀದೇವಿಸ್ತುತಿ ಪಾರಾಯಣ” ಮತ್ತು “ವಿಶೇಷ ದೇವಿ ಭಜನೆಗಳ” ಕಾರ್ಯಕ್ರಮ ನಡೆಯಿತು. ಈ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಹೆಚ್ ಲಕ್ಷ್ಮೀದೇವಮ್ಮ, ಗೀತಾ ನಾಗರಾಜ್, ನಾಗಶಯನ ಗೌತಮ್,ಅನುಸೂಯ ರಾಘವೇಂದ್ರ , ಯತೀಶ್ ಎಂ ಸಿದ್ದಾಪುರ,ಪಂಕಜ, ವಿಶಾಲಾಕ್ಷಿ, ಸರ್ವಮಂಗಳಾ ಶಿವಣ್ಣ, ಬಿ.ಟಿ.ಗಂಗಾಂಬಿಕೆ, ಗಿರಿಜಾ,ವಿಜಯಲಕ್ಷ್ಮೀ, ರಾಧಾ, ರಶ್ಮಿ, ನಾಗರತ್ನಮ್ಮ, ವೀರಮ್ಮ, ಮಾಕಂಸ್ ಲಕ್ಷ್ಮೀ,ಸಂಗೀತ, ಕೃಷ್ಣವೇಣಿ, ಕಾಲುವೆಹಳ್ಳಿ ಪಾಲಕ್ಕ, ಮಂಜುಳ, ಅಂಬುಜಾ, ಸೌಮ್ಯ, ಚಿನ್ನಮ್ಮ, ಸುಜಾತಾ ಬಸವರಾಜ್,ಕಲ್ಪನಾ, ಕೆ.ಎಸ್.ವೀಣಾ, ಕವಿತಾ,ಋತಿಕ್, ಸಂತೋಷ್, ಪ್ರೇಮಲೀಲಾ,ಶುಭಾ, ತಿಪ್ಪಮ್ಮ, ವಿಜಯಾಗುರು, ಬಿ.ಎಂ.ಗೀತಾ,ದಿಯಾ, ದಿಶಾ,ರೇವಂತ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಉಪಸ್ಥಿತರಿದ್ದರು.










About The Author
Discover more from JANADHWANI NEWS
Subscribe to get the latest posts sent to your email.