December 14, 2025
IMG-20251127-WA0170.jpg

ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಡಾ: ರಾಜ್, ಪುನಿತ್ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ೪೫ ನೇ ವರ್ಷದ ೭೦ ನೇ ಕನ್ನಡ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಪಟ್ಟಣದಲ್ಲಿ ಆಯೋಜಿಸಲಾಗಿತು.ಪಟ್ಟಣದ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಧಾನ ಮುಂಭಾಗ ಬೆಳ್ಳಿ ರಥದಲ್ಲಿ ಅಲಂಕರಿಸಿದ ಶ್ರೀ ಭುವನೇಶ್ವರಿ ತಾಯಿಗೆ ಪುಷ್ಪವನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನ ಪ್ರಾರಂಭಿಸಲಾಯಿತು. ಮೆರವಣಿಗೆಯಲ್ಲಿ ಬೆಂಗಳೂರಿನ ಜೂನಿಯರ್ ಡಾ:ರಾಜ್‌ಕುಮಾರ್, ನಂಜನಗೂಡಿನ ಜೂನಿಯರ್ ಡಾ: ಪುನಿತ್ ರಾಜ್‌ಕುಮಾರ್ ಅವರೊಂದಿಗೆ ಚಿತ್ರದುರ್ಗ ಕಲಾ ಸಾಮ್ರಾಟ್ ಗುರುಮೂರ್ತಿಯವರ ಸಾರಥ್ಯದಲ್ಲಿ ಶ್ರೀ ಶಾರದ ಬ್ರಾಸ್ ಬ್ಯಾಂಡ್ ಆರ್ಕೆಸ್ಟಾç ಮತ್ತು ಕಲಾ ತಂಡದವರಿಂದ ಅದ್ದೂರಿ ಮೆರವಣಿಗೆ ನಡೆಯಿತು. ಶಾಸಕ ಬಿ.ಗೋವಿಂದಪ್ಪ ಬೆಳ್ಳಿ ರಥಕ್ಕೆ ಪುಷ್ಪಾರ್ಚನೆ ಮತ್ತು ದ್ವಜಾರೋಹಣ ನೆರವೇರಿದರು.
ಸಂಜೆ ಅಶೋಕ ರಂಗಮಂದಿರದಲ್ಲಿ ತುಮಕೂರಿನ ಓಂ ಶಕ್ತಿ ಮ್ಯೂಜಿಕಲ್ ನೈಟ್ಸ್ ಆರ್ಕೆಸ್ಟಾç ಅದ್ದೂರಿ ರಸ ಮಂಜರಿ ಕಾರ್ಯಕ್ರಮವನ್ನು ಶಾಸಕ ಬಿ.ಗೋವಿಂದಪ್ಪ ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಟಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಎಚ್ಚರಿಕೆ ಪ್ರಕಾಶ್‌ಮೂರ್ತಿ ಸಹ ಕಾರ್ಯದರ್ಶಿ ಮೋಹನ್‌ಕುಮಾರ್ (ಜಾದೂ)ಗೌರವಾಧ್ಯಕ್ಷರುಗಳಾದ ಅಗ್ರೋ ಹೆಚ್.ಶಿವಣ್ಣ, ಗೋ.ತಿಪ್ಪೇಶ್, ಇ.ವಿ.ಶೀಥಲ್‌ಕುಮಾರ್, ಗೌಡ್ರುತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿ ಬಾಬಣ್ಣ, ಖಜಾಂಚಿ ಸ್ಟಾರ್‌ಮುನ್ನ, ಉಪಾಧ್ಯಕ್ಷ ಎಂ.ಸುರೇಶ್, ನಿರ್ಧೇಶಕರುಗಳಾದ ಕೋಟ್ರೇಶ್, ಕೆ.ಜಿ.ಎನ್.ಮುನ್ನ ತಿಮ್ಮಣ್ಣ, ಲಂಕೆಹನುಮAತಪ್ಪ, ಅನಿಲ್‌ಕುಮಾರ್, ಚಿಕ್ಕಮುದ್ದು, ವಸಂತಕುಮಾರ್, ತಮ್ಮಣ್ಣ, ನಾಗರಾಜ್ ಎಂ.ಎಸ್ ತಾಲೂಕು ಬೋವಿ ಸಮಾಜದ ಅಧ್ಯಕ್ಷ ಕೆ.ಟಿ.ಸುಬ್ಬಾಭೋವಿ, ಉದ್ಯಮಿ ಸದ್ಗುರು ಡಿ.ಎಸ್.ಪ್ರದೀಪ್, ಅಕ್ಷಯ ಗ್ಯಾಸ್ ಮಾಲಿಕ ಬಸವರಾಜಪ್ಪ ಬಿ.ಓ, ಉದ್ಯಮಿ ದರ್ಶನ್‌ಯಾದವ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಉಪಾಧ್ಯಕ್ಷ ಡಾ:ಎಂ.ಹೆಚ್.ಕೃಷ್ಣಮೂರ್ತಿ, ಸಾವಿತ್ರಿ ಪೈಪ್ ಮಾಲಿಕ ಕಿಶೋರ್‌ಸಿಂಗ್, ಆಂಜನೇಯ ಬಾರ್ ಮಾಲಿಕ ಪಿ.ಹನುಮಂತಪ್ಪ, ಗುತ್ತಿಗೆದಾರರಾದ ಮಹಂತೇಶ್, ಶ್ರೀನಿವಾಸ್ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷ ನಾಗತಿಹಳ್ಳಿಮಂಜುನಾಥ್, ಹಾಗೂ ಸಂಘದ ಸರ್ವ ನಿರ್ಧೇಶಕರುಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading