
ನಾಯಕನಹಟ್ಟಿ : ಮೊಳಕಾಲ್ಮೂರು ಶಾಸಕರಾದ ಎನ್.ವೈ.ಗೋಪಾಲಕೃಷ್ಣರವರು ಈ ಕ್ಷೇತ್ರವನ್ನು ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಲು ಹೋರಟಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಅಭಿವೃದ್ಧಿ ಕೆಲಸಗಳನ್ನು ಸಹಿಸಿಕೊಳ್ಳಲಾರದೆ ಬಿಜೆಪಿ ಮಾಜಿ ಶಾಸಕ ತಿಪ್ಪೇಸ್ವಾಮಿ ಹೊಟ್ಟೆಕಿಚ್ಚು ಪಡುತ್ತಿದ್ದಾರೆ ಎಂದು ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್‌ರೆಡ್ಡಿ ಹೇಳಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕಾಂಗ್ರೆಸ್ ಮುಖಂಡರು ಸುದ್ದಿಗೊಷ್ಠಿ ನಡೆಸಿದರು, ನಂತರ ಮಾತನಾಡಿದ ಅವರು ಎನ್.ವೈ.ಗೋಪಾಲಕೃಷ್ಣನವರು 35 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದು, ಇದುವರೆಗೂ ವಿರೋಧ ಪಕ್ಷ ನಾಯಕರಿಗೆ ಟೀಕೆ ಮಾಡಿಲ್ಲ. ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಅಂಬೇಡ್ಕರ್ ವಸತಿ ಶಾಲೆ ಮಾಜಿ ಸಚಿವ ಹೆಚ್.ಆಂಜನೇಯ ಮೊಳಕಾಲ್ಮೂರು ಶಾಕಸ ಎನ್.ವೈ.ಗೋಪಾಲಕೃಷ್ಣ, ಜಯಮ್ಮ ಬಾಲರಾಜ್ ತಂದಿದ್ದರು. 5 ವಸತಿ ಶಾಲೆಗಳನ್ನು ತಂದಿದ್ದೆ ಎನ್.ವೈ.ಗೋಪಾಲಕೃಷ್ಣ. ಜವಬ್ದಾರಿ ಸ್ಥಾನದಲ್ಲಿ ಮಾಜಿ ಶಾಸಕ ತಿಪ್ಪೇಸ್ವಾಮಿ ಈ ಕ್ಷೇತ್ರದಲ್ಲಿ 5 ವರ್ಷ ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದ ನಾಯಕರುಗಳು ಅವರ ಮೇಲೆ ಏಕವಚನ ಮಾತನಾಡಿಲ್ಲ ಎಂದರು.
ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಅಸಂವಿಧಾನಕ ಪ್ರಚೋಧನಕಾರಿ ಪದ ಬಳಕೆಯಿಂದ ಕೋಮು ಗಲಭೆ ಉಂಟಾಗಲು ಕಾರಣರಾಗುವುದು ಸರಿಯಲ್ಲ. ಇವರಿ ಕೀಳುಮಟ್ಟದ ಪದ ಬಳಕೆಯಿಂದ ಗ್ರಾಮೀಣ ಪ್ರದೇಶದಲ್ಲಿ ಜೀವನ ನಡೆಸುವ ಜನಸಾಮಾನ್ಯರಲ್ಲಿ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಿದಂತಾಗಿ ಕೋಮು ಸೌಹಾರ್ಧತೆ ಹಾಳು ಮಾಡಲು ಹೋರಟಿದ್ದಾರೆ ಎಂದು ಅವರು ಮಾತನಾಡಿದರು.
ಕಾಂಗ್ರೆಸ್ ಮುಖಂಡ ಸೂರನಾಯಕ ಮಾತನಾಡಿ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರು ಉದ್ದೇಶ ಪೂರಕವಾಗಿ ರಾಜಕೀಯ ದುರುದ್ದೇಶದಿಂದ ಸಾಮಾಜಿಕ ಜಾಲತಾಣಗಳಾದ ವ್ಯಾಟ್ಸಪ್, ಫೇಸ್‌ಬುಕ್‌ಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಸ್ವಂತ ರಾಜಕೀಯ ಲಾಭಕ್ಕಾಗಿ ಎರಡು ಕೋಮುಗಳಲ್ಲಿ ಶಾಂತಿ ಭಂಗ ಉಂಟುಮಾಡುವ ಕೆಲಸ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಉದ್ವಘ್ನತೆ ಉಂಟಾಗಿದೆ. ಯಾವ ಸಮಯದಲ್ಲಾದರು ಗಲಾಟೆ ಸಂಭವಿಸಬಹುದು. ನಾಯಕ ಜನಾಂಗದಲ್ಲಿ ಎರಡು ಕೋಮುಗಳಿದ್ದು, 1 ಮ್ಯಾಸನಾಯಕ, 2 ಊರ ನಾಯಕ ಇದ್ದು ನಾವೇಲ್ಲರೂ ನಾಯಕರು ಒಂದೇ ಎಂದು ಹೇಳಿದ್ದಾರೆ. ಈ ಪ್ರಚೋದಿತ ಹೇಳಿಕೆ ಹರಿಬಿಟ್ಟಿರುವುದರಿಂದ ಮೇಲ್ಕಂಡ ಕೋಮುಗಳ ಯುವ ಜನತೆಗಳ ಮೇಲೆ ದುಷ್ಪರಿಣಾಮ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಕ್ಷೇತ್ರದಲ್ಲಿ 70% ನಾಯಕ ಜನಾಂಗ ಇದ್ದೆವೆ, ಈ ಕ್ಷೇತ್ರದಲ್ಲಿ ಬಾವೈಕ್ಯತೆಯಿಂದ ಇದ್ದೆವೆ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮ್ಯಾಸ ನಾಯಕ ಮತ್ತು ಊರ ನಾಯಕ ಕೋಮುಗಳ ಬಗ್ಗೆ ಪ್ರಚೋಧನಕಾರಿ ಹೇಳಿಕೆ ಮಾಡಿದ್ದು, ಇವರ ವಿರುದ್ಧ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಕಾಂಗ್ರೆಸ್ ಮುಖಂಡ ಬಂಡೆಕಪಿಲೆ ಓಬಣ್ಣ ಮಾತನಾಡಿ ಶಾಸಕರು ಗೆದ್ದು 2 ವರ್ಷವಾಗಿದ್ದು ನೂರಾರು ಕೋಟಿ ವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡಿಸಿದ್ದಾರೆ. ನಾಯಕನಹಟ್ಟಿ ರಸ್ತೆ ಹಗಲಿಕರಣಕ್ಕೆ 6 ಕೋಟಿ ಅನುದಾನ ತಂದಿದ್ದಾರೆ. ಹಿರೇಮಲ್ಲನಹೊಳೆ ಪ್ರೀಡರ್ ಚಾನಲ್ ರೈತರಿಗೆ ಅನುಕೂಲವಾಗುವ ದೃಷ್ಠಿಯಿಂದ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ನಾಯಕನಹಟ್ಟಿ, ರೇಖಲಗೆರೆ, ರಾಮಸಾಗರ, ಕೋಡಿಹಳ್ಳಿ, ಘಟಪರ್ತಿ ಕೆರೆಗಳಿಗೆ ನೀರು ತುಂಬಿಸುವAತಹ ಕೆಲಸ ಮಾಡುತ್ತಿದ್ದಾರೆ.
ತಿಮ್ಮಪ್ಪಯ್ಯನಹಳ್ಳಿ, ನೇರಲಗುಂಟೆ ಒಟ್ಟು 7ಕಿ.ಮಿ 3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಜಗಳೂರು ಗಡಿ ರಸ್ತೆ, ಮಲ್ಲೂರಹಟ್ಟಿ, ಚನ್ನಬಸಯ್ಯನಹಟ್ಟಿ, ಗೌಡಗೆರೆ, ಜೋಗಿಹಟ್ಟೆ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನ ನೀಡಿದ್ದಾರೆ. ಬೋಸೆದೇವರಹಟ್ಟಿ ಹತ್ತಿರ ಶಿಡ್ಲಹಳ್ಳಕ್ಕೆ ಪಿಕ್‌ಅಪ್ ನಿರ್ಮಿಸಿ ಕಾಲುವೆ ಮುಖಾಂತರ 2 ಕೋಟಿ ರೂ. ವೆಚ್ಚದಲ್ಲಿ ದೊಡ್ಡಕೆರೆಗೆ ನೀರು ತುಂಬಿಸುವAತಹ ಭೂಮಿ ಪೂಜೆ ನೆರವೇರಿಸಿದ್ದಾರೆ. ಮನಮೈನಹಟ್ಟಿ ಮೇಲ್ಸೇತುವೆ 2 ಕೋಟಿ ರೂ. ಅನುದಾನವನ್ನು ತಂದಿದ್ದಾರೆ. ಇನ್ನೂ ಹಲವಾರು ಅನುದಾನಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.
ಪರಿಶಿಷ್ಟ ಪಂಗಡದವರೆಲ್ಲಾ ಒಂದೇ ಮಾಜಿ ಶಾಸಕ ತಿಪ್ಪೇಸ್ವಾಮಿ ಊರ ನಾಯಕ, ಮ್ಯಾಸ ನಾಯಕ ಎಂಬುವುದನ್ನು ಬಿಂಬಿಸುವುದು ಸಮಂಜಸವಲ್ಲ. ರಾಜಕೀಯ ವಿಚಾರ ಮಾತನಾಡಲಿ ನಮ್ಮಗಳ ಅಭ್ಯಂತರವಿಲ್ಲ. ಆದರೆ, ಜಾತಿ ವಿಚಾರದಲ್ಲಿ ವಿವಾದಾತ್ಮಕ ಹೇಳಿಕೆಯಿಂದ ಎತ್ತಿಕಟ್ಟುವ ಕೆಲಸ ಮಾಡಿ ಪರಿಶಿಷ್ಟ ಪಂಗಡದವರದಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ. ಮೊಳಕಾಲ್ಮುರು ಕ್ಷೇತ್ರದಲ್ಲಿ 5 ಬಾರಿ ಶಾಸಕರಾಗಿ ಶಾಲೆ, ವಿದ್ಯುತ್, ಸುಸಜ್ಜಿತ ರಸ್ತೆ, ರೇಖಲಗೆರೆ ಫೀಡರ್ ಚಾನಲ್ ದುರಸ್ತಿ ತುಂಗಾಭದ್ರ ಹಿನ್ನೀರು ಯೋಜನೆ, ವಸತಿ ಶಾಲೆಗಳ ನಿರ್ಮಾಣ ಮಾಡಿದ್ದಾರೆ. ಇಂತಹ ಸಮಾಜಮುಖಿ ಕೆಲಸವನ್ನು ಮಾಡುವ ಶಾಸಕರಿಗೆ ಪ್ರೋತ್ಸಾಹ ನೀಡಬೇಕು. ಅದು ಬಿಟ್ಟು ಜನಾಂಗದ ವಿಚಾರದಲ್ಲಿ ವಿಭಜನೆ ಮಾಡುವುದನ್ನು ನಿಲ್ಲಿಸಬೇಕೆಂದರು.
ವಕೀಲ ಎಸ್.ಉಮಾಪತಿ ಮಾತನಾಡಿ, ಕಳೆದ ಎರಡು ದಿನಗಳ ಹಿಂದೆ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿಯವರು ಸಾಮಾಜಿಕ ಜಾಲತಾಣದಲ್ಲಿ ಅಸಂವಿಧಾನ ಪದಬಳಕೆಯಿಂದ ಕ್ಷೇತ್ರದ ಜಾತಿ, ಜನಾಂಗದವರಲ್ಲಿ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಅರಿಯದೇ ಮಾತನಾಡಿರುವುದು ಅವರ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ತಿಳಿಯುತ್ತದೆ.
ಪರಿಶಿಷ್ಟ ಪಂಗಡದ ನಾಯಕನಾಗಿ ತನ್ನ ಸಮುದಾಯದವರನ್ನು ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಎತ್ತಿಕೊಟ್ಟುವ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಕ್ಷೇತ್ರದ ಜನತೆಗೆ ಯಾರ ಅವಧಿಯಲ್ಲಿ ಯಾವ ಯಾವ ಕೆಲಸಗಳು ಕಾರ್ಯಗತವಾಗಿವೆ ಎಂಬುದರ ಬಗ್ಗೆ ಅರಿವಿದೆ. ಸಮಾಜದಲ್ಲಿ ಇವರು ನೀಡುವ ಅಸಂಬದ್ಧ ಹೇಳಿಕೆಗಳಿಂದ ದೊಂಬಿ, ಗಲಭೆ, ಶಾಂತಿಭAಗಕ್ಕೆ ಕಾರಣವಾಗುವುದು. ಆದ್ದರಿಂದ ಇಂತಹ ಹೇಳೀಕೆ ನೀಡುವಾಗ ಎಚ್ಚರಿಕೆಯಿಂದ ಮಾತನಾಡಬೇಕೆಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಪಿ.ರುದ್ರಮುನಿ, ನಿವೃತ್ತ ಗ್ರಾಮೀಣ ಬ್ಯಾಂಕ್ ಸಿನಿಯರ್ ಮ್ಯಾನೇಜರ್, ಮಂಜಮ್ಮ ಮಾಜಿ ಹಿರೇಹಳ್ಳಿ ಗ್ರಾ.ಪಂ ಅಧ್ಯಕ್ಷೆ ಹಾಲಿ ಸದಸ್ಯೆ, ಜಿ.ತಿಪ್ಪೇಸ್ವಾಮಿ, ಪ್ರಭುಸ್ವಾಮಿ, ರಮೇಶ್‌ಬಾಬು, ಬೋರನಾಯಕ, ಪ್ರಕಾಶ್, ವಾಸೀಂ ಅಹಮದ್, ಬಸಣ್ಣ, ಆರ್.ಶ್ರೀಕಾಂತ್, ಮಂಜುನಾಥ್, ಓಬಯ್ಯ, ರುದ್ರಮುನಿ, ಕಾಟಯ್ಯ, ಮುದಿಯಪ್ಪ, ಡಾ.ಕಾಟಂಲಿAಗಯ್ಯ, ವೀರೇಶ್, ಹೆಚ್.ಬಿ.ತಿಪ್ಪೇಸ್ವಾಮಿ, ಆರ್.ಬಸವರಾಜ್, ಮಲ್ಲೂರಹಳ್ಳಿ ಮಾಜಿ ಗ್ರಾ.ಪಂ ಉಪಾಧ್ಯಕ್ಷ ಕಾಟಯ್ಯ ಮತ್ತಿತರರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.