September 14, 2025
Screenshot_20241127_182022.png

ಚಳ್ಳಕೆರೆ ನ.27

ಖಾಸಗಿ ಶಾಲೆಗಳಲ್ಲಿ‌ಟ್ಯೂಶನ್ ಹೆಸರಿನಲ್ಲಿನಲ್ಲಿ‌ ವಿದ್ಯಾರ್ಥಿಗಳ ಮೇಲೆಅತಿ ಕಠಿಣ ಒತ್ತಡ ಹೇರುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.


ಹೌದು ಇದು ಚಳ್ಳಕೆರೆ ನಗರದ ಪ್ರತಿಷ್ಠಿತ ಖಾಸಗಿ ವಿದ್ಯಾಸಂಸ್ಥೆಗಳು ಶೇ ನೂರಷ್ಟು ಫಲಿತಾಂಶ ಪಡೆಯಲು ಶಾಲಾ ಪ್ರಾರಂಭ ಮುನ್ನ ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾದ ತರಗತಿಗಳು ಸಂಜೆ 6 ಗಂಟೆಯವರೆ ತರಗಳು ಮಾಡುತ್ತಿದ್ದ ಇದರಿಂದ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಸಿಲುಕಿ ವ್ಯಾಸಂಗ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು.
ಪೋಷಕರೂ ಸಹ ಸಂಜೆ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗಳ ಬಳಿ ಕಾಯುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಗುಣ ಮಟ್ಟದ ಶಿಕ್ಷಣ .ಪರೀಕ್ಷೆ ಹೆಸರಿನಲ್ಲಿ ಖಾಸಗಿ ಶಾಲೆಗಳಲ್ಲಿ ಟ್ಯೂಶನ್‌ ಬೆಳಗ್ಗೆವ 7 ಯಿಂದ ತರಗತಿ ಪ್ರಾರಂಭವಾಗುವವರೆಗೆ ಹಾಗೂ ಶಾಲೆ ಬಿಟ್ಟ ನಂತರ ಸಂಜೆ 6ರಿಂದ 7 ಗಂಟೆಯ ಕತ್ತಲಾದರೂ ಟ್ಯೂಶನ್ ತರಗಳು ನಡೆಯುವುದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕುವ ಸಾಧ್ಯ ಇದೆ.
ಖಾಸಗಿ ಶಾಲೆಗಳಲ್ಲಿ ಟ್ಯೂಶನ್ ಹೆಸರಿನಲ್ಲಿ ನಿಗಧಿ ಸಮಯ ಮೀರಿ ತರಗತಿಗಳು ನಡೆದರೂ ಸಹ ಶಿಕ್ಷಣ ಇಲಾಖೆ ಮಾತ್ರ ಮೌನವಹಿಸಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿದೆ.
ಈಗಲಾದರೂ ಸಂಬಂಧ ಪಟ್ಟ ಅಧಿಕಾರಿಗಳು ಖಾಸಗಿ ಶಾಲೆಗಳಲ್ಲಿ‌ಟ್ಯೂಶನ್ ತರಗತಿಗಳಿಗೆ ಕಡಿವಾಣ ಹಸಕುವರೇ ಕಾದು ನೋಡ ಬೇಕಿದೆ.

ಸಂಜೆ ಮಬ್ಬುಗತ್ತಲಿನಲ್ಲಿ ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಬರಲು ಹೋಗುತ್ತಿರುವ ಖಾಸಗಿ‌ಶಾಲೆಯ ವಾಹನಗಳು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading