
ನಾಯಕನಹಟ್ಟಿ: ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮದುರ್ಗ ಗ್ರಾಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ರಾಮನಗರ ಸಮಾಜ ಕಾರ್ಯ ವಿಭಾಗದ ವತಿಯಿಂದ 10 ದಿನಗಳ ಕಾಲ ಸಾಮಾಜ ಕಾಯ೯ ಶಿಬಿರವನ್ನ ಚಿತ್ರದುಗ೯ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರಾಮದುಗ೯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತ. ಹತ್ತು ದಿನಗಳ ಸಮಾಜಕಾರ್ಯ ಶಿಬಿರದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ ಡಾ. ಎಸ್. ಎಂ. ಮುತ್ತಯ್ಯ ಮಾನ್ಯ ಸಿಂಡಿಕೇಟ್ ಸದಸ್ಯರು ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಪ್ರಾಧ್ಯಾಪಕರು ಕನ್ನಡ ವಿಭಾಗ ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಇವರು ಮಾತನಾಡುತ್ತಾ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ರಾಮನಗರದ ಸಮಾಜ ಕಾಯ೯ ವಿಭಾಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತುಂಬಾ ಶ್ರಮವಹಿಸಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ನಿಮ್ಮ ಗ್ರಾಮದ ಸಮಸ್ಯೆಗಳನ್ನ ಪಟ್ಟಿ ಮಾಡುತ್ತಿದ್ದಾರೆ ಅವರ ವರದಿಗಳನ್ನು ಆಧರಿಸಿ ಕಿಲಾರಿ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಗ್ರಾಮಸ್ಥರು ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಬಗ್ಗೆ ಗಮನ ಹರಿಸಿ ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳಿಂದಾದರೂ ನಿಮ್ಮ ಕುಟುಂಬದ ಸ್ಥಿತಿಗತಿಗಳನ್ನು ಸುಧಾರಿಸಬಹುದು ಎಂದು ಹೇಳಿದರು.
ಶ್ರೀಮತಿ ವೈಶಾಲಿ ಜಿಲ್ಲಾ ವಿಕಲಚೇತನರ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಚಿತ್ರದುರ್ಗ ಇವರು ಮಾತನಾಡುತ್ತಾ ತಮ್ಮ ಇಲಾಖೆಯ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಹೇಳುತ್ತಾ ಗ್ರಾಮದ ಹಿರಿಯನಾಗರಿಕರು ಮತ್ತು ವಿಕಲಚೇತನರು ನಮ್ಮ ಇಲಾಖೆಯ ಯೋಜನೆಗಳು ಮತ್ತು ಸೌಲಭ್ಯಗಳನ್ನ ಪಡೆದುಕೊಳ್ಳಿ ಎಂದು ಗ್ರಾಮಸ್ಥರಿಗೆ ತಿಳಿಸಿದರು
ಡಾ. ದೇವಿಂದ್ರಪ್ಪ ಎಂ. ಶಿಬಿರದ ಸಂಯೋಜಕರು ಮತ್ತು ಅಧ್ಯಾಪಕರು ಸಮಾಜ ಕಾರ್ಯ ವಿಭಾಗ ಸ್ನಾತಕೋತ್ತರ ಕೇಂದ್ರ ರಾಮನಗರ, ಬೆಂಗಳೂರು ವಿಶ್ವವಿದ್ಯಾಲಯ ಇವರು 10 ದಿನಗಳ ಸಮಾಜ ಕಾರ್ಯ ಶಿಬಿರದದ ಕಾಯ೯ಕ್ರಮಕ್ಕೆ ಆಗಮಿಸಿದ ಎಲ್ಲಾ ಸಂಪ್ನಮ ಮುಲ್ಲಿ ಕೈಗೊಂಡ ಗ್ರಾಮದ ಮನೆಗಳ ಸಮೀಕ್ಷೆ ವರದಿಯನ್ನ ವಿಶ್ಲೇಷಣೆ ಮಾಡಿದರು.
ಡಾ. ರಶ್ಮಿ ಜಿ. ಎಂ. ಶಿಬಿರದ ಸಂಯೋಜಕರು ಮತ್ತು ಅಧ್ಯಾಪಕರು ಸಮಾಜ ಕಾರ್ಯ ವಿಭಾಗ ಸ್ನಾತಕೋತ್ತರ ಕೇಂದ್ರ ಬೆಂಗಳೂರು ವಿಶ್ವವಿದ್ಯಾಲಯ ಇವರು 10 ದಿನಗಳ ಸಮಾಜ ಕಾರ್ಯ ಶಿಬಿರದಲ್ಲಿ ಕಂಡುಕೊಂಡಂತ ಗ್ರಾಮದ ಜನರ ಸಮಸ್ಯೆಗಳು ವೇದಿಕೆಯಲ್ಲಿ ಮಂಡನೆ ಮಾಡುತ್ತಾ ಕಿಲಾರಿ ಸಮುದಾಯದವರಿಗೆ ಮೂಲಭೂತ ಸೌಕರ್ಯಗಳುನ್ನು ಕಲ್ಪಿಸಿ ಕೊಡುವ ಕರಿತು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಾಗ ಅವರು ಶಿಬಿರದ ಐದನೇ ದಿನದಂದು ಶಿಬಿರದ ಕಾರಯ೯ಕ್ರಮಕ್ಕೆ ಆಮಿಸಿ ಸ್ಥಳದಲ್ಲಿಯೇ ತೆಗೆದುಕೊಂಡ ನಿರ್ಧಾರಗಳಾದ ಕೆ. ಎಸ್. ಆರ್. ಟಿ. ವತಿಯಿಂದ ಸಾರಿಗೆ ವ್ಯವಸ್ಥೆಯನ್ನು ರಾಮದುರ್ಗಕ್ಕೆ ಕಲ್ಪಿಸುವುದರ ಬಗ್ಗೆ (ಕೆ. ಎಸ್. ಆರ್. ಟಿ. ಸಿ ಅಧಿಕಾರಿಗಳು ಹಿಗಾಗಲೆ ಗ್ರಾಮಕ್ಕೆ ಬೇಟಿ ನೀಡಿ ಸ್ಥಳ ವಿಕ್ಷಣೆಮಾಡಿಕೂಂಡು ಹೊಗಿದ್ದಾರೆ) ಆರ್. ಓ. ವಾಟರ್ ಪ್ಲಾಂಟ್ನ ಇನ್ನೊಂದು ಅಳವಡಿಸುವುದರ ಬಗ್ಗೆ, ಶಾಲೆಯಲ್ಲಿ ಸುಸ್ಥಿರವಾದಂತಹ ಶೌಚಾಲಯಗಳು ಮತ್ತು ಅಡುಗೆ ಮನೆಯ ನಿಮಾ೯ಣದ ಬಗ್ಗೆ ಮತ್ತು ಗ್ರಾಮಸ್ಥೆರಿಗೆ ಮೂಲಭೂತ ಸೌಕರ್ಯಗಳುನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ನ್ಯಾಯಾಧೀಶರು ಶಿಬಿರದ ವರದಿಯನ್ನ ಸಲ್ಲಿಸುಲು ಶಿಬಿರದ ಸಂಯೋಜಕರಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು
ಶ್ರೀ ಶಿವಪ್ರಕಾಶ್ ಡಿ. ಆರ್. ಪ್ರಸಾದರ ಮುಖ್ಯಸ್ಥರು ಆಕಾಶವಾಣಿ ಚಿತ್ರದುರ್ಗ ಇವರು ಮಾತನಾಡುತ್ತಾ ಸಮುದಾಯದ ಜನರಿಗೆ ಜಾಗೃತಿ ಮೂಡಿಸಲು ಆಕಾಶವಾಣಿಯಲ್ಲಿ ಜನರಿಗೆ ಅಗತ್ಯವಾದ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ ಅವುಗಳನ್ನು ಆಲಿಸುವುದರ ಮೂಲಕ ತಮ್ಮ ಅರಿವು ಮತ್ತು ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಈ ಹತ್ತು ದಿನದ ಶಿಬಿರಗಳಲ್ಲಿ ತಾವು ತಿಳಿದುಕೊಂಡಿರುವ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಜನರಿಗೆ ಕರೆ ಕೊಟ್ಟರು.
ಶ್ರೀ ರಾಜಣ್ಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ನಲಗೇತನಟ್ಟಿ ಇವರು ತಮ್ಮ ಪಂಚಾಯಿತಿಯಿಂದ ದೊರೆಯುವ ಸೌಲಭ್ಯಗಳನ್ನು ಜನರು ಕೇಳಿ ಪಡೆದುಕೊಳ್ಳಬೇಕು ಎಂದು ಜನರಿಗೆ ಕರೆಕೊಟ್ಟರು
ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರಾದ ಶ್ರೀ ಬಂಗಾರಯ್ಯ ಅವರು ಎಲ್ಲಾ ಗ್ರಾಮಸ್ಥರ ಪರವಾಗಿ 10 ದಿನಗಳ ಶಿಬಿರದ ಅನಿಸಿಕೆಗಳನ್ನ ವ್ಯಕ್ತಪಡಿಸಿದರು ಮತ್ತು ಗ್ರಾಮಸ್ಥರು ಪರವಾಗಿ ಶಿಬಿರದ ಸಂಯೋಜಕರಾದ ಡಾ. ದೇವೇಂದ್ರಪ್ಪ ಎಂ ಮತ್ತು ಡಾಕ್ಟರ್ ರಶ್ಮಿ ಜಿಎಂ ಅವರಿಗೆ ಗ್ರಾಮಸ್ಥರಿಂದ ಸನ್ಮಾನವನ್ನು ಮಾಡಿದರು
ಹತ್ತು ದಿನಗಳ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನ ವಹಿಸಿದ ಡಾ. ಬಿ ಗಂಗಾಧರ ಪ್ರಾಧ್ಯಾಪಕರು ಮತ್ತು ನಿರ್ದೇಶಕರು ಸ್ನಾತಕೋತ್ತರ ಕೇಂದ್ರ ರಾಮನಗರ, ಬೆಂಗಳೂರು ವಿಶ್ವವಿದ್ಯಾಲಯ ಇವರು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಹೆಳುತ್ತಾ ಶಿಬಿರದ ಸಂಯೋಜಕರು ಸಾಕಷ್ಟು ಪ್ರಯತ್ನವನ್ನು ಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನ ಕರೆತಂದು ಜಾಗೃತಿ ಮೂಡಿಸಿದ್ದಾರೆ ಈಗಲಾದರೂ ಗ್ರಾಮಸ್ಥರು ಎಚ್ಚೆತ್ತುಕೊಂಡು ನಂಬಿಕೆ, ಆಚಾರ, ವಿಚಾರ ಅವೆಲ್ಲವನ್ನ ಪಕ್ಕಕ್ಕೆ ಸರಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದುರ ಮೂಲಕ ಅವರನ್ನು ಸರ್ಕಾರಿ ಅಧಿಕಾರಿಗಳನ್ನಾಗಿ ಮಾಡಿ ಮಕ್ಕಳಿಗೆ ಡಾ. ಬಿ. ಆರ್. ಅಂಬೇಡ್ಕರ, ಮಹಾತ್ಮ ಗಾಂದಿ ಹೀಗೆ ಗ್ರಾಮದ ಸಮಸ್ಯೆಗಳನ್ನ ನಮ್ಮ ವಿದ್ಯಾರ್ಥಿಗಳು ಸಮೀಕ್ಷೆಯ ಮೂಲಕ ಗುರುತಿಸಿದ್ದಾರೆ ಅವುಗಳನ್ನು ವರದಿಯಾಲ್ಲಿ ಉಲ್ಲೆಖಿಸಿ ಸೂಕ್ತ ಶಿಪಾರಸ್ಸುಗಳನ್ನು ಸರಕಾರಕ್ಕೆ ಮತ್ತು ನಮ್ಮ ಬೆಂಗಳೂರ ವಿವಿಗೆ ಸಲ್ಲಿಸುತೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ನವೀನ ಮಸ್ಕಲ್ ,ಡಾ.ರಶ್ಮಿ ಜಿ.ಎಂ. ಡಾ. ದೇವಿಂದ್ರಪ್ಪ,ಗ್ರಾಮ ಪಂಚಾಯತಿ ನಲಗೇತನಟ್ಟಿ ಸದಸ್ಯರಾದ ಕೆ.ಬಿ ಬೋಸಯ್ಯ, ಚಿದಾನಂದ, ಎತ್ತಿನ ಓಬಯ್ಯ ರಾಮನಗರ ಸ್ನಾತಕೋತ್ತರ ಕೇಂದ್ರದ ಬೋದಕೇತರ ಸಿಬ್ಬಂದಿಯಾದ ಶ್ರೀ ಮಹೇಶ್, ಶ್ರೀ ಕಿರಣ್ ಇತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವದಲ್ಲಿ ಶಿಬಿರಾಥಿ೯ಗಳಾದ ಚೈತ್ರ ವಿ ಮತ್ತು ನಂಜುಂಡಾರಾದ್ಯ ಪ್ರಾಥನೆ ಗೀತೆ ಹಾಡಿದರು, ರಕ್ಷಿತಾ & ಶಿವಾಂದ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು
About The Author
Discover more from JANADHWANI NEWS
Subscribe to get the latest posts sent to your email.