September 14, 2025
1740751475071.jpg

ಚಳ್ಳಕೆರೆ ಫೆ.,28

ಮುಖ್ಯಪೇದೆ ಮೇಲೆ ಹಲ್ಲೆ ಮಾಡಿದ ಮೂರು ಜನರನ್ನು ಪೋಲಿಸರು ಪ್ರಕರಣ ದಾಖಲಿಕೊಂಡು ಬಂಧಿಸಿದ ಘಟನೆ ನಡೆದಿದೆ.
ಠಾಣಾ ಎಸ್.ಹೆಚ್.ಓ ಕರ್ತವ್ಯದಲ್ಲಿದ್ದಾಗ ಚಳ್ಳಕೆರೆ ಸರ್ಕಾರಿ
ಆಸ್ಪತ್ರೆಯಿಂದ ಬಂದ ಮೆಮೊವನ್ನು ಸ್ವೀಕರಿಸಿಕೊಂಡು ಗಾಯಾಳು ಅಜಗರ್ ಅಲಿ ಅವರ ಹೇಳಿಕೆಯನ್ನು ಪಡೆಯಲು ಗುರುವರ
ರಾತ್ರಿ 9:45 ಗಂಟೆಗೆ ಪೋಲಿಸ್ ಪೇದೆ ಜೊತೆ ಮುಖ್ಯಪೇದೆ ವೆಂಕಟೇಶ್ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ಹೋದಾಗ, ತೀವ್ರ ನಿಗಾ ಘಟಕದಲ್ಲಿ ಗಾಯಾಳುಗಳನ್ನು ನೋಡಲು
ಗುಂಪಾಗಿ ಜನರು ಸೇರಿಕೊಂಡಿದ್ದು ರೋಗಿಗಳಿಗೆ ತೊಂದರೆಯಾಗುತ್ತದೆ ಎಂದು ಹೊರಗಡೆ ಕಳುಹಿಸುತ್ತಾ, ಕಾಂಪೌಂಡ್ ಗೇಟ್ ಹತ್ತಿರ ಬಂದಾಗ,
ರಾಜ ಎನ್ .ಅಜಯ್ ರ ಹಾಗೂ ಖಲೀಲ್ ಇತರರು ಅಕ್ರಮ ಗುಂಪು
ಕಟ್ಟಿಕೊಂಡು ಬಂದು, ಅವ್ಯಶ್ಚ್ಯ ಶಬ್ದಗಳಿಂದ ಜುನೇದ್, ನನ್ನ ಸ್ನೇಹಿತ ಅಜಗರ್ ಅಲಿಗೆ ಹೊಡೆದಿದ್ದಾನೆ ಅವನಿಗೆ ಬಿಡುವುದಿಲ್ಲ ಎಂದು ಜೋರಾಗಿ ಬಾಯಿ
ಮಾಡುತ್ತಾ ಆಸ್ಪತ್ರೆಯ ಒಳಗೆ ಹೋಗಲು ಪ್ರಯತ್ನಿಸಿದ್ದು, ಗಲಾಟೆಯಾಗಬಹುದೆಂದು ಅವರನ್ನು ತಡೆಯಲು ಹೋದ ಮುಖ್ಯ ಪೇದೆ ವೆಂಕಟೇಶ್
ತಡೆದಿದ್ದು, ಅದಕ್ಕೆ ಅವರುಗಳು ಈ ಪೊಲೀಸ್‌ ಏನೂ ಮಾಡುತ್ತೀರಾ, ನಮ್ಮನ್ನು ತಡೆಯಲು ಯಾರಿಂದ ಸಾಧ್ಯ?
ನೋಡೋಣ ಅಂತಾ ಏಕಾಏಕಿಯಾಗಿ ರಾಜ @ ಮುತ್ತುರಾಜ ಎಂಬುವನು ಬಲಗೈಯಿಂದ ಮುಷ್ಟಿಕಟ್ಟಿಕೊಂಡು ಮುಖ್ಯಪೇದೆಯ ಎದೆಗೆ ಬಲವಾಗಿ
ಗುದ್ದಿ, ಮತ್ತು ಅವನ ಜೊತೆಯಲ್ಲಿ ಬಂದಿದ್ದ ಅಜಯ್ ರುದ್ರಮುನಿ @ ತಮ್ಮಣ ಮತ್ತು ಖಲೀಲ್ ರವರು ಸೇರಿಕೊಂಡು ಪ
ಹೊಟ್ಟೆಗೆ, ಪಕ್ಕೆಗೆ ಮತ್ತು, ಮೈಕೈಗೆ ಕೈಗಳನ್ನು ಮುಷ್ಟಿಕಟ್ಟಿಕೊಂಡು ಗುದ್ದಿ, ಗುಂಪಿನಲ್ಲಿದ್ದ ಇತರೆಯವರು ಸಹ ಸೇರಿಕೊಂಡು ಮುಖ್ಯ ಪೇದೆಯು
ಧರಿಸಿದ ಸಮವಸ್ತ್ರವನ್ನು ಹಿಡಿದು ಏಳೆದಾಡಿ ಬಟನ್ ಕಿತ್ತು ಹಾಕಿ ಕೈಕಾಲುಗಳಿಂದ ಪಿರ್ಯಾದಿಯ ಮೈಕೈಗೆ ಕೈಕಾಲುಗಳಿಂದ ಹೊಡೆದಿರುತ್ತಾನೆ.
ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಹಲ್ಲೆ ಮಾಡಿರುವ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ, ಅಂತಾ ಮುಖ್ಯಪೇದೆ ನೀಡಿದ್ದ ದೂರನ್ನು ಪಡೆದುಕೊಂಡುಮೂರು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದು
ಅಜ್ಗರ್ ಅಲಿ ಮೇಲೆ ಬ್ಲೇಡಿನಿಂದ ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗಿದ್ದ ಜುನೇದ್ ನನ್ನು ಪೋಲಿಸರ್ ವಶಕ್ಕೆ ಪಡದು ಒಟ್ಟು ನಾಲ್ಕು ಜನರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ನೀಡಿದು ತನಿಖೆ ಕೈಕೊಂಡಿದ್ದು. ಘಟನಾ ಸ್ಥಳ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾರಕ್ಷಣಾಧಿಕಾರಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading