
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ
ನಾಯಕನಹಟ್ಟಿ-
ಮುಷ್ಟಲಗುಮ್ಮಿ ಗ್ರಾಮದಲ್ಲಿ ಶನಿವಾರ ಎಸ್ ಮಲ್ಲಿಕಾರ್ಜುನಪ್ಪ ದಾವಣಗೆರೆ ಇವರ ಶರಣ ಸಂಗಮ ಕೃತಿ ಬಿಡುಗಡೆ ಸಮಾರಂಭ ನಡೆಯಿತು.
ಹೋಬಳಿಯ ಅಬ್ಬೇನಹಳ್ಳಿ ಗ್ರಾ. ಪಂ. ವ್ಯಾಪ್ತಿಯ
ಮುಷ್ಟಲಗುಮ್ಮಿ ಗ್ರಾಮದ ಶ್ರೀ ವೀರಭದ್ರೇಶ್ವರ ವಿದ್ಯಾ ಸಂಸ್ಥೆ , ಮುಷ್ಟಲಗಮ್ಮಿ, ಕನ್ನಡಮ್ಮ ಪ್ರಕಾಶನ ದಾವಣಗೆರೆ, ವೀರಭದ್ರೇಶ್ವರ ಪ್ರೌಢಶಾಲೆ ಹಳೆಯ ವಿದ್ಯಾರ್ಥಿಗಳ ಸಂಘ, ವೀರಭದ್ರೇಶ್ವರ ಪ್ರೌಢಶಾಲೆ ಇವರ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕೃತಿ ಕುರಿತಾಗಿ ಮಾತನಾಡಿದ, ಚಳ್ಳಕೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಸಾಹಿತಿಗಳು ಇದ್ದಾರೆ,ಸಾಹಿತ್ಯ ಅಭಿಮಾನಿಗಳು ಕಮ್ಮಿ ಆಗುತ್ತಿದ್ದಾರೆ ಎಷ್ಟೋ ಪುಸ್ತಕಗಳು ಸಾಹಿತ್ಯಭಿಮಾನಿಗಳಿಲ್ಲದೇ ಅತ್ಯಮೂಲ್ಯ ಪುಸ್ತಕಗಳು ಮೂಲೆಗುಂಪು ಆಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಎಸ್ ಮಲ್ಲಿಕಾರ್ಜುನಪ್ಪ ಇವರು ಈಗಾಗಲೇ 28 ಪುಸ್ತಕಗಳನ್ನು ರಚಿಸಿದ್ದು ಇದು 29ನೇ ಕೃತಿಯಾಗಿದೆ ಎಷ್ಟೇ ಇಳಿ ವಯಸ್ಸಿನಲ್ಲಾದರೂ ಅವರ ಸಾಹಿತ್ಯ ಅಭಿವೃದ್ಧಿ ,ಹೊಸ ಅನ್ವೇಷಣೆಯೊಂದಿಗೆ ಸೃಜನಶೀಲತೆ ವಿಮರ್ಶಾತ್ಮಕ ಮನೋಭಾವ ಮತ್ತು ಸಂಶೋಧನ ಅಂಶಗಳು ಅವರ ಕೃತಿಗಳಲ್ಲಿ ವ್ಯಕ್ತವಾಗುತ್ತವೆ , ಇದು ಓದುಗರಿಗೆ ಸೃಜನಾತ್ಮಕ ಚಿಂತನೆಯತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಇನ್ನೂ ಶ್ರೀ ವೀರಭದ್ರೇಶ್ವರ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪ್ರತಿ ಮಗುವಿಗೂ ಆರು ನೋಟ್ ಬುಕ್ ವಿತರಣೆ ಮಾಡಲಾಗುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಭದ್ರ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎನ್ . ಸತೀಶ್ ವಹಿಸಿದ್ದರು. ದಾವಣಗೆರೆ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಎಚ್ ರಾಜಶೇಖರ್ ಗುಂಡಗಟ್ಟಿ ಕೃತಿ ಬಿಡುಗಡೆಗೊಳಿಸಿದರು, ಕಾರ್ಯಕ್ರಮದಲ್ಲಿ ಎಸ್ ಸುಮಂಗಲ ಮಲ್ಲಿಕಾರ್ಜುನಪ್ಪ, ಬೋರಯ್ಯ, ಶಿವಯೋಗಿ ಹಿರೇಮಠ,ಎಸ್ ವಿ ವೀರಭದ್ರಪ್ಪ ತೆಲಗಿ, ಪಕೀರೇಶ ಅದಾಪುರ, ಕೋಲಮ್ಮನಹಳ್ಳಿ ಪಿತಾಂಬರ್, ಗ್ರಾಮ ಪಂಚಾಯತಿ ಸದಸ್ಯ ಸಣ್ಣೋಬಯ್ಯ, ಶಿವಶಂಕರ ಮೂರ್ತಿ ಶಾಲೆಯ ಮುಖ್ಯ ಶಿಕ್ಷಕ ಬಿ. ಎಚ್ ಸಿದ್ದಯ್ಯ, ನಲಗೇತನಹಟ್ಟಿ ಶಿಕ್ಷಕ ಜಿ.ವೈ.ತಿಪ್ಪೇಸ್ವಾಮಿ, ದಹಿಕ ಶಿಕ್ಷಕ ಟೀ ಶ್ರೀನಿವಾಸ್ ಸಿ.ಎನ್. ಉಮೇಶ್, ಚಿತ್ರಲಿಂಗಪ್ಪ, ಮಲ್ಲಿಕಾರ್ಜುನ ಸ್ವಾಮಿ, ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹಲವರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.