
ಹೊಸದುರ್ಗ ನ.27.
ಹಲವಾರು ರೋಗಗಳನ್ನ ಕಡಿಮೆ ಮಾಡುವ ಸಲುವಾಗಿ ಪ್ರಕೃತಿ ಚಿಕಿತ್ಸೆ ಮೊದಲ ಸ್ಥಾನದಲ್ಲಿದೆ.
ಪ್ರತಿಯೋಬ್ಬ ಮನುಷ್ಯನಿಗೆ,ಜೀವ ಸಂಕುಲಕ್ಕೆ ಜಗತ್ತಿನಲ್ಲಿ ಆಹಾರವೇ ಔಷಧವಾಗಿದೆ
ನ್ಯಾಚುರೋಪತಿ ಎಂದು ಕರೆಯಲ್ಪಡುವ ಔಷಧ ರಹಿತ ಔಷಧದ ಮೂಲಕ ಧನಾತ್ಮಕವಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನ ಉತ್ತೇಜಿಸಲು ನವೆಂಬರ್ ೧೮ ರಂದು ಭಾರತದಲ್ಲಿ ರಾಷ್ಟ್ರೀಯ ಪ್ರಕೃತಿ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಆಹಾರವೇ ಔಷಧವಾಗಿದೆ ಹೇಗೆ ಪ್ರಕೃತಿಯನ್ನು ಅತ್ಯುತ್ತಮವಾದ ವೈದ್ಯ ಅಂತ ಹೇಳ್ತಿವಿ ಅಡುಗೆ ಮನೆಯನ್ನ ಫಾರ್ಮಸಿ ಅಂತ ಹೇಳ್ತಿವಿ, ಯಾವುದೇ ಕೆಮಿಕಲ್ಸ್ ಇಲ್ದೆ ಇರತಕ್ಕಂತಹ ಹಣ್ಣು ತರಕಾರಿ ಸೊಪ್ಪು ಇವೆಲ್ಲವುಗಳನ್ನ ಅಡುಗೆ ಮನೆ ಅಡುಗೆ ಮನೆಯಲ್ಲಿ ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಬಳಸಿದಾಗ ಮಾತ್ರ ನಾವು ಆರೋಗ್ಯವಾಗಿ ಇರೋಕೆ ಸಾಧ್ಯವಾಗುತ್ತದೆ.
ಸರ್ವ ರೋಗಕ್ಕೂ ಪ್ರಕೃತಿ ಚಿಕಿತ್ಸೆ ಪರಿಹಾರ ಅನ್ನೋ ಹಾಗೆ ಎಲ್ಲ ಕಾಯಿಲೆಗಳನ್ನು ಪ್ರಕೃತಿಕವಾಗಿ ಚಿಕಿತ್ಸೆಯನ್ನು ನೀಡಿ ,ನೋವು, ಸೆಳೆತ, ಬೊಜ್ಜು, ಬಿಪಿ, ಶುಗರ್ ಥೈರಾಯ್ಡ್ ,ಕೊಲೆಸ್ಟ್ರಾಲ್, ಅರ್ಥ್ರೈಟಿಸ್, ಮೈಗ್ರೇನ್, ಡಿಪ್ರೆಶನ್, ಪಿಸಿಓಡಿ, ಪಿಸಿಒಎಸ್, ಪಾರ್ಶ್ವ ವಾಯು ಇಂತಹ ಹಲವಾರು
ರೋಗಗಳನ್ನ ಕಡಿಮೆ ಮಾಡಲಿಕ್ಕೆ ಪ್ರಕೃತಿ ಚಿಕಿತ್ಸೆ ಮೊದಲ ಸ್ಥಾನದಲ್ಲಿದೆ.
ನಾವು ಎದ್ದು ತಕ್ಷಣ ಫ್ಲೋರೈಡ್ ಕಂಟೆAಟ್ ಇರುವಂತಹ ಪೇಸ್ಟ್ ಗಳನ್ನು ಬಳಸ್ತೀವಿ ಅದನ್ನ ಬಳಸಬೇಡಿ ಅಂತ ಹೇಳಲ್ಲ, ಎದ್ದ ತಕ್ಷಣ ಬೇವಿನ ಕಡ್ಡಿ ಹುಡುಕೊಂಡು ಹೋಗಿ ಅಂತಾನೂ ಹೇಳಲ್ಲ, ಅದರ ಅರ್ಥ ಫ್ಲೋರೈಡ್ ಅನ್ನೋದು ಬಂಜೆತನ, ಥೈರಾಯಿಡ್ ,ಕೊಲೆಸ್ಟ್ ಇವೆಲ್ಲವನ್ನ ಹೆಚ್ಚಿಸುತ್ತದೆ,
ಸೀಸನಲ್ ಹಣ್ಣಗಳನ್ನು ಜಾಸ್ತಿ ತಿನ್ನಬೇಕು ಈ ಸೀಸನ್ ನಲ್ಲಿ ಸೀತಾಫಲ ಹಣ್ಣು ಬರುತ್ತೆ ಆದರೆ ನಮಗೆ ಅದರಲ್ಲಿ ಇರುವಂತ ಬೀಜ ಬೇಕಾಗಲ್ಲ ಬೀಜ ಇಲ್ಲ ಅಂತ ಅಂದ್ರೆ ಎಷ್ಟು ಚೆನ್ನಾಗಿರ್ತಿತ್ತು ಅಂತ ನಮ್ಮ ಮೈಂಡು ಯೋಚನೆ ಮಾಡುತ್ತದೆ, ಆದರೆ ನಾವು ತಿನ್ನಬೇಕಾದಂತಹದು ಬೀಜ ಇರತಕ್ಕಂತಹ ಹನ್ನನ್ನೆ ತಿನ್ನೋದು ಆರೋಗ್ಯಕ್ಕೆ ಒಳ್ಳೆಯದು ಯಾಕೆಂದ್ರೆ ಅದರಲ್ಲಿ ಸಕ್ಕರೆ ಪ್ರಮಾಣನೂ ಬ್ಯಾಲೆನ್ಸ್ ಆಗಿರುತ್ತೆ ನೀರಿನಂಶನು ಬ್ಯಾಲೆನ್ಸ್ ಆಗಿರುತ್ತೆ ನಾರಿನ ಅಂಶವೂ ಬ್ಯಾಲೆನ್ಸ್ ಆಗಿರುತ್ತೆ ಮಿನರಲ್ಸ್ ಕೂಡ ಇರುತ್ತೆ ಆದರೆ ಸೀಡ್ಲೆಸ್ ಅಣ್ಣ ತಿಂದ್ರೆ ಅದರಲ್ಲಿ ಯಾವುದೇ ರೀತಿ ಮಿನರನ್ಸ್ ಇರುವುದಿಲ್ಲ ಹಾಗಾಗಿ ಬದಲಾವಣೆ ಬಹಳ ಮುಖ್ಯವಾಗುತ್ತದೆ
ಪ್ರತಿ ರೋಗಗಳು ಸ್ಟಾರ್ಟ್ ಆಗೋದು ಗಟ್ ಇಂದ ಜಿ ಐ ಸಿಸ್ಟಮ್ ಇಂದ ಹಾಗಾಗಿ ಹೊಟ್ಟೆ ನಮ್ದು ಕಂಪ್ಲೀಟ್ ಆಗಿ ಕ್ಲಿಯರ್ ಇದ್ರೆ ಯಾವುದೇ ರೀತಿಯಾಗಿ ರೋಗ ಬರಲ್ಲ ನಾವು ಕಾರ್ಬೋಹೈಡ್ರೇಟ್ಸ್ ಬಿಡಬೇಕು ಅಂತ ಯಾವುದೇ ರೀತಿಯಾಗಿ ಇಲ್ವೇ ಇಲ್ಲ ನಮಗೆ ಕಾರ್ಬೋಹೈಡ್ರೇಟ್ಸ್ ಬೇಕು ಪ್ರೋಟೀನು ಬೇಕು ಫೈಬರ್ ಬೇಕು ಆದರೆ ಎಲ್ಲವೂ ಸರಿಯಾದ ಪ್ರಮಾಣದಲ್ಲಿ ಇರಬೇಕು ಅದು ಮುಖ್ಯ.
ಮಾಹಿತಿ: ಡಾ.ಬಾಹುಬಲಿ ಎಂ,ಎಸ್, ವೈದ್ಯಾಧಿಕಾರಿಗಳು ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕೇಂದ್ರ
ಹೊಸದುರ್ಗ,ಚಿತ್ರದುರ್ಗ(ಜಿಲ್ಲೆ)
About The Author
Discover more from JANADHWANI NEWS
Subscribe to get the latest posts sent to your email.