
ಚಳ್ಳಕೆರೆ ಫೆ.28
ರೈತರು ಕೃಷಿಯ ಜತೆಗೆ ಹೈನುಗಾರಿಕೆಯನ್ನು ಉಪಕಸಬು ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಲು ಸಾದ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ
ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ.ಚಳ್ಳಕೆರೆ, ಮೊಳಕಾಲ್ಕೂರು ಮತ್ತು ಹಿರಿಯೂರು ತಾಲ್ಲೂಕು ವ್ಯಾಪ್ತಿಯ ಉಪ ಕಛೇರಿಯ ಉದ್ಘಾಟನಾ ಸಮಾರಂಭ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಹಾಲೂ ಉತ್ಪನ್ನಗಳ ಮಾರಾಟ ಮಳಿಗೆ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರೆವೇರಿಸಿ ಮಾತನಾಡಿದರು.
ರೈತರು ಹೈನುಗಾರಿಕೆ ಸೌಲಭ್ಯಗಳನ್ನು ಪಡೆಯಲು ಚಿತ್ರದುರ್ಗದ ಕಚೇರಿಗೆ ಹೋಗ ಬೇಕಿತ್ತು ಈಗ ಚಳ್ಳಕೆರೆ ನಗರದಲ್ಲೇ ಹಾಲು ಉತ್ಪಾದಕರ ಒಕ್ಕೂಟದ ಕಚೇರಿ ಉದ್ಘಾಟನೆಯಿಂದ ರೈತರಿಗೆ ಸಹಕಾರಿಯಾಗಲಿದೆ ರೈತರು ಕೃಷಿ ಚಟುವಟಿಕೆ ಜತೆಗೆ ಹೈನುಗಾರಿಕೆಯಲ್ಲಿ ಗುಣ ಮಟ್ಟದ ಹಾಲು ಉತ್ಪಾದನೆ ಮಾಡಿ ಆರ್ಥಿಕವಾಗಿ ಮುಂದೆ ಬರಲು ಸಾಧ್ಯ ಎಂದರು.
ನಿರ್ದೇಶಕ ಬಿ.ಸಿ.ಸಂಜೀವಮೂರ್ತಿ ಮಾತನಾಡಿ ಹಾಲಿನಿಂದ ಏನೆಲ್ಲಾ ತಯಾರಾಗುತ್ತದೆ ಎಂಬುದು ಬಹುಪಾಲು ಹಾಲು ಮಾರುವವರಿಗೆ ಗೊತ್ತಿರಲಿಕ್ಕಿಲ್ಲ. ಒಮ್ಮೆ ನಂದಿನಿ ಮಾರಾಟ ಮಳಿಗೆಗೆ ಭೇಟಿ ನೀಡಿದರೆ ಹಾಲಿನಿಂದ ಕೇವಲ ಮೊಸರು ಮಜ್ಜಿಗೆ ಮಾತ್ರ ತಯಾರಾಗುವುದಿಲ್ಲ.
ಧೂದ್‌ಫೇಡಾ, ಶ್ರೀಖಂಡ, ಕುಂದಾ, ಐಸ್‌ಕ್ರಿಮ್, ಜಾಮೂನ್, ತುಪ್ಪ, ಚಾಕೋಲೇಟ್, ಬರ್ಫಿ, ಬಿಸ್ಕೆಟ್, ಹಾಲಿನಪುಡಿ, ಬಾದಾಮ್ ಪುಡಿ ಸೇರಿದಂತೆ ಸುಮಾರು 250 ನಮೂನೆ ತಿನಿಸುಗಳನ್ನು ತಯಾರು ಮಾಡಲಾಗುತ್ತದೆ.
ಕಾಲೇಜು ಆವರಣದಲ್ಲಿ ಹಾಲು ಉತ್ಪನ್ನಗಳ ಮಾರಾಟ ಮಳಿಗೆ ಪ್ರಾರಂಭದಿಂದ ನಂದಿನಿ ಉತ್ಪನ್ನಗಳ ಸೇವನೆಯಿಂದ ದೇಹಕ್ಕೆ ಅಗತ್ಯೆ ಪೌಷ್ಠಿಕತೆ ದೊರೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ
ಸಂಘಗಳ ಒಕ್ಕೂಟ ನಿ, ಶಿವಮೊಗ್ಗ. ಹೆಚ್. ಎನ್. ವಿದ್ಯಾಧರ. ಜಿ. ಪಿ. ರೇವಣಸಿದ್ದಪ್ಪ
ಬಿ. ಆರ್. ರವಿಕುಮಾರ್ ಮಾತನಾಡಿದರು.
ಜಿ. ಬಿ. ಶೇಖರಪ್ಪ .ಗದ್ದಿಗೆತಿಪ್ಪೇಸ್ವಾಮಿ ಇತರರಿದ್ದರು.







About The Author
Discover more from JANADHWANI NEWS
Subscribe to get the latest posts sent to your email.