ಅಂಬೇಡ್ಕರ್ರವರನ್ನು ಆಗಿನ ಸರ್ಕಾರ ನಡೆಸಿಕೊಂಡ ರೀತಿಯ ಬಗ್ಗೆ ಅವರ ಕೊನೆಯ ದಿನಗಳಲ್ಲಿ ತುಂಬಾ ನೊಂದಿದ್ದರು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘು ಮೂರ್ತಿ ಹೇಳಿದರು

ಚಳ್ಳಕೆರೆ ತಾಲೂಕಿನ ತಿಮ್ಮಪ್ಪನಹಳ್ಳಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯವರು ಏರ್ಪಡಿಸಿರುವ ಅಂಬೇಡ್ಕರ್ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಶೋಷಿತರ ಬೆಳಕು ಅಂಬೇಡ್ಕರ್ ಸಂಸ್ಕಾರ ಯುತ ಕುಟುಂಬ ಅಂಬೇಡ್ಕರ್ ಅವರದ್ದು ಇಡೀ ತಮ್ಮ ಜೀವನವನ್ನು ಸಮಾಜಕ್ಕೋಸ್ಕರ ಸವೆಸಿದವರು ತನಗೋಸ್ಕರ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥದ ಬದುಕು ಅಂಬೇಡ್ಕರ್ ಅವರದಾಗಿತ್ತು ಶೋಷಿತರ ನೊಂದವರ ಮುಖದಲ್ಲಿ ನಗುತರಿಸುವ ಉದ್ದೇಶ ಅಂಬೇಡ್ಕರ್ ಅವರಿಗೆ ಇತ್ತು ಶೋಷಿತರ ಎಲ್ಲ ಕಷ್ಟ ಅವಮಾನ ಅಸ್ಪೃಶ್ಯತೆಯನ್ನು ಮನಗಂಡಂತಹ ಅಂಬೇಡ್ಕರ್ ಈ ಜನ ನೆಮ್ಮದಿಯಿಂದ ಬದುಕಲು ಮತ್ತು ಸ್ವಾಭಿಮಾನದಿಂದ ಬದುಕಲು ರಾಜ್ಯಂಗದ ಮುಖಾಂತರ ಕಾನೂನಿನ ದಾರಿ ಮಾಡಿಕೊಟ್ಟರು ಶೋಷಿತರು ಸ್ವಾಭಿಮಾನಿಗಳಾದರೆ ಮತ್ತು ಸ್ವಾವಲಂಬಿಗಳಾದರೆ ಅದೇ ಅಂಬೇಡ್ಕರ್ ಅವರಿಗೆ ನೀಡುವಂತಹ ಗೌರವವಾಗಿರುತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ಈ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾದ ಶೈಕ್ಷಣಿಕವಾಗಿ ಸದೃಢವಾಗಬೇಕೆಂದು ಮನವಿ ಮಾಡಿದರು
ನಿವೃತ್ತ ಕೆಎಎಸ್ ಅಧಿಕಾರಿ ಶ್ರೀ ಮಲ್ಲಿಕಾರ್ಜುನ ಮಾತನಾಡಿ ಧರ್ಮ ಆದರಿಸಿದ ದಾರಿಯಲ್ಲಿ ನಡೆಯುವುದು ತಪ್ಪೆಂದು ಅಂಬೇಡ್ಕರ್ ಅವರ ಭಾವಿಸಿದ್ದರು ನಮ್ಮಗಳಿಗೆ ಅಂಬೇಡ್ಕರ್ ಮತ್ತು ಕೃಷ್ಣಪ್ಪನವರ ಸಿದ್ಧಾಂತ ಮಾದರಿಯಾದದ್ದು ಇಂದಿನ ಯುವಕರುಗಳು ಒಳ್ಳೆ ಶಿಕ್ಷಣ ಪಡೆದು ಸದೃಢರಾಗಬೇಕು ಇದರ ಪ್ರಕಾರ ಮುಖಾಂತರ ಅಂಬೇಡ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕೆಂದು ಹೇಳಿದರು
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳದ ಜೆಜೆಟಿ ತಿಪ್ಪೇಸ್ವಾಮಿ ಮಾತನಾಡಿ ಶಿಕ್ಷಣ ಸಂಘಟನೆ ಮತ್ತು ಹೋರಾಟ ಡಾ. ಅಂಬೇಡ್ಕರ್ ಅವರ ಮೂಲ ಮಂತ್ರವಾಗಿತ್ತು ಶಿಕ್ಷಣದ ಮುಖಾಂತರ ಸಮಾಜವನ್ನು ಮತ್ತು ಸಮುದಾಯವನ್ನು ಬದಲಾವಣೆ ಮಾಡಬಹುದು ಮತ್ತು ಜಾಗೃತಿ ಮೂಡಿಸಬಹುದೆಂಬ ಅಂಶವನ್ನು ಅಂಬೇಡ್ಕರ್ ಮನಗಂಡಿದ್ದರು ವರ ಆಸೆಗಳು ಮತ್ತು ಕಲ್ಪನೆಗಳು ಸರ್ವಕಾಲಿಕವಾದದಂತದ್ದು ಆದರೆ ಈ ಆಶಯಗಳನ್ನು ಇಲ್ಲಿಯವರೆಗೂ ಸಂಪೂರ್ಣವಾಗಿ ಈಡೇರಿಸದಿರುವುದು ದುರದೃಷ್ಟಕರ ಸಂಗತಿ ಎಂದು ಹೇಳಿದರು
ಚಳ್ಳಕೆರೆ ನಗರಸಭೆಯ ಮಾಜಿ ಸದಸ್ಯ ಶಿವಮೂರ್ತಿ ಮಾತನಾಡಿ ಅಂಬೇಡ್ಕರ್ ಅವರು ಇಷ್ಟೊಂದು ಅವಮಾನ ನೋವುಗೊಂಡಿದ್ದರು ಕೂಡ ಸಮಾಜಕ್ಕೆ ಅಮೃತವನ್ನು ನೀಡಿದ್ದಾರೆ ವಿಶ್ವವೇ ಒಪ್ಪುವಂತಹ ಸಂವಿಧಾನವನ್ನು ಬರೆದಿದ್ದಾರೆ ಇಂತಹ ಮಹಾನ್ ವ್ಯಕ್ತಿಗೆ ಕಾಂಗ್ರೆಸ್ ಆಗಿನ ಪಕ್ಷದ ಮುಖಂಡರು ಏಕೆ ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿದರು ಎಂಬುದು ಇದುವರೆಗೂ ಉತ್ತರ ಸಿಗದೆ ನಿಗೂಢವಾಗಿದೆ ಇದರಿಂದ ಅಂಬೇಡ್ಕರ್ ಅವರು ತುಂಬಾ ಮನನೊಂದಿದ್ದರೂ ಎಂದು ಹೇಳಿದರು
ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಬಾಲರಾಜ್ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಆರೋಗ್ಯ ಇಲಾಖೆಯ ಕುದಾಪುರ ತಿಪ್ಪೇಸ್ವಾಮಿ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದಂತಹ ಟಿ ರಾಜಪ್ಪ ವಕೀಲರಾದ ಮಲ್ಲೇಶ್ ಮುಂತಾದವರು ಮಾತನಾಡಿದರು
ಸಮಾರಂಭದಲ್ಲಿ ತಿಮ್ಮಪ್ಪನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಮತಿ ಶೈಲಜಾ ದಲಿತ ಮುಖಂಡರಾದಂತ ಲೋಕೇಶ್ ಹನುಮಂತಪ್ಪ ದುರ್ಗೇಶ್ ಮುಂತಾದವರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.