January 29, 2026
1745857517866.jpg


ಹಿರಿಯೂರು :
ತಾಲ್ಲೂಕಿನ ಯಲ್ಲದಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಗಳಿಕಟ್ಟೆ ಗ್ರಾಮದಲ್ಲಿ ನೆಲಸಿರುವ ಶ್ರೀ ಭೂತೇಶ್ವರ ಸ್ವಾಮಿಯ ದೇವಾಲಯದ ಗೋಪುರದ ಕಳಸ ಪ್ರತಿಷ್ಠಾಪನೆ ಮಹೋತ್ಸವ ಎಪ್ರಿಲ್ 28ರ ಸೋಮವಾರ ಬೆಳಗ್ಗೆ 9-00 ಗಂಟೆಗೆ ಸಲ್ಲುವ ಶುಭ ಲಗ್ನದಲ್ಲಿ ಶ್ರೀ ದಶರಥರಾಮೇಶ್ವರ ವಜ್ರದಲ್ಲಿ ಗಂಗಾ ಪೂಜೆಯೊಂದಿಗೆ ಆರಂಭವಾಯಿತು.
ನಂತರ ಯಲ್ಲದಕೆರೆ 101 ಲಿಂಗೇಶ್ವರ ದೇವಸ್ಥಾನದಿಂದ ಚಿಗಳಿಕಟ್ಟೆವರೆಗೂ 108 108 ಕುಂಭ ಕಳಸಗಳಲ್ಲಿ 108 ಸುಮಂಗಲಿಯರಿಂದ ಪವಿತ್ರ ಗಂಗೆಯನ್ನು ಮೆರವಣಿಗೆ ಮೂಲಕ ಚಿಗಲಿ ಕಟ್ಟೆಗೆ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು, ಈ ಸಂದರ್ಭದಲ್ಲಿ ಜನಪದ ಕಲಾ ತಂಡಗಳಿಂದ ವಿವಿಧ ಕಾರ್ಯಕ್ರಮಗಳು ನಡೆದವು ಎಂಬುದಾಗಿ ಶ್ರೀ ಭೂತೇಶ್ವರಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಮಾಧ್ಯಮಗಳಿಗೆ ಮಾಹಿತಿ ನೀಡಲಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading