March 15, 2026
IMG-20250928-WA0104.jpg

ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ:: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮಾದಿಗ ಸಮುದಾಯ ಎರಡನೇ ಸ್ಥಾನದಲ್ಲಿದ್ದು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ತಳಿ ಸ್ಥಾಪನೆಗೆ ಬಹುದಿನದ ಕನಸು ನನಸಾಗಲು ಹೋಬಳಿ ಮಟ್ಟದ ನಾಯಕನಹಟ್ಟಿ ಹೋಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಪುತ್ತಳಿ ಸಮಿತಿ ಪದಾಧಿಕಾರಿಗಳ ಆಯ್ಕೆ ಭಾನುವಾರ ಪಟ್ಟಣದ ಪ್ರವಾಸ ಮಂದಿರದಲ್ಲಿ ನಡೆಯಿತು.

ಇದೆ ವೇಳೆ ನಾಯಕನಹಟ್ಟಿ ಹೋಬಳಿಯ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಸಮಿತಿಯ ಪದಾಧಿಕಾರಿಗಳಾದ ಪಟ್ಟಣದ ಎ.ಕೆ.ಕಾಲೋನಿಯ ಯಜಮಾನರಾದ ಗಂಗಣ್ಣ ಶಾಮಿಲ್, ಕುಂದುರ್ಪಿ ಹನುಮಂತಪ್ಪ, ತಿಮ್ಮಣ್ಣ ಚಡಿ, ಮಲ್ಲಣ್ಣ ರಾಮಜ್ಜರ, ತಿಪ್ಪೇಸ್ವಾಮಿ ಕಾಯಿ, ತಿಪ್ಪೇಸ್ವಾಮಿ ಗಾಡಿ, ಬಂಗಾರಪ್ಪ ಕಜ್ಜಿ, ಮಹಾಂತೇಶ್ ಉಳ್ಳಾಗಡ್ಡಿ, ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆಕೊಲಮ್ಮನಹಳ್ಳಿ ಆರ್ ಬಸಪ್ಪ, ಗೌಡಗೆರೆ ಗ್ರಾಮ ಪಂಚಾಯಿತಿ ಎಂ ಎಚ್ ಲಕ್ಷ್ಮಣ್, ನಲಗೇತನಹಟ್ಟಿ ಗ್ರಾಮ ಪಂಚಾಯತಿ ಪಿ, ಪ್ರಕಾಶ್, ನೇರಲಗುಂಟೆ ರುದ್ರಮುನಿಯಪ್ಪ, ಎನ್ ಮಹದೇವಪುರ ಬಸವರಾಜ್, ಎನ್ ದೇವರಹಳ್ಳಿ ನಾಗರಾಜ್, ಮಲ್ಲೂರಹಳ್ಳಿ ಗುರುವಣ್ಣ, ತಿಮ್ಮಪ್ಪಯ್ಯನಹಳ್ಳಿ ಮಂಜಣ್ಣ ಇವರನ್ನು ನಾಯಕನಹಟ್ಟಿ ಹೋಬಳಿಯ ಡಾ.ಬಿ.ಆರ್. ಅಂಬೇಡ್ಕರ್ ಪುತ್ತಳಿ ಸಮಿತಿಯ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಎಂ ಟಿ ಮಂಜುನಾಥ್, ಹೋಬಳಿಯ ವಿವಿಧ ಹಳ್ಳಿಗಳ ದಲಿತ ಮುಖಂಡರಾದ ಮರಿಪಾಲಯ್ಯ, ಮಲೇಬೋರಯ್ಯನಹಟ್ಟಿ ಬಿ ಶಂಕರಸ್ವಾಮಿ, ನಲಗೇತನಹಟ್ಟಿ ಕೆ.ಬಿ. ನಾಗರಾಜ್, ಉಪ್ಪಾರಹಟ್ಟಿ ಜೆ. ಮಲ್ಲಿಕಾರ್ಜುನ ಮಾರುತಿ, ಎಂ. ಬಿ. ಸಣ್ಣ ಬೋರಯ್ಯ, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ನೇಹ ಮಲ್ಲೇಶ್, ನಾಯಕನಹಟ್ಟಿ ಟಿ. ಶಿವದತ್ತ, ಬಸವರಾಜ್, ಅಕ್ಷಯ್, ಚೌಡಪ್ಪ, ಬಿ.ಟಿ. ಶಿವಕುಮಾರ್, ದುರುಗೇಶ್, ತಾರಕೇಶ್, ತಿಪ್ಪೇಸ್ವಾಮಿ, ಎಂ ಹೆಚ್ ಲಕ್ಷ್ಮಣ್, ಕರಿಬಸಪ್ಪ, ಮಲ್ಲೂರಹಟ್ಟಿ, ಮಧು, ರುದ್ರೇಶ್, ತೊರೆಕೋಲಮ್ಮನಹಳ್ಳಿ, ಅಬ್ಬೇನಹಳ್ಳಿ ಎಲ್ಐಸಿ ನಾಗರಾಜ್, ಎನ್ ಮಹದೇವಪುರ, ಓಬಳೇಶ್, ಮಲ್ಲೂರಹಳ್ಳಿ ರಾಜಣ್ಣ,ಎನ್, ದೇವರಹಳ್ಳಿ ರಾಜಣ್ಣ, ವರವು ನಾಗರಾಜ್, ಸೇರಿದಂತೆ ನಾಯಕನಹಟ್ಟಿ ಹೋಬಳಿಯ ಸಮಸ್ತ ಮಾದಿಗ ಸಮುದಾಯದ ಮುಖಂಡರು ಯುವಕರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading