
ಚಳ್ಳಕೆರೆ: ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಚಾಲನೆ ನನೀ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಸರ್ಕಾರ ರಸಪ್ರಶ್ನೆ ಪ್ರಬಂಧ ಸ್ಪರ್ಧೆ ಚಿತ್ರಕಲೆ ಭಾಷಣ ಸ್ಪರ್ಧೆಗಳನ್ನು ಆಯೋಜಿಸಿದೆ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸೋಲು ಗೆಲುವಿಗೆ ಮನ್ನಣೆ ನೀಡದೆ ಭಾಗವಹಿಸುವುದು ಮುಖ್ಯವಾಗುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನ ಹಾಗೂ ಪುಸ್ತಕಗಳ ಮನನದಿಂದ ಮತ್ತು ಸ್ವಯಂ ಆಸಕ್ತಿಯಿಂದ ಭಾಗವಹಿಸಿದಾಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ವಿದ್ಯಾರ್ಥಿಗಳು ಕೆಂಪೇಗೌಡರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವೈಷ್ಣವಿ ಮೇಘನ ಶ್ರೀಜಾ ಪ್ರಬಂಧ ಸ್ಪರ್ಧೆಯಲ್ಲಿ ರೋಹಿತ್, ಪ್ರಾಧಿನ್ಯ, ಸಲ್ಮಾ, ರಸಪ್ರಶ್ನೆ ದೀಕ್ಷಿತಾ ಮತ್ತು ಅಶ್ವಿನಿ,ಶ್ರಿಯಾನ್ಸ್ ರಾಜ್ ಮತ್ತು ಸಮರ್ಥ ಲಲಿತ್ ಕಿಶನ್ ಮತ್ತು ಮಂಜುನಾಥ ಚಿತ್ರಕಲೆ ನವ್ಯಶ್ರೀ ನಿಹಾರಿಕಾ ಶೋಭಾ ಸಿಎಂ ವಿದ್ಯಾರ್ಥಿಗಳಿಗೆ ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇ ಸಿ ಓ ಮಾರುತಿ ಭಂಡಾರಿ ಮಂಜುನಾಥ ಸ್ವಾಮಿ ಸ್ಪರ್ಧೆಗಳ ತೀರ್ಪುಗಾರರಾಗಿ ಈರಣ್ಣ ಪಾವನ ಶಿವಮೂರ್ತಿ ಹರೀಶ್ ಬಾಬು ಸಿಆರ್ ಪಿ ಶಿವಣ್ಣ ಸುರೇಶ್ ವಿಜಯಲಕ್ಷ್ಮಿ ಉಮಾ ಚಂದ್ರನಾಯಕ್ ವಿದ್ಯಾವತಿ ಶಾರದಮ್ಮ ಹಾಗೂ ಇಲಾಖೆ ಸಿಬ್ಬಂದಿಗಳಾದ ಪುರುಷೋತ್ತಮ್ ದೇವೇಂದ್ರಪ್ಪ ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.