September 14, 2025
1748436429024.jpg


ಹಿರಿಯೂರು:
ತಾಲ್ಲೂಕಿನಲ್ಲಿ ಇದೀಗ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಶಾಲಾ ಪಠ್ಯಪುಸ್ತಕಗಳ ಸ್ಟಾಕ್ ಬಂದಿದ್ದು, ಅದನ್ನು ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳಿಗೆ ಹಾಗೂ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ವಿತರಿಸುವ ಜವಬ್ದಾರಿ ಶಿಕ್ಷಣ ಇಲಾಖೆ ಮೇಲಿದೆ. ಅದಕ್ಕೆ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಸಾಗಾಣಿಕೆ ವೆಚ್ಚವನ್ನೂ ಸಹ ನೀಡಲಾಗುತ್ತದೆ.
ಆದರೆ, ಆದರೆ ಈ ಪಠ್ಯ ಪುಸ್ತಕಗಳ ವಿತರಣೆ ಜವಬ್ದಾರಿ ಹೊತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ಅಸಡ್ಡೆಯಿಂದಾಗಿ ಸರ್ಕಾರಿ ಶಾಲಾ ಶಿಕ್ಷಕರು ಹಾಗೂ ಅನುದಾನಿತ ಶಾಲೆ ಹಾಗೂ ಅನುದಾನರಹಿತ ಶಾಲೆಗಳ ಮುಖ್ಯಶಿಕ್ಷಕರು , ಶಿಕ್ಷಕ- ಶಿಕ್ಷಕಿಯರೇ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ಪುಸ್ತಕಗಳನ್ನು ತಮ್ಮ ಬೈಕ್ ಸ್ಕೂಟರ್ , ಆಟೋಗಳಲ್ಲಿ ಹೊತ್ತುಕೊಂಡು ಹೋಗುವಂತಾಗಿದೆ.
ಇನ್ನು ತಾಲ್ಲೂಕಿನ ಅನುದಾನ ರಹಿತ ಶಾಲೆಗಳ ಸ್ಥಿತಿಯಂತೂ ಹೇಳಲಾರದಂತಿದೆ. ಈ ತಾಲ್ಲೂಕಿನಾದ್ಯಂತ ಅನುದಾನರಹಿತ ಶಿಕ್ಷಣಸಂಸ್ಥೆಗಳು ಶಿಕ್ಷಣ ಇಲಾಖೆಗೆ ಒಮ್ಮಗೆ ಲಕ್ಷಗಟ್ಟಲೆ ಹಣಕಟ್ಟಿದ್ದರೂ ಶಿಕ್ಷಣ ಇಲಾಖೆ ಒಮ್ಮೆಗೆ ಪಠ್ಯಪುಸ್ತಕಗಳನ್ನು ಈ ಶಿಕ್ಷಣ ಸಂಸ್ಥೆಗಳಿಗೆ ಕೊಡದೆ, ಅವಾಗಿಷ್ಟು, ಇವಾಗಿಷ್ಟು, ಎಂಬಂತೆ ಕೊಡಲಾಗುತ್ತಿದೆ.
ಅಲ್ಲದೆ, ಈ ಖಾಸಗಿ ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕ- ಶಿಕ್ಷಕಿಯರು ಶಿಕ್ಷಣ ಇಲಾಖೆ ಪುಸ್ತಕ ಗೋಡೌನಿಗೆ ಪದೇ ಪದೇ ಅಲೆಯುವಂತೆ ಮಾಡಲಾಗಿದೆ. ಈ ಮೊದಲು ಖಾಸಗಿ ಶಾಲೆಗಳು ಪಠ್ಯಪುಸ್ತಕ ಗೋಡೌನಿಗೆ ಹೋಗಿ ಇಂಡೆಂಟ್ ಕೊಟ್ಟರೆ ಸಾಕಿತ್ತು. ಅವರೇ ಪುಸ್ತಕಗಳನ್ನು ಹುಡುಕಿ ಸೆಟ್ ಮಾಡಿ, ಕೌಂಟ್ ಮಾಡಿ ಕೊಡುತ್ತಿದ್ದರು.
ಆದರೆ, ಈಗ ಕಾಲ ಬದಲಾವಣೆಯಾಗಿದೆ. ಈಗ ಖಾಸಗಿ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಪುಸ್ತಕಗಳ ಗೋಡೌನಿಗೆ ಹೋಗಿ ತಮ್ಮ ಶಾಲೆಗಳ ಪುಸ್ತಕಗಳನ್ನು ತಾವೇ ಹುಡುಕಿಕೊಂಡು,ನೆಲದ ಮೇಲೆಲ್ಲಾ ಜೋಡಿಸಿಕೊಂಡರೂ, ಪುಸ್ತಕಗಳ ಜವಬ್ದಾರಿ ಹೊತ್ತಿರುವ ಅಧಿಕಾರಿ ಬಂದು ಅವುಗಳನ್ನು ಎಣಿಸಿ ಬಿಡುಗಡೆಗೊಳಿಸುವವರೆಗೆ ಶಿಕ್ಷಕ-ಶಿಕ್ಷಕಿಯರು ದಿನಗಟ್ಟಲೆ ಕಾಯುವಂತಾಗಿದೆ.
ಇಷ್ಟೆಲ್ಲಾ ಅವ್ಯವಸ್ಥೆಗಳಿದ್ದರೂ ಜಿಲ್ಲಾ ಉಪನಿರ್ದೇಶಕರು ಪುಸ್ತಕದ ಗೋಡೌನಿಗೆ ನೆಪ ಮಾತ್ರಕ್ಕೆ ಭೇಟಿ ನೀಡಿದಂತೆ ಮಾಡಿ ಫೋಟೋಗಳಿಗೆ ಫೋಸ್ ಕೊಟ್ಟು ಹೋಗಿದ್ದಾರೆ ಅಷ್ಟೇ. ಅದರ ಬದಲು ಉಪನಿರ್ದೇಶಕರು ತಾಲ್ಲೂಕಿನಲ್ಲಿ ಪುಸ್ತಕ ಸರಬರಾಜು ಆಗುವ ದೂರದ ಊರಿನ ಶಾಲೆಗಳಿಗೆ ಭೇಟಿ ನೀಡಿ ಪುಸ್ತಕಗಳು ಸರಿಯಾಗಿ ಸಾಗಾಣಿಕೆಯಾಗಿದೆಯಾ? ಎಂಬುದಾಗಿ ಪರಿಶೀಲಿಸಬೇಕಾಗಿತ್ತು.
ಅಷ್ಟೇ ಅಲ್ಲ, ತಾಲ್ಲೂಕಿನ ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳ ಸಾಗಾಣಿಕೆ ವಾಹನದ ಟೆಂಡರ್ ಕರೆದು ಆಯ್ಕೆಯಾದ ವಾಹನಗಳ ಮೂಲಕವೇ ತಾಲ್ಲೂಕಿನ ಧರ್ಮಪುರ, ಐಮಂಗಲ, ಜೆ.ಜಿ. ಹಳ್ಳಿ, ಯಲ್ಲದಕೆರೆ, ವಿ.ವಿ.ಪುರ, ಸೇರಿದಂತೆ ಎಲ್ಲಾ ಹೋಬಳಿ ಶಾಲೆಗಳಿಗೆ ವಾಹನದ ಮೂಲಕ ನೇರ ಪಠ್ಯಪುಸ್ತಕಗಳ ಸರಬರಾಜು ಮಾಡಬೇಕಾಗಿದೆ. ಆದರೆ, ನಮ್ಮ ತಾಲ್ಲೂಕಿನಲ್ಲಿ ಈ ವ್ಯವಸ್ಥೆಯಲ್ಲಿ ಲೋಪವಾಗಿದೆ.
ಈ ಎಲ್ಲಾ ವಿಚಾರಗಳಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ನಮ್ಮ ಪ್ರಶ್ನೆ ಒಂದೇ ಈ ಸರ್ಕಾರಿ ಶಾಲೆಗಳು ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರು ತಮಗೆ ಪುಸ್ತಕ ಸಿಕ್ಕಿದರೆ ಸಾಕು ಎಂಬಂತೆ ಅವರೇ ಪುಸ್ತಕದ ಗೋಡೌನಿಗೆ ಮುಗಿಬಿದ್ದು ಪಠ್ಯ ಪುಸ್ತಕಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಹೊತ್ತಯ್ಯುತ್ತಿದ್ದಾರೆ. ಆದರೆ, ಶಾಲಾ ಶಿಕ್ಷಣ ಇಲಾಖೆ ಸಾಗಾಣಿಕೆ ವೆಚ್ಚವನ್ನು ಯಾರಿಗೆ ನೀಡುತ್ತದೆ. ಶಾಲಾ ಶಿಕ್ಷಣ ಇಲಾಖೆ ಎಷ್ಟು ಸಾವಿರ ರೂಗಳನ್ನು ನೀಡುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ…?

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading