ಚಳ್ಳಕೆರೆ ಜ.28
ಬಡಜನರ ಕಲ್ಯಾಣಕ್ಕಾಗಿ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಬಾಕಿ ಉಳಿದಿರುವ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲಭ್ಯ ಕಲ್ಪಿಸುವಂತೆ ತಾಪಂ ಇ.ಒ.ಶಶಿಧರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಾಲೂಕಿನ ಹಲವು ಮಾರ್ಗಗಳಲ್ಲಿ ಸರಕಾರಿ ಬಸು ಸಂಚಾರವಿಲ್ಲದೆ ವಿದ್ಯಾರ್ಥಿಗಳು
ಪ್ರಯಾಣಿಕರು ಸಂಚರಿಸಲು ಅನಾನುಕೂಲವಾಗುತ್ತಿದ್ದು ಅಧಿಕಾರಿಗಳ ಗಮನ ಸೆಳೆದರೂ ಸಾರುಗೆ ಬಸ್ ನಿಗಮದ ಅಧಿಕಾರಿಗಳು ಸಭೆಗೆ ಗೈರಾಗಿದ್ದಾರೆ ಎಂದು ಗ್ಯಾರೆಂಟಿ ಸಮಿತಿ ಸದಸ್ಯರು ಸಭೆಯ ಗಮನ ಸೆಳೆದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ ಸಾರಿಗೆ ಬಸು ಇಲಾಖೆಯ ಸಮಸ್ಯೆಗಳಿವೆ ಸಭೆಗೆ ಹಾಜರಿಯಾಗಲು ತಿಳಿದಿದರು ಸಭೆಗೆ ಬಾರದ ಸಾರಿಗೆ ಬಸ್ ಅಧಿಕಾರಿಗೆ ನೋಟೀಸ್ ಜಾರಿಮಾಡುವಂತೆ ತಾಪಂ ಇಒ ಶಶಿಧರ್ ಇವರಿಗೆ ತಾಕೀತು ಮಾಡಿದರು.
ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪಿಸುವಹಾಗೂ ವಂಚಿತರಿಗೆ ಸೌಲಭ್ಯ ಕಲ್ಪಿಸಲು ಹೋಬಳಿವಾರು ಗ್ಯಾರೆಂಟಿ ಸದಸ್ಯರು ಗ್ರಾಮಗಳನ್ನು ಆಯ್ಕೆಮಾಡಿಕೊಳ್ಳಲಾಗಿ ಆಯಾ ಪಂಚಾತಿ ವ್ಯಾಪ್ತಿಯ ವಂಚಿತ ಫಲಾನುಭವಿಗಳನ್ನುಗುರುತಿಸು ಕೆಲಸ ಹಾಗ ಬೇಕಿದೆ ಎಂದು ಗದ್ದಿಗೆ ತಿಪ್ಪೇಸ್ವಾಮಿ ಹೇಳಿದರು. . ‘ಗೃಹಲಕ್ಷ್ಮಿ’, ‘ಗೃಹಜ್ಯೋತಿ’, ‘ಶಕ್ತಿ’, ‘ಅನ್ನಭಾಗ್ಯ’ ಹಾಗೂ ‘ಯುವನಿಧಿ’ ಯೋಜನೆಗಳಲ್ಲಿ ತಿಂಗಳಿಗೆ ಸುಮಾರು 30 ಲಕ್ಷರೂ ಫಲಾನಿಭವಿಗಳ ಖಾತೆಗೆ ಜಮೆ ಆಗುತ್ತಿದೆ. ತಾಲ್ಲೂಕಿನಲ್ಲಿ ಗ್ಯಾರೆಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ ಹಾಗೂ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು.
About The Author
Discover more from JANADHWANI NEWS
Subscribe to get the latest posts sent to your email.