January 29, 2026
d28-tm1.JPG



ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಕಳೆದ ಒಂದು ವಾರದಿಂದ ಪಟ್ಟಣದಲ್ಲಿ ಗ್ರಾಮ ದೇವತೆ ಶ್ರೀ ದುರ್ಗಾಂಬಿಕ ದೇವಿಯವರ ಜಾತ್ರಾ ಮಹೋತ್ಸವವು ನಡೆಯುತ್ತಿದ್ದು ಉತ್ಸವದ ಅಂಗವಾಗಿ ಏ ೨೯ ರಂದು ಮಂಗಳವಾರ ಮಧ್ಯಾಹ್ನ ೧ ಗಂಟೆಗೆ ಪಟ್ಟಣದ ಸಮೀಪವಿರುವ ಶ್ರೀ ಸಿದ್ದಪ್ಪನ ಬೆಟ್ಟದಲ್ಲಿ ಪರೇವು ಕಾರ್ಯಕ್ರಮವನ್ನ ನಡೆಯಲಿದೆ ಎಂದು ಶ್ರೀ ದುರ್ಗಾಂಬಿಕ ದೇವಸ್ಧಾನ ಸಮಿತಿಯ ಧರ್ಮದರ್ಶಿ ಅಗ್ರೋ ಹೆಚ್.ಶಿವಣ್ಣ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಶ್ರೀಸಿದ್ದೇಶ್ವರ ಸ್ವಾಮಿಯವರಿಗೆ ವಿಶೇಷ ಪೂಜೆ ಮಹಾಮಂಗಳಾರತಿ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು ಹೊಸದುರ್ಗ ಪಟ್ಟಣದ ಸುತ್ತಾ ಮುತ್ತಲಿನ ಭಕ್ತರು ಯಾಲಕ್ಯಪ್ಪನಹಟ್ಟಿ, ಶಿವನೇಕಟ್ಟೆ, ಮಧುರೆ, ಬಾಗೂರು, ಕುಂದೂರು ಸೇರಿದಂತೆ ಈಗೆ ಸುತ್ತಮುತ್ತಲಿನ ಭಕ್ತರು ಪರೇವು ಮತ್ತು ಪೂಜಾ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪರೇವು ವಿಶೇಷ: ಹೊಸದುರ್ಗ ಗ್ರಾಮ ದೇವತೆಯಾದ ಶ್ರೀ ದುರ್ಗಾಂಬಿಕಾ ದೇವಿಯವರ ಜಾತ್ರಾ ಮಹೋತ್ಸವವು ಒಂದು ವಾರಗಳ ಕಾಲ ನಡೆಯುತ್ತಿದ್ದು ಪ್ರತಿ ವರ್ಷ ಜಾತ್ರೆಯ ಕೊನೆಯ ದಿನ ಪಟ್ಟಣಸ ಸಮೀಪದ ಬೆಟ್ಟದಲ್ಲಿರುವ ಶ್ರೀ ಸಿದ್ದೇಶ್ವರ ಸ್ವಾಮಿಗೆ ಪ್ರತಿವರ್ಷದಂತೆ ಈ ವರ್ಷವೂ ಸಹಾ ಪರೇವು ಕಾರ್ಯಕ್ರಮವನ್ನ ಆಯೋಜಿಸಲಾಗಿದ್ದು ಇದರ ಉದ್ದೇಶ ಮತ್ತು ವಿಶೇಷತೆ ಎಂದರೆ ನಾಡಿನ ಜನರಿಗೆ ಒಳಿತಾಗಲಿ,ಮಳೆ ಬೆಳೆ ಸಂವೃದ್ದವಾಗಲಿ,ಸಮಸ್ತ ಭಕ್ತರು ಸುಖ,ಶಾಂತಿ ನೆಮ್ಮದಿಯಿಂದ ಬದುಕಲಿ ನಾಡಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಇಂತಹ ಒಂದು ವಿಶಿಷ್ಟ ಕಾರ್ಯಕ್ರಮವನ್ನ ಶ್ರೀ ದುರ್ಗಾಂಬಿಕಾ ದೇವಯವರ ಅಪ್ಪಣೆಯಂತೆ ನಡೆಸಿಕೋಂಡು ಹೋಗಲಾಗುತ್ತಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading