
ಚಳ್ಳಕೆರೆ:
ಕನ್ನಡ ಭಾಷಾ ಹಿರಿಮೆಗೆ ಧಕ್ಕೆ ಆಗುವ ರೀತಿ ಮಾತನಾಡಿರುವ ತಮಿಳು ನಟ ಕಮಲಹಾಸನ್ ವಿರುದ್ಧ ಸುಮೋಟೊ ಪ್ರಕರಣದಡಿ ಕೇಸು ದಾಖಲು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿ ಬುಧವಾರ ಕರ‍್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ ಪದಾಧಿಕಾರಿಗಳು ತಹಸೀಲ್ದಾರ್ ರೇಹಾನ್ ಪಾಷ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವೇದಿಕೆ ಅಧ್ಯಕ್ಷ ಕರ‍್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹಗುರವಾಗಿ ಮಾತನಾಡಲಾಗಿದೆ. ಕನ್ನಡ ಭಾಷೆಗೆ ೨೫೦೦ ವರ್ಷಗಳ ಇತಿಹಾಸವಿದೆ. ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವ ಭಾಷೆಯಾಗಿದೆ. ದ್ರಾವೀಡ ಭಾಷೆಯಿಂದ ಕನ್ನಡ ಮತ್ತು ತಮಿಳು ಹುಟ್ಟಿರುವ ಭಾಷೆಗಳಾಗಿವೆ. ಆದರೆ, ಕನ್ನಡ ಭಾಷೆ ಶಾರೀರಿಕವಾಗಿ ಮಾತನಾಡುವ ರೀತಿಯಲ್ಲಿ ಲಿಪಿ ಇರುವ ಇತಿಹಾಸ ಭಾಷೆಯಾಗಿದೆ. ಒಬ್ಬ ಕಲಾವಿದ, ಕವಿಗೆ ಭಾಷೆ, ಗಡಿ ಇರುವುದಿಲ್ಲ ಎನ್ನುತ್ತಾರೆ. ಆ ರೀತಿಯಲ್ಲಿ ಪ್ರತಿಯೊಂದು ಭಾಷೆಯನ್ನು ಪ್ರೀತಿಸಬೇಕು. ಕನ್ನಡ ಭಾಷೆಗೆ ಧಕ್ಕೆ ಆಗುವ ರೀತಿ ಮಾತನಾಡಲಾಗಿದೆ. ಇದರಿಂದ ಕನ್ನಡಿಗರ ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಕೆಣಕಿದಂತಾಗಿದೆ. ಕೂಡಲೇ ಕನ್ನಡಿಗರ ಕ್ಷಮೆ ಯಾಚನೆ ಮಾಡಬೇಕು. ಥಗ್‌ಲೈಫ್ ಸಿನಿಮಾವನ್ನು ಕನ್ನಡ ಚಿತ್ರರಿಂಗದಲ್ಲಿ ಪ್ರಸಾರ ಮಾಡದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಸ್.ಎಚ್. ಸೈಯದ್, ಸಿ.ಜಿ. ತಿಪ್ಪೇಸ್ವಾಮಿ, ಎಚ್. ಲಂಕೇಶ್, ಎಲ್.ಟಿ. ತಿಪ್ಪೇಸ್ವಾಮಿ, ಕೆ.ಬಿ. ನಾಗರಾಜ್, ಆರ್. ರವಿವರ್ಮ, ವಿ. ಬೆಟ್ಟಪ್ಪ, ಪೆನ್ನೋಬಳಯ್ಯ, ಹೊರಕೆರೆ ರಂಗಸ್ವಾಮಿ, ಎನ್. ತಿಪ್ಪೇಸ್ವಾಮಿ, ಎಚ್. ಜಾನುಕುಮಾರ್, ಹರೀಶ್ ಮತ್ತಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.