ಚಳ್ಳಕೆರೆ ಡಿ.27ಇತ್ತೀಚಿನ ದಿನಗಳಲ್ಲಿ ಕೆಲಗಳ ಒತ್ತಡದಲ್ಲಿ ಮನಶಾಂತಿ ನೆಮ್ಮದಿ ಪಡೆಯಲು ದೇವಸ್ಥಾನ. ಮಠ.ಸತ್ಸಂಗದಲ್ಲಿ ಭಾಗವಹಿಸಿದಾಗ ನೆಮ್ಮದಿ ಜೀವನ ಕಂಡುಕೊಳ್ಳಲು ಸಾಧ್ಯ ಎಂದು ಶ್ರೀನರಹರಿ ಸದ್ಗುರು ಪೀಠದ ಪೀಠಾಧ್ಯಕ್ಷರಾದ ಡಾ.ವೈ. ರಾಜರಾಮ ಸ್ವಾಮೀಜಿ ಹೇಳಿದರು.
ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿನ ಶ್ರೀಸಾಯಿ ಮಂದಿರದಲ್ಲಿ ಗುರುವಾರ ಸಂಜೆ ನಡೆದ ತಾಲೂಕಿನ ಪ್ರಸಿದ್ಧ ಜಾತ್ರಾ ನಡೆಯುವ ಸ್ಥಳ ಮತ್ತು ಧಾರ್ಮಿಕ ದೇವತಾರಾಧನಾ ಮಾಹಿತಿ ಒಳಗೊಂಡ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.






ಮಾನವನ ಬದುಕು ಕಲ್ಯಾಣವಾಗಬೇಕಾದರೆ ಸಹಕಾರ ಮನೋಭಾವ ಅಗತ್ಯ
ಯಘ್ಞ, ತಪಸ್ಸು ಮತ್ತು ದಾನದಿಂದ ಮಾತ್ರ ಮಾನವನ ಜೀವನವನ್ನು ಸಾರ್ಥಕ ಮಾಡಿಕೊಳ್ಳಲು ಸಾಧ್ಯ
ತನ್ನಲ್ಲಿ ಇರುವ ಸಂಪನ್ಮೂಲವನ್ನು ಇತರರ ಕಷ್ಟಕ್ಕೆ ಸ್ವಲ್ಪ ದಾನ ಮಾಡುವ ಕಾರ್ಯದಿಂದ ಬದುಕಿಗೆ ಭಗವಂತನ ಅನುಗ್ರಹ ಸಿಗುತ್ತದೆ ಎಂದು ಹೇಳಿದರು.
ಬಯಲುಸೀಮೆಯ ತಾಲೂಕಿನಲ್ಲಿ ಸಾಯಿಮಂದಿರ ಸ್ಥಾಪನೆ ಮಾಡುವ ಮೂಲಕ ಶಿರಡಿ ಸಾಯಿಬಾಬಾನ ಭಕ್ತರಿಗೆ ಸ್ಥಳೀಯವಾಗಿ ದರ್ಶನ ಮಾಡಿಕೊಳ್ಳುವ ಭಾಗ್ಯ ಕಲ್ಪಿಸಲಾಗಿದೆ. ಬದುಕಿನಲ್ಲಿ ನೆಮ್ಮದಿ ಮತ್ತು ಶಾಂತಿ ಧಾರ್ಮಿಕ ಪುಣ್ಯಕ್ಷೇತ್ರಗಳಿಂದ ಸಿಗಲು ಸಾಧ್ಯ. ಇಲ್ಲಿ ಮನಸ್ಸನ್ನು ಶುದ್ಧಿ ಮಾಡಿಕೊಳ್ಳುವ ರೀತಿಯಲ್ಲಿ ಸಮಾಜದ ಬದುಕನ್ನು ಅರ್ಥೈಸಿಕೊಳ್ಳಬೇಕು ಎಂದು ಭಕ್ತರಿಗೆ ಕಿವಿಮಾತು ಹೇಳಿದರು.
ಸಾಹಿತಿ ಪತ್ರಕರ್ತ ಕರ‍್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ ಸರ್ವ ಸಮುದಾಯಗಳು ಒಳಗೊಂಡ 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಂತೆ, ಯಾವುದೇ ಜಾತಿ, ವರ್ಗ ಎನ್ನದೆ ಸರ್ವ ಜನಾಂಗದ ಸಮಿತಿ ಮಾಡಿಕೊಂಡು ತಾಲೂಕು ಕೇಂದ್ರದಲ್ಲಿ ಬೃಹತ್ ಸಾಯಿ ಮಂದಿರ ಸ್ಥಾಪನೆ ಮಾಡಲಾಗಿದೆ. ಕಡಿಮೆ ಅವಧಿಯಲ್ಲಿ ಅಪಾರ ಭಕ್ತರ ಮಂದಿರವಾಗಿ ಬೆಳೆಯುತ್ತಿದೆ. ಸಾಯಿಬಾಬಾ ತನ್ನ ಚಿಕ್ಕವಯಸ್ಸಿನಲ್ಲಿ ತಪಸ್ಸು ಮತ್ತು ಲೌಕಿಕ ಚಿಂತನೆ ಬೆಳೆಸಿಕೊಂಡವರು. ಭಕ್ತ ಗಣ ವೃದ್ದಿಸಿಕೊಂಡು ದೈವರೂಪಿಯಾಗಿ ಐಕ್ಯ ಪಡೆದವರು. ಧಾರ್ಮಿಕ ಮತ್ತು ಸಮಾಜ ಸುಧಾರಕರ ಲೋಕ ಸಂದೇಶ ಸಮಾಜದಲ್ಲಿ ಒಳ್ಳೆ ಕಾರ್ಯದಲ್ಲಿ ಜೀವಂತಿಕೆಯಾಗಿ ಉಳಿಯಬೇಕು ಎಂದು ಸಾರಿದ್ದಾರೆ. ಭೌಗೋಳಿಕವಾಗಿ ಬರದ ಪರಿಸ್ಥಿತಿಯಲ್ಲೂ ಹಿರಿಯರ ಪದ್ದತಿ ಮತ್ತು ಪುಣ್ಯಾರಾಧನಾ ಹಬ್ಬಗಳಿಗೆ ಕೊರತೆ ಇಲ್ಲ. ಇಂತಹ ಜಾತ್ರಾ ಹಿನ್ನೆಲೆಗಳ ದಾಖಲೀಕರಣದಂತೆ ಕ್ಯಾಲೆಂಡರ್ ಮುದ್ರಣ ಮಾಡಿರುವುದು ಸಮಾಜಕ್ಕೆ ಒಂದು ಧಾರ್ಮಿಕ ಕೈಪಿಡಿಯಾಗಿದೆ ಎಂದು ಹೇಳಿದರು.
ಶ್ರೀವೆಂಕಟ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಸಾಯಿ ಮಂದಿರಕ್ಕೆ ಹೊರ ಜಿಲ್ಲೆಗಳಿಂದಲೂ ಭಕ್ತರ ಆಗಮನ ಇದೆ. ಕೌಟುಂಬಿಕ ಸಮಸ್ಯೆಗಳು ಸೇರಿದಂತೆ ಭಕ್ತರ ಇಷ್ಟಾರ್ಥಗಳು ಈಡೇರುವ ನೆಲೆಯಾಗುತ್ತಿದೆ. ಸಾಯಿ ಮಂದಿರದ ಪೂಜಾ ಕಾರ್ಯಕಲಾಪಗಳು ಸೇರಿದಂತೆ ತಾಲೂಕಿನ ಜಾತ್ರಾ ಮಹೋತ್ಸವಗಳ ಮಾಹಿತಿಯಲ್ಲಿ ಕ್ಯಾಲೆಂಡರ್ ಮುದ್ರಿಸಲಾಗಿದೆ ಎಂದು ಹೇಳಿದರು.
ಮಕ್ಕಳ ತಜ್ಞ ಡಾ.ಚಂದ್ರನಾಯ್ಕ, ಟ್ರಸ್ಟ್ ಸಮಿತಿಯ ಕೆ.ಎಂ. ಜಗದೀಶ್, ಬಿ.ವಿ. ಚಿದಾನಂದಮೂರ್ತಿ, ಬಿ.ಸಿ. ಸತೀಶ್‌ಕುಮಾರ್, ರವಿಪ್ರಸಾದ್, ಪುಷ್ಪಾಸಂಜೀವಮೂರ್ತಿ, ರಶ್ಮಿಸುರೇಶ್, ಅರುಣಾಜಗದೀಶ್, ಬಿ. ಸುರೇಶ್, ಶ್ರೀನಾಥ್, ರೇಣುಕಾಸ್ವಾಮಿ, ವಕೀಲ ಡಿ.ಎಂ. ರವೀಂದ್ರ ಮತ್ತಿತರರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.