ಚಳ್ಳಕೆರೆ ಡಿ.27
ನಕಾಶೆಯಲ್ಲಿದ್ದ ರಾಜಕಾಲುವೆ ಕಡತದಲ್ಲಿ ಮಾಯ…
ಹೌದು ಚಳ್ಳಕೆರೆ ನಗರಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ವೆಂಕಟೇಶ್ ಭೇಟಿ ನೀಡಿ ಜಿಟಿ ಜಿಟಿ ಮಳೆಯಲ್ಲೂ ನಗರದ ವಿವಿಧ ಕಡೆ ನಗರೋತ್ತಾನ ಕಾಮಗಾರಿ .ರಸ್ತೆ ಹಾಗೂ ರಾಜಕಾಲುವೆ ಸ್ಥಳಗಳಿಗೆ ಭೇಟಿ ನೀಡಿ ಒರಿಶೀಲನೆ ನಡೆಸಿ ಮಾತನಾಡಿದರು.
ಬಳ್ಳಾರಿ ರಸ್ತೆಯ ರಾಷ್ಟ್ರೀಯ ಹೆದ್ದಾರಿಗೊಂದಿಕೊಂಡ ಪೆಟ್ರೋಲ್ ಬಂಕ್ ನಿಂದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯವರೆಗೆನಾಕಾಶೆಯಲ್ಲಿದ್ದ ರಾಜಕಾಲುವೆಯನ್ನು ದಾಖಲೆಯಲ್ಲಿ ಮಾಯ ಮಾಡಿದ್ದರಿಂದ ಮಳೆ ಹಾಗೂ ತ್ಯಾಜ್ಯ ನೀರು ನಿಂತು ಮಿನಿಕೆರೆಯಂತಾಗಿ ಸಾಂಕ್ರಮಿಕ ರೋಗ ಬೀತಿಯನ್ನುಂಟು ಮಾಡಿತ್ತು ಇದು ಬಹಳ ವರ್ಷಗಳ ಸಮಸ್ಯೆತಾಗಿತ್ತು ಸಾರ್ವಜನಿಕರ ದೂರಿನ ಮೇರೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಡಿ ನೀಡಿ ಕೂಡಲೆ ನಕಾಶೆಯಲ್ಲಿದ್ದ ರಾಜಕಾಲುವೆಯನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡ ಬೇಕು ಎಂದು ತಹಶೀಲ್ದಾರ್ ರೇಹಾನ್ ಪಾಷ ಹಾಗೂ ಪೌರಾಯುಕ್ತ ಜಗರೆಡ್ಡಿಗೆ ಸೂಚನೆ ನೀಡಿದರು.
ನಂತರ ಅಭಿಶೇಕ್ ನಗರಕ್ಕೆ ಹೋಗುವ ರಸ್ತೆ ಒತ್ತುವರಿ ತೆರವುಗೊಳಿಸಿ ಕೂಡಲೆ ರಸ್ತೆ ನಿರ್ಮಾಣ ಕಾಮಗಾರಿ ಮಾಡಿ ಇಲ್ಲಿನ ನಿವಾಸಿಗಳಿಗೆ ಅನುವು ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ಶಾಸನಗಳಿರುವ ಸ್ಥಳಕ್ಕೆ ಭೇಡಿ ನೀಡಿ ಶಾಸನಗಳ ಪರಿಶೀಲನೆ ನಡೆಸಿ ಇವುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಗರಸಭೆ ಅಧ್ಯಕ್ಷೆ ಜಯತುನ್ ಬಿ. ನಗರಸಭೆ ಜೆಇ ವಿನಯ್. ದೊಡ್ಡ ಉಳ್ಳಾರ್ತಿ ಗ್ರಾಪಂ ಅಧ್ಯಕ್ಷೆ.ಸದಸ್ಯರು. ಸಾಮಾಜಿಕ ಪಿಂಚಣಿಶಿರಸ್ತೆದಾರ್ ಗಿರಿಶ್ ಗ್ರಾಮಸ್ಥರಿದ್ದರು.











About The Author
Discover more from JANADHWANI NEWS
Subscribe to get the latest posts sent to your email.