January 29, 2026
IMG-20250428-WA0110.jpg

ನಾಯಕನಹಟ್ಟಿ

ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಜಿಲ್ಲೆಗೆ ಒಗ್ಗಟ್ಟು ಪ್ರದರ್ಶನ ನೀಡುವ ಗ್ರಾಮ ಎಂದು ಕೆ.ಪಿ.ಸಿ.ಸಿ. ರಾಜ್ಯ ಪ್ರಧಾನಕಾರ್ಯದರ್ಶಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಹೇಳಿದರು.

ಸಮೀಪದ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜೈಭೀಮ್ ಯುವಕರ ಬಳಗದ ವತಿಯಿಂದ ಡಾ|| ಬಿ.ಆರ್.ಅಂಬೇಡ್ಕರ್‌ರವರ ೧೩೪ನೇ ಹಾಗೂ ಡಾ|| ಬಾಬಾ ಜಗಜೀವನ್ ರಾಂರವರ ೧೧೮ನೇ ಜಯಂತೋತ್ಸವ ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೈಲಮಂಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಂತರ ಮಾತನಾಡಿದ ಅವರು ಡಾ|| ಬಿ.ಆರ್.ಅಂಬೇಡ್ಕರ್‌ರವರು ಶಿಕ್ಷಣಕ್ಕೆ ಬಹಳ ಮಹತ್ವವನ್ನು ಕೊಟ್ಟರು, ಬಾಲ್ಯದಲ್ಲಿಯೇ ಸಾಕಷ್ಟು ನೋವುಗಳನ್ನು ಅನುಭವಿಸಿ ಶಿಕ್ಷಣ ಪಡೆದು ಇಡೀ ಪ್ರಪಂಚವೇ ಮೆಚ್ಚುವಂತಹ ಸಂವಿಧಾನ ಬರೆದಿದ್ದಾರೆ, ಆದ್ದರಿಂದ ತಾವೆಲ್ಲರೂ ಡಾ|| ಬಿ.ಆರ್.ಅಂಬೇಡ್ಕರ್‌ರವರ ಆಚಾರ-ವಿಚಾರಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಅವರ ಆದರ್ಶಗಳನ್ನು ಪರಿಪಾಲಿಸಬೇಕು, ಸಂವಿಧಾನವನ್ನು ಓದಬೇಕು, ಅದರ ಬಗ್ಗೆ ನಾವೆಲ್ಲರೂ ತಿಳಿದುಕೊಳ್ಳಬೇಕೆಂದು ತಿಳಿಸಿದರು.

ಮಾಜಿ ಜಿ.ಪಂ. ಅಧ್ಯಕ್ಷರಾದ ಬಾಲರಾಜ್ ಮಾತನಾಡಿ ನಮ್ಮ ದೇಶಕ್ಕೆ ಸಂವಿಧಾನ ಕೊಟ್ಟಂತಹ ವಿಶ್ವಜ್ಞಾನಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್‌ರವರು ವಿಶ್ವಕ್ಕೆ ಮಹಾ ನಾಯಕರು. ಮುಂದಿನ ದಿನಗಳಲ್ಲಿ ಡಾ|| ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.

ನಿವೃತ್ತ ತಹಶೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿ ಡಾ|| ಬಿ.ಆರ್.ಅಂಬೇಡ್ಕರ್ ಶಿಸ್ತಿನ ವ್ಯಕ್ತಿ, ಶಿಕ್ಷಣಕ್ಕೆ ಅತೀ ಹೆಚ್ಚು ಮಹತ್ವ ನೀಡಿದರು. ಎಲ್ಲಿ ಶಿಸ್ತು ಇರುತ್ತೋ ಅಲ್ಲಿ ಡಾ|| ಬಿ.ಆರ್.ಅಂಬೇಡ್ಕರ್‌ರವರಿಗೆ ಗೌರವ ಸಿಗುತ್ತದೆ. ರಾಷ್ಟçಪತಿ ಹಾಗೂ ಕೇಂದ್ರ ಸಚಿವ ನಾರಾಯಣಸ್ವಾಮಿರವರಿಗೆ ಅಸ್ಪುರ್ಶ್ಯತೆ ಆಚರಣೆಯಾಗಿತ್ತು ಡಾ|| ಬಿ.ಆರ್.ಅಂಬೇಡ್ಕರ್‌ರವರ ಮೀಸಲಾತಿಯಿಂದ ನಾನು ತಹಶೀಲ್ದಾರ್, ಎ.ಸಿ. ಆಗಿದ್ದೇನೆ. ಆದ್ದರಿಂದ ಪೋಷಕರು ಮಕ್ಕಳಿಗೆ ಕಡ್ಡಾಯವಾಗಿ ಉನ್ನತ ಶಿಕ್ಷಣ ಕೊಡಿಸಬೇಕೆಂದು ಹೇಳಿದರು.

ದಲಿತ ಮುಖಂಡ ಶಿವಮೂರ್ತಿ ಮಾತನಾಡಿ ನಾವೆಲ್ಲರೂ ಒಗ್ಗಟ್ಟಿನ ಪ್ರದರ್ಶನವನ್ನು ನೀಡಬೇಕು. ಡಾ|| ಬಿ.ಆರ್.ಅಂಬೇಡ್ಕರ್‌ರವರು ಬರೆದ ಸಂವಿಧಾನ ವಿಶ್ವಕ್ಕೆ ಮಾದರಿಯಾಗುವಂತಹ ಸಂವಿಧಾನವನ್ನು ಬರೆದಿದ್ದಾರೆ ತಾವೆಲ್ಲರೂ ಡಾ|| ಬಿ.ಆರ್.ಅಂಬೇಡ್ಕರ್‌ರವರ ಸಿದ್ದಾಂತವನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಡಾ|| ಬಿ.ಆರ್.ಅಂಬೇಡ್ಕರ್‌ರವರು ಆಗಿನ ಸರ್ಕಾರ ೬ ಅಡಿ ೩ ಅಡಿ ಜಾಗ ಕೊಡಲಿ ಅವರನ್ನು ಲೋಕಸಭಾ ಚುನಾವಣೆಯಲ್ಲಿ ೩ ಬಾರಿ ಸೋಲನ್ನು ಅನುಭವಿಸಿದರು. ಆದರೆ ಅವರು ಎದೆಗುಂದಲಿಲ್ಲ. ದೊಡ್ಡ ಹೋರಾಟ ಮಾಡಿದರು, ಸಂವಿಧಾನದಿAದಲೇ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶೈಲಮಂಜಣ್ಣ ಅಧ್ಯಕ್ಷರಾಗಿದ್ದಾರೆ. ಜಾತಿ ಗಣತಿ ವರಧಿ ಸಮೀಕ್ಷೆ ಮಾಡುವುದಕ್ಕೆ ಅಧಿಕಾರಿಗಳು ಬರುತ್ತಿದ್ದು ಮಾದಿಗ ಎಂದು ಹೆಸರು ನೊಂದಾಯಿಸಬೇಕೆAದು ತಿಳಿಸಿದರು. ಅಟ್ರಾಸಿಟಿ ಕಮಿತಿ ಸದಸ್ಯರಾದ ಡಿ.ರಾಜಪ್ಪ ಮಾತನಾಡಿ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ಡಾ|| ಬಿ.ಆರ್.ಅಂಬೇಡ್ಕರ್‌ರವರು ಜಯಂತಿ ಅದ್ದೂರಿಯಾಗಿ ಆಚರಿಸುತ್ತಿರುವುದು ನನಗೆ ಬಹಳ ಖುಷಿತಂದಿದೆ. ನಮ್ಮ ದೇಶದ ಪ್ರಪ್ರಥಮ ಕಾನೂನು ಸಚಿವರಾಗಿದ್ದರು. ಅವರಿಗೆ ಅಮೇರಿಕಾದಲ್ಲಿ ಪ್ರಶಸ್ತಿ ವಿಧಿಸಿದರು. ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎನ್ನುವ ೩ ಮಂತ್ರಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ವಿಶ್ವಕ್ಕೆ ನಾಯಕರಾಗಿದ್ದಾರೆ ಎಂದರು.

ನಿವೃತ್ತ ತಹಶೀಲ್ದಾರ್‌ರಾದ ಎನ್.ರಘುಮೂರ್ತಿ ಮಾತನಾಡಿ ಅಂಬೇಡ್ಕರ್ರವರನ್ನು ಆಗಿನ ಸರ್ಕಾರ ನಡೆಸಿಕೊಂಡ ರೀತಿಯ ಬಗ್ಗೆ ಅವರ ಕೊನೆಯ ದಿನಗಳಲ್ಲಿ ತುಂಬಾ ನೊಂದಿದ್ದರು ಶೋಷಿತರ ಬೆಳಕು ಅಂಬೇಡ್ಕರ್ ಸಂಸ್ಕಾರ ಯುತ ಕುಟುಂಬ ಅಂಬೇಡ್ಕರ್ ಅವರದ್ದು ಇಡೀ ತಮ್ಮ ಜೀವನವನ್ನು ಸಮಾಜಕ್ಕೋಸ್ಕರ ಸವೆಸಿದವರು ತನಗೋಸ್ಕರ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ನಿಸ್ವಾರ್ಥದ ಬದುಕು ಅಂಬೇಡ್ಕರ್ ಅವರದಾಗಿತ್ತು ಶೋಷಿತರ ನೊಂದವರ ಮುಖದಲ್ಲಿ ನಗುತರಿಸುವ ಉದ್ದೇಶ ಅಂಬೇಡ್ಕರ್ ಅವರಿಗೆ ಇತ್ತು ಶೋಷಿತರ ಎಲ್ಲ ಕಷ್ಟ ಅವಮಾನ ಅಸ್ಪೃಶ್ಯತೆಯನ್ನು ಮನಗಂಡAತಹ ಅಂಬೇಡ್ಕರ್ ಈ ಜನ ನೆಮ್ಮದಿಯಿಂದ ಬದುಕಲು ಮತ್ತು ಸ್ವಾಭಿಮಾನದಿಂದ ಬದುಕಲು ರಾಜ್ಯಂಗದ ಮುಖಾಂತರ ಕಾನೂನಿನ ದಾರಿ ಮಾಡಿಕೊಟ್ಟರು ಶೋಷಿತರು ಸ್ವಾಭಿಮಾನಿಗಳಾದರೆ ಮತ್ತು ಸ್ವಾವಲಂಬಿಗಳಾದರೆ ಅದೇ ಅಂಬೇಡ್ಕರ್ ಅವರಿಗೆ ನೀಡುವಂತಹ ಗೌರವವಾಗಿರುತ್ತದೆ ಇದನ್ನು ಗಮನದಲ್ಲಿಟ್ಟುಕೊಂಡು ಈ ಸಮುದಾಯ ಆರ್ಥಿಕವಾಗಿ ಸಾಮಾಜಿಕವಾದ ಶೈಕ್ಷಣಿಕವಾಗಿ ಸದೃಢವಾಗಬೇಕೆಂದು ಮನವಿ ಮಾಡಿದರು.

ಡಿ.ಸಿ.ಸಿ. ಬ್ಯಾಂಕ್ ನಿರ್ಧೇಶಕರು ವಿನೋದಸ್ವಾಮಿ ಮಾತನಾಡಿ ಮತದಾನದ ಹಕ್ಕು ಕೊಡುವುದಕ್ಕೂ ಮುಂಚೆ ಆಸ್ತಿ-ಪಾಸ್ತಿ ಇದ್ದಂತವರಿಗೆ ಮಾತ್ರ ಮತದಾನ ಹಕ್ಕು ಇತ್ತು ಆದರೆ ಮತದಾನ ಹಕ್ಕು ನಮಗೆ ತಂದು ಕೊಟ್ಟಿದ್ದು ಡಾ|| ಬಿ.ಆರ್.ಅಂಬೇಡ್ಕರ್‌ರವರು ನಮ್ಮ ದೇಶದ ಪಿತಾಮಹ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರು ಅತೀ ಹೆಚ್ಚು ೩೫ ಪದವಿ ಪಡೆದ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ತಿಮ್ಮಪ್ಪಯ್ಯನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶೈಲಮಂಜಣ್ಣ, ಹರಿಪ್ರಸಾದ್, ಕೆ.ಪಿ.ಸಿ.ಸಿ. ರಾಜ್ಯ ಸಂಚಾಲಕರಾದ ಹಿರೇಹಳ್ಳಿ ಮಲ್ಲೇಶ್, ನಿಂಗರಾಜ್, ಕುದಾಪುರ ತಿಪ್ಪೇಸ್ವಾಮಿ, ಡಿ.ಎಸ್.ಎಸ್. ಮುಖಂಡ ಟಿ.ಮಂಜಣ್ಣ, ವೈ.ಬಸವರಾಜ್, ಉಪನ್ಯಾಸಕರಾದ ಹನುಮಂತ, ಶಿವಣ್ಣ, ತಿಮ್ಮಪ್ಪಯ್ಯನಹಳ್ಳಿ ಮಾಜಿ ಗ್ರಾ.ಪಂ. ಅಧ್ಯಕ್ಷರಾದ ತಿಪ್ಪೇಸ್ವಾಮಿ, ಸದಸ್ಯ ರೇವಣ್ಣ, ಹಟ್ಟಿ ಯಜಮಾನರು, ಯುವಕರು, ಯುವತಿಯರು ಕಾರ್ಯಕ್ರಮದಲ್ಲಿ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading