
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ದೇವಸ್ಥಾನದ ಸುಣ್ಣ ಬಣ್ಣ ಉಬ್ಬು ಶಿಲ್ಪಗಳು ಗೋಪುರ ನವೀಕರಣ ಕಾಮಗಾರಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್. ಗಂಗಾಧರಪ್ಪ ಚಾಲನೆ.










ನಾಯಕನಹಟ್ಟಿ:: ಮಾನವನ ಶ್ರಮ ಮತ್ತು ಕಾಯಕ ಬದುಕಿನ ಪ್ರತ್ಯೇಕವಾಗಿ ದೈವಂಶ ಸಂಭೂತರಾಗಿ ಲಕ್ಷಾಂತರ ಭಕ್ತರ ಆರಾಧ್ಯ ದೈವ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ದೇವಸ್ಥಾನಕ್ಕೆ ಸೋಮವಾರ ಸುಣ್ಣ-ಬಣ್ಣ ಉಬ್ಬು ಶಿಲ್ಪಗಳ ಗೋಪುರ ನವೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ನೂತನ ಶ್ರಾವಣ ಮಾಸದ ಪ್ರಯುಕ್ತ ಶ್ರೀ ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಗೋಪುರ ಹಾಗೂ ಸುತ್ತಮುತ್ತ ವಿಗ್ರಹಗಳನ್ನು ಸರಿಪಡಿಸಿ ಸುಣ್ಣ ಬಣ್ಣ ಕಾಮಗಾರಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ 2011ರಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಸುಣ್ಣಬಣ್ಣ ಬಳಿಸಲಾಗಿತ್ತು 14 ವರ್ಷಗಳ ನಂತರ ಮತ್ತೆ ಗೋಪುರದ ನಿದ್ರೆಗಳನ್ನು ಸರಿಪಡಿಸಿ ಅವುಗಳಿಗೆ ಸುಣ್ಣ ಬಣ್ಣ ಬಳಿಸಲಾಗುತ್ತದೆ ಎಂದರು.
ಇದೆ ವೇಳೆ ಗ್ರಾಮದ ಮುಖಂಡ ತಿಪ್ಪೇರುದ್ರಪ್ಪ, ಆರ್ಟಿಸ್ಟ್ ಕೊಟ್ಟೂರು ಮಂಜುನಾಥ್, ವೇದ ಸಂಸ್ಕೃತ ಪಾಠಶಾಲೆಯ ಉಪನ್ಯಾಸಕ ವೀರೇಶ್ ಹಿರೇಮಠ , ಸೇರಿದಂತೆ ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.