
ನಾಟಕಗಳು ಮನರಂಜನೆಗಷ್ಟೇ ಅಲ್ಲದೆ ಸಾಮಾಜಿಕ ಪ್ರಜ್ಞೆಗೂ ಕೂಡ ಸಹಕಾರಿಯಾಗುತ್ತವೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘು ಮೂರ್ತಿ ಹೇಳಿದರು


ಅವರು ನಾಯಕನಹಟ್ಟಿ ಸಮೀಪದ ಜೋಗಿಹಟ್ಟಿ ಗ್ರಾಮದಲ್ಲಿ ಕಾಟಮ್ ಲಿಂಗಯ್ಯ ದೇವರ ಗುಗ್ರಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸಾಮಾಜಿಕ ನಾಟಕದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಸಾಮಾಜಿಕ ನಾಟಕಗಳ ಪ್ರದರ್ಶನಗಳಿಂದ ಸಮಾಜದಲ್ಲಿರುವಂತಹ ಅಂದತ್ವ ಮೂಢನಂಬಿಕೆ ಅಧರ್ಮ ಅಶಾಂತಿ ದೂರವಾಗುತ್ತದೆ ಪ್ರತಿಯೊಂದು ಸಮಾಜದ ಹಿಂದೆ ಮತ್ತು ಆ ಸಮಾಜದ ಮುನ್ನಡೆಗೆಆ ಸಮಾಜದ ಪರಂಪರೆ ಹಿರಿಮೆ ಮತ್ತು ಇತಿಹಾಸ ಕಾರಣವಾಗುತ್ತದೆ ಈ ಭಾಗದ ಬಹುತೇಕ ಜನರು ಶ್ರೀ ಶ್ರೀಕೃಷ್ಣನ ಅನುಯಾಯಿಗಳು ರಾಮಾಯಣವನ್ನು ಮತ್ತು ಭಗವದ್ಗೀತೆಯನ್ನ ಪ್ರಪಂಚದ ಶೇಕಡ 80ರಷ್ಟು ಜನ ಓದುತ್ತಾರೆ ಭಾರತದ ಸನಾತನ ಸಂಸ್ಕೃತಿಯು ಶ್ರೀಮಂತವಾಗಿ ಬೆಳೆದಿದೆ ಭಗವದ್ಗೀತೆಯ ಶ್ರೀಕೃಷ್ಣನ ಸಂದೇಶಗಳು ಮತ್ತು ಆದರ್ಶಗಳು ಬದುಕಿಗೆ ಜೀವಾಮೃತವಿದ್ದಂತೆ ಜಗತ್ತಿಗೆ ಮಾನವೀಯ ಬೆಳಕನ್ನು ಹಚ್ಚಿಸಿದ್ದು ಶ್ರೀಕೃಷ್ಣ ದ್ವೇಷ ಅಸೂಯೆ ಇವುಗಳನ್ನು ದೂರ ಮಾಡಬೇಕೆಂದಿದ್ದು ಶ್ರೀಕೃಷ್ಣ ಹಾಗೆಯೇ ಪ್ರತಿಯೊಬ್ಬರು ಆತ್ಮ ಗೌರವವನ್ನು ಹೊಂದಿರಬೇಕು ಪ್ರತಿಯೊಬ್ಬರಲ್ಲೂ ಸೇವಾ ಮನೋಭಾವನೆ ಇರ್ಬೇಕು ನೊಂದವರ ಮತ್ತು ಕಷ್ಟದಲ್ಲಿರುವವರ ಮುಖದಲ್ಲಿ ನಗುತರಿಸುವ ಕೆಲಸವನ್ನು ಸಮಾಜದಲ್ಲಿ ಪ್ರತಿಯೊಬ್ಬರು ಮಾಡಬೇಕೆಂದು ಕರೆ ನೀಡಿದ್ದು ಶ್ರೀಕೃಷ್ಣ ಆದುದರಿಂದ ಒಳ್ಳೆಯ ನಾಗರಿಕರಾಗಲು ಪ್ರಾಮಾಣಿಕತೆ ಸತ್ಯ ಮತ್ತು ಪರೋಪಕಾರಗಳಂತಹ ಅದ್ಭುತ ಗುಣಗಳನ್ನು ರೂಡಿಸಿಕೊಳ್ಳಲು ಹಾಗೂ ಈ ಭಾಗದ ಪ್ರತಿಯೊಂದು ಕುಟುಂಬಗಳಲ್ಲೂ ಕೂಡ ವೈಚಾರಿಕತೆ ಬೆಳೆಸಿಕೊಳ್ಳಬೇಕು ಪ್ರತಿಯೊಂದು ಮಗುವಿಗೂ ಕೂಡ ಉನ್ನತ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಕೊಡಿಸಬೇಕೆಂದು ಮನವಿ ಮಾಡಿದರು
ಇದೇ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಚೆನ್ಗನಹಳ್ಳಿ ಮಲ್ಲೇಶ್ ಜೋಗಿ ಹಟ್ಟಿ ಗೋವಿಂದಪ್ಪ ಮುಂತಾದವರು ಮಾತನಾಡಿದರು
ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಎಷ್ಟು ಅಧ್ಯಕ್ಷ ಶಿವಣ್ಣ ಉದ್ಯಮಿಯ ಕಮಲಗೊಂದಿ ರಘುರಾಮರೆಡ್ಡಿ ಗ್ರಾಮದ ಹಿರಿಯ ಮುಖಂಡ ತಿಪ್ಪೇಸ್ವಾಮಿ ಬಾಲರಾಜು ದೇವರಾಜು ಕಟ್ಟೆ ಗೌಡ್ರು ಮುಂತಾದವರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.