
ನಾಯಕನಹಟ್ಟಿ : ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಕಂಚಿ ಕಾಮಕೋಟಿ ಮೆಡಿಕಲ್ ಟ್ರಸ್ಟ್ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ,ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಚಿತ್ರದುರ್ಗ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ
ಚಿತ್ರದುರ್ಗ ಜಿಲ್ಲೆ, ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿ ಚಳ್ಳಕೆರೆ ಇವರ ಸಂಯುಕ್ತಾಶ್ರಯದಲ್ಲಿ
ಮದರ್ ತೆರೇಸಾ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ). ನಾಯಕನಹಟ್ಟ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ
ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.


ಮದರ್ ತೆರೇಸಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಶಿವಮೂರ್ತಿ ಮಾತನಾಡಿ ಈ ವರ್ಷದಲ್ಲಿ ಎರಡನೇ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನಾಯಕನಹಟ್ಟಿ ಪಟ್ಟಣ ಹಾಗೂ ಹೋಬಳಿಯ ವ್ಯಾಪ್ತಿಗೆ ಬರುವ ಎಲ್ಲಾ ಹಳ್ಳಿಗಳ ಹಿರಿಯ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ತರಹದ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುತ್ತೇವೆ. ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಸಂಚರಿಸಿ ವೃದ್ದರಲ್ಲಿ ಕಣ್ಣಿನ ಸಮಸ್ಯೆ ಇರಬಾರದು ಎಂಬ ಉದ್ದೇಶದಿಂದ ಜಿಲ್ಲೆಯ ವಿವಿಧ ತಾಲೂಕು ಹೋಬಳಿಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ನಂತರ ಕರವೇ ಹೋಬಳಿ ಅಧ್ಯಕ್ಷ ಪಿ. ಮುತ್ತಯ್ಯ ಜಾಗನೂರಹಟ್ಟಿ ಮಾತನಾಡಿ ಈ ದಿನ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿ, ಶಂಕರ ಕಣ್ಣಿನ ಆಸ್ಪತ್ರೆ, ಮದರ್ ತೆರೇಸಾ ಸಂಸ್ಥೆ ಮತ್ತು ಕರವೇ ಕನ್ನಡ ಸೇನೆ ವತಿಯಿಂದ ಕಣ್ಣಿನ ಕ್ಯಾಂಪ್ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇದಕ್ಕಿಂತ ಹೆಚ್ಚಾಗಿ ಕಣ್ಣಿನ ಸಮಸ್ಯೆಯನ್ನು ಇರುವವರನ್ನು ಗುರುತಿಸಿ ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಇದರ ಬಗ್ಗೆ ನಾವೆಲ್ಲರೂ ಜಾಗೃತಿ ಮೂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮದರ್ ತೆರೇಸಾ ಗ್ರಾಮೀಣ ಸಂಸ್ಥೆ ಅಧ್ಯಕ್ಷ ಬಿ.ನಾಗರಾಜ, ಕರವೇ ಕನ್ನಡ ಸೇನೆ ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಡಾll ಸಲ್ಮನ್, ಡಾll. ಪಾಂಚಜನ್ಯ, ವಿನೋಬಾ, ಸಚಿನ್, ಡ್ರೈವರ್ ಶಿವಣ್ಣ, ಜಿಪಿ, ವಾಣಿ, ಅಂಕಿತ, ಚೇತನ್, ಸುಪ್ರೀತಾ, ಉದಯ ಕಿರಣ್, ಮಮತಾ, ವಚನಶ್ರೀ ಇನ್ನು ಮುಂತಾದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.