ನಾಯಕನಹಟ್ಟಿ: ಮಾ.28.
ನಾಯಕನಹಟ್ಟಿ ಪಟ್ಟಣದ ಸರ್ಕಾರಿ ಸಮುದಾಯ ಕೇಂದ್ರದಲ್ಲಿ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಹಾಗೂ ಕರವೇ ಕನ್ನಡ ಸೇನೆ, ಚಿತ್ರದುರ್ಗ ಜಿಲ್ಲಾ ಅಂಧತ್ವ ನಿಯಂತ್ರಣಾ ವತಿಯಿಂದ 60 ವರ್ಷ ಮೇಲ್ಪಟ್ಟ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಹಿರಿಯ ನಾಗರಿಕರಿಗೆ ಕಣ್ಣಿನ ಸಮಸ್ಯೆ ಇರುವಂತಹ ಹಿರಿಯ ನಾಗರಿಕರಿಗೆ ಅನುಕೂಲವಾಗಲೆಂದು ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ತಿಳಿಸಿದರು.



ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಸತತ 5 ವರ್ಷಗಳಿಂದ ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ಹಿರಿಯ ನಾಗರಿಕರ ಕಣ್ಣಿನ ಸ್ವಾಸ್ಥ್ಯಕ್ಕಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವಿಶೇಷ ಅಭಿಯಾನ ಯೋಜನೆಯನ್ನು ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ ನಾಯಕನಹಟ್ಟಿ ಹೋಬಳಿಯ ಕೇಂದ್ರ ಬಿಂದುವಾಗಿರುವ ಸರ್ಕಾರಿ ಸಮುದಾಯ ಆಸ್ಪತ್ರೆ ಆವರಣದಲ್ಲಿ ಹಿರಿಯ ನಾಗಕರಿಗೆ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರಚಿಕಿತ್ಸೆ ಶಿಬಿರ ಯಶ್ವಸಿಯಾಗಿ ಬಂದಿದೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉಚಿತ ಶಿಬರಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರವೇ ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಜಾಗನೂರಹಟ್ಟಿ ಮುತ್ತಣ್ಣ ಹೇಳಿದರು.

ಈ ಶಿಬಿರವು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2.00 ರವರೆಗೆ ನಡೆಯಲಿದ್ದು, ಈ ಉಚಿತ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಹಿರಿಯ ನಾಗರಿಕರು ಸದುಪಯೋಗ ಪಡೆದುಕೊಳ್ಳುಬೇಕು, ಶಿಬಿರಕ್ಕೆ ಬರುವಾಗ ಮೊಬೈಲ್ ನಂಬರ್, 2 ಪೋಟೋ ಜೊತೆಗೆ ಹಿರಿಯ ನಾಗರಿಕರ ಗುರುತಿನ ಚೀಟಿ, ಪಾನ್ ಕಾರ್ಡ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಬಿಪಿಎಲ್ ಪಡಿತರ ಚೀಟಿ, ಹಿರಿಯ ನಾಗರಿಕರ ಜೊತೆ ಮನೆಯ ಸದಸ್ಯರು ಒಬ್ಬರು ಬರತಕ್ಕದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಲ್ಲಾ ನಾಗರಿಕರು ಈ ಶಿಬಿರದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರವೇ ಕನ್ನಡ ಸೇನೆ ಹೋಬಳಿ ಅಧ್ಯಕ್ಷ ಜೋಗಿಹಟ್ಟಿ ಕೆ.ಜಿ. ಮಂಜುನಾಥ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಅಧ್ಯಕ್ಷ ನಾಗರಾಜ, ಕರವೇ ಕನ್ನಡ ಸೇನೆ ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕೆ.ಪಿ. ನಾಗರಾಜ್, ಯುವ ಕಾರ್ಯದರ್ಶಿ ಪ್ರೇಮ್ ಕುಮಾರ್, ಸದಸ್ಯರಾದ ರಮೇಶ್, ಪಾಲಯ್ಯ, ಮದರ್ ತೆರೇಸಾ ಸಂಸ್ಥೆಯ ಸದಸ್ಯರಾದ ಸುಲೋಚನ ತಳಕು, ಎನ್. ಉದಯ ಕಿರಣ್, ಶಂಕರ್ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿಗಳಾದ ತ್ಯಾಗರಾಜ್, ರವಿ, ವೇಣು, ಸೌಂದರ್ಯ, ಸ್ನೇಹ, ರಕ್ಷಿತಾ, ರಾಧಿಕಾ , ನಾಯಕನಹಟ್ಟಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಿ.ಎಂ. ಮಂಜಣ್ಣ, ಜ್ಞಾನವತಿ ಎಂ.ಆರ್. ತಿಪ್ಪೇಸ್ವಾಮಿ, ಸೇರಿದಂತೆ ಸಾರ್ವಜನಿಕರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.