January 30, 2026
IMG-20250128-WA0169.jpg

ನಾಯಕನಹಟ್ಟಿ: ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊರೆಗಳಹಟ್ಟಿ (ರಾಮದುರ್ಗ) ಗ್ರಾಮಸ್ಥರ ಸಮ್ಮುಖದಲ್ಲಿ ಸಕಲ ಶಾಸ್ತ್ರ ಸಂಪ್ರದಾ ಯದೊಂದಿಗೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಗ್ರಾಮಸ್ಥರು
ದೊರೆಗಳಹಟ್ಟಿ ಗ್ರಾಮ ದೇವತೆ ಚೌಡೇಶ್ವರಿ ದೇವಿ ಮೇಲೆ ಜನರಿಗೆ ಅಪಾರವಾದ ನಂಬಿಕೆ ಇದೆ.
ಜಾತ್ರೆ ಅಂಗವಾಗಿ ಗ್ರಾಮದ ಬೀದಿಗಳನ್ನು ವಿದ್ಯುತ್ ದೀಪಗಳಿಂದ
ಅಲಂಕರಿಸಲಾಗಿದೆ.
ಬಾಳೆಕಂದು,
ಕಟ್ಟಿ ಮಾವಿನ ತೋರಣಗಳನ್ನು ಗ್ರಾಮವನ್ನು ಶೃಂಗರಿಸಿ ಸೋಮವಾರ ರಾತ್ರಿ 8 ಗಂಟೆಗೆ ಶ್ರೀ ಚೌಡೇಶ್ವರಿ ದೇವಿಗೆ ಕಾಸು ಮೀಸಲು ಗಂಗಾ ಪೂಜೆ ಉಡಿಯಕ್ಕಿ ಸ್ಥಾಪನೆ ರಾತ್ರಿ 1. 30 ರಿಂದ 4:30ವರೆಗೆ 101 ಮಹಾಪೂಜೆ ಬೆಳಗಿನ ಜಾವ 5:00 ಗಂಟೆಗೆ
ಗ್ರಾಮದ ಹೃದಯ ಭಾಗದಲ್ಲಿರುವ ದೇಗುಲದ ಮುಂಭಾಗದಲ್ಲಿ ಅಗ್ನಿಕುಂಡ- ವನ್ನು ಸಿದ್ಧಪಡಿಸಿ ಬೆಂಕಿ ಹಾಕಲಾಯಿತು.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಗಂಗಾಪೂಜಾ ಸಾಮಗ್ರಿ ಗಳನ್ನು ಸಿದ್ಧಪಡಿಸಿಕೊಂಡು ದೇಗುಲದ ಮುಂಭಾಗಕ್ಕೆ ಬಂದರು. ಗ್ರಾಮದ ಮಹಿಳೆಯರು ಮಕ್ಕಳು – ಹಿರಿಯ ಜೀವಗಳು ದೊರೆಗಳ ಹಟ್ಟಿ ಹೊರವಲ- ಯದಲ್ಲಿರುವ ಹಳ್ಳಕ್ಕೆ ದೇವಿಯ ಉತ್ಸ. ವಮೂರ್ತಿಯನ್ನು ಹೊತ್ತು ತಂದರು. ನಂತರ ಸಂಪ್ರದಾಯದಂತೆ ದೇವಿಗೆ ಗಂಗಾಪೂಜೆ ನೆರವೇರಿಸಿ ಗ್ರಾಮಕ್ಕೆ ಬಂದರು.
ಮರಳಿ
ಮೆರವಣಿಗೆ ಮೂಲಕ
ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊರೆಗಳಹಟ್ಟಿ ಗ್ರಾಮದಲ್ಲಿ ಮಂಗಳವಾರ ಗ್ರಾಮ ದೇವತೆ ಶ್ರೀ ಚೌಡೇಶ್ವರಿ ದೇವಿ ಜಾತ್ರಾ ಉತ್ಸವದ ಪ್ರಯುಕ್ತ ಅಗ್ನಿಕುಂಡ ಹಾಯುವ ಪೂಜೆ ನೆರವೇರಿಸಲಾಯಿತು ಪ್ರದರ್ಶನ ಹಾಕಿ ನೀರು ಚಿಮುಕಿಸಿದ್ದೇ ತಡ ದೇವಿಯ ಉತ್ಸವಮೂರ್ತಿಯನ್ನು ಹೊತ್ತ ಯುವಕರು ಈಗಾಗಲೇ ಸಿದ್ಧ ಪಡಿಸಿದ್ದ ಅಗ್ನಿಕುಂಡವನ್ನು ಮೂರು ಬಾರಿ ಪ್ರವೇಶಿಸಿ ಭಕ್ತಿ ಮೆರೆದರು. ನಂತರ ಉತ್ಸವ ಮೂರ್ತಿಯನ್ನು ದೇಗುಲದ ಅವರಣದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಇನ್ನೂ ಜಾತ್ರೆಗೆ ಆಗಮಿಸಿದ ಭಕ್ತಾದಿಗಳಿಗೆ ಅನ್ನದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಯಿತು.

ಇದು ವೇಳೆ ಗ್ರಾಮದ ಮುಖಂಡರಾದ. ಪಿ.ಎಚ್. ತಿಪ್ಪೇಸ್ವಾಮಿ ಮಾತನಾಡಿದರು ಬುಡಕಟ್ಟು ಸಂಸ್ಕೃತಿ ಪ್ರತಿಕವಾಗಿರುವ ಚೌಡೇಶ್ವರಿ ದೇವಿ ನಾಯಕನಹಟ್ಟಿ ಪಾಳೇಪಟ್ಟು ಆಳಿದ ದೊರೆಗಳು ಮೇಲೆ ನಿಂತಿರುವ ದೊರೆಗಳ ಹಟ್ಟಿಯಲ್ಲಿ ನೂರಾರು ವರ್ಷಗಳಿಂದ ಚೌಡೇಶ್ವರಿ ದೇವಿ ಜಾತ್ರೆ ಆಚರಿಸುತ್ತಾ ಬಂದಿದ್ದೇವೆ ಶ್ರೀ ಚೌಡೇಶ್ವರಿ ದೇವಿಯ ಅನುಗ್ರಹದಿಂದ ಈ ಭಾಗದಲ್ಲಿ ಉತ್ತಮ ಮಳೆ ಬೆಳೆ ಸಮೃದ್ಧಿ ನೀಡಲಿ ಹಾಗೂ ದೇವಿಯ ಆಶೀರ್ವಾದ ಗ್ರಾಮಸ್ಥರ ಮೇಲೆ ಸರ್ವ ಭಕ್ತಾದಿಗಳ ಮೇಲೆ ಇರಲಿ ಎಂದರು.

ಇನ್ನೂ ದೊರೆ ತಿಪ್ಪೇಸ್ವಾಮಿ ನಾಯಕ ಮಾತನಾಡಿದರು. ಗ್ರಾಮದ ಆರಾಧ್ಯ ದೇವತೆ ಶ್ರೀ ಚೌಡೇಶ್ವರಿ ಮಹಾ ದೇವತೆ ಗ್ರಾಮದಲ್ಲಿ ಜನರಿಗೆ ದನ ಕರುಗಳಿಗೆ ಯಾವುದೇ ರೋಗರುಜನೆ ಬಾರದಂತೆ ಕಾಪಾಡುತ್ತಾಳೆ ಭಕ್ತರು ಇಷ್ಟಾರ್ಥಗಳನ್ನು ಪೂರೈಸುವ ಮಹಾ ಶಕ್ತಿ ದೇವತೆ ಎಂದರು.

ಈ ಸಂದರ್ಭದಲ್ಲಿ ನಲಗೇತನಹಟ್ಟಿ ಗ್ರಾಮ ಪಂಚಾಯತಿ ಸದಸ್ಯರಾದ ಬಂಗಾರಪ್ಪ ರಾಮದುರ್ಗ, ಕೆ.ಬಿ. ಬೋಸಯ್ಯ, ದ್ರಾಕ್ಷಾಯಿಣಿ ಸುಧಾನಂದ, ಗ್ರಾಮಸ್ಥರಾದ ಪಿ. ಟಿ. ರುದ್ರಮುನಿ, ಡಿ.ಬಿ. ಬೋರಯ್ಯ, ದೊರೆ ಬಸವರಾಜ ನಾಯಕ, ವೈ.ಒ. ಮಂಜುನಾಥ್ ಗೂಳಿ, ಪೂಜಾರಿ ಮಲ್ಲಿಕಾರ್ಜುನ್, ಶ್ರೀಧರ್ ನಾಯಕ, ಜಯಚಂದ್ರ, ಚಂದ್ರಣ್ಣ, ನಿರಂಜನ್ ಮೂರ್ತಿ, ಲಿಂಗರಾಜು ಬಿ ಎಲ್ ಹಳ್ಳಿ, ಆರ್ ಎಸ್ ರವಿ, ಸೇರಿದಂತೆ ಸಮಸ್ತ ದೊರೆಗಳಹಟ್ಟಿ (ರಾಮದುರ್ಗ) ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading