ಹಿರಿಯೂರು:
ನಗರದ ವೇದಾವತಿ ನದಿ ದಡದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವವರು ತಕ್ಷಣ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಅವರು ಮನವಿ ಮಾಡಿದ್ದಾರೆ.
ತಾಲ್ಲೂಕಿನ ವಾಣಿವಿಲಾಸಪುರ, ಅರಮನೆಹಟ್ಟಿ, ಕುರುಬರಹಳ್ಳಿ, ಅಮ್ಮನಹಟ್ಟಿ, ಕಾತ್ರಿಕೇನಹಳ್ಳಿ, ಹೊಸ ಕಾರ್ತಿಕೇನಹಳ್ಳಿ , ಕೂನಿಕೆರೆ, ಲಕ್ಕವ್ವನಹಳ್ಳಿ, ಹಿರಿಯೂರು, ಮಾರುತಿ ನಗರ, ರಂಗನಾಥಪುರ, ಉಪ್ಪಳಗೆರೆ, ಟಿ. ನಾಗೇನಹಳ್ಳಿ, ಯಳನಾಡು, ಕೂಡ್ಲಹಳ್ಳಿ, ಲಂಬಾಣಿಹಟ್ಟಿ, ಬ್ಯಾಡರಹಳ್ಳಿ, ದೇವರಕೊಟ್ಟ, ತೊರೆಓಬೇನಹಳ್ಳಿ, ಕಂಬತ್ತನಹಳ್ಳಿ, ಬಿದರಕೆರೆ, ಸಂಗೇನಹಳ್ಳಿ, ಶಿಡ್ಲಯ್ಯಕೋಟೆ ಗ್ರಾಮಗಳ ಜನರು ವೇದಾವತಿ ನದಿಯ ಹತ್ತಿರ ಹೋಗುವುದು, ಜಾನವಾರುಗಳನ್ನು ಬಿಡುವುದು ಮಾಡಬಾರದು ಎಂಬುದಾಗಿ ನಿಗಮದ ಅಧಿಕಾರಿಗಳು ಸೂಚಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.