December 14, 2025
FB_IMG_1730033982622.jpg


ಹಿರಿಯೂರು:
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ತಾಲ್ಲೂಕಿನಲ್ಲಿ ಸುಮಾರು 200 ಕುಟುಂಬಗಳಿಗೆ ಮಾಷಾಸನ, 4 ಕೆರೆಗಳ ರಚನೆ, ಜಿಲ್ಲೆಯಾದ್ಯಂತ ವರ್ಷಕ್ಕೆ ಎರಡು ಕೆರೆಗಳನ್ನು ಪುನಶ್ಚೇತನ ಕಾಮಗಾರಿ, ಅಂಗವಿಕಲರಿಗೆ ವೀಲ್ ಛೇರ್ ವ್ಯವಸ್ಥೆ ಸೇರಿದಂತೆ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂಬುದಾಗಿ ತಾಲ್ಲೂಕು ಯೋಜನಾಧಿಕಾರಿಗಳಾದ ಹರಿಪ್ರಸಾದ್ ರೈ ಹೇಳಿದರು.
ನಗರದ ಎಲ್.ಐ.ಸಿ ಕಚೇರಿ ಹತ್ತಿರಯಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿವಿಪುರ ಕಚೇರಿಯಲ್ಲಿ ವಿಶೇಷ ಪೂಜಾಕಾರ್ಯಕ್ರಮ ನೆರವೇರಿಸಿ ತಾಲ್ಲೂಕಿನ ಪತ್ರಕರ್ತರುಗಳಿಗೆ ಧರ್ಮಸ್ಥಳದ ಪೂಜ್ಯರಿಂದ ವಿಶೇಷವಾಗಿ ತರಿಸಲಾಗಿದ್ದ ಪ್ರಸಾದದ ಕಿಟ್ ಗಳನ್ನು ವಿತರಿಸಿ ಅವರು ಮಾತನಾಡಿದರು.
ಅಷ್ಟೇ ಅಲ್ಲದೆ, ತಾಲ್ಲೂಕಿನಲ್ಲಿ ಮನೆಯಿಲ್ಲದವರಿಗೆ ವಾತ್ಸಲ್ಯ ಮನೆ ಯೋಜನೆಯಡಿ ಮನೆಗಳ ನಿರ್ಮಾಣ, ಶುದ್ಧಗಂಗಘಟಕ ಯೋಜನೆಯಡಿಯಲ್ಲಿ ತಾಲ್ಲೂಕಿನಾದ್ಯಂತ ಸುಮಾರು 8 ಘಟಕಗಳ ಸ್ಥಾಪನೆ, ತಿಂಗಳಿಗೆ ಮೂರು ಬಾರಿ 80 ಜನ ನಿರ್ಗತಿಕರಿಗೆ ಫುಡ್ ಕಿಟ್ ಗಳ ವಿತರಣೆ, ಸಂಘದ ಸದಸ್ಯರಿಗೆ ಬ್ಯಾಂಕಿನ ಮೂಲಕ ಸಾಲಸೌಲಭ್ಯವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರಲ್ಲದೆ,
ತಾಲ್ಲೂಕಿನ ದೇವಸ್ಥಾನಗಳಿಗೆ ಅನುದಾನ ಕೊಡುವ ಕಾರ್ಯಕ್ರಮದಡಿಯಲ್ಲಿ ಕಳೆದ ವರ್ಷದಿಂದ ಸುಮಾರು 12 ದೇವಸ್ಥಾನಗಳಿಗೆ ಸುಮಾರು 44 ಲಕ್ಷರೂಗಳನ್ನು ಪೂಜ್ಯರು ನೀಡಿದ್ದಾರೆ. 382 ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಶಿಷ್ಯವೇತನ ಸಿಗುತ್ತಿದೆ. ತಾಲ್ಲೂಕಿನಲ್ಲಿ ಅಗ್ನಿ ಅವಗಡಕ್ಕೆ ಒಳಗಾದ ಆದಿವಾಲದ 4 ಮನೆಗಳಿಗೆ 40ಸಾವಿರ ರೂಗಳನ್ನು ತಕ್ಷಣ ವಿತರಿಸಲಾಗಿದೆ ಎಂಬುದಾಗಿ ಅವರು ಹೇಳಿದರು.
ಜಿಲ್ಲಾ ನಿರ್ದೇಶಕರಾದ ವಿಜಯ್ ಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ ವಿಶೇಷವಾಗಿ ಪೂಜ್ಯರ ಮಾರ್ಗದರ್ಶನದೊಂದಿಗೆ ಮಧ್ಯವರ್ಜನೆ ಶಿಬಿರಗಳನ್ನು ನಡೆಸುವ ಮೂಲಕ ನೂರಾರು ಜನರನ್ನು ಮದ್ಯವ್ಯಸನದಿಂದ ದೂರ ಮಾಡಲಾಗಿದ್ದು, ಆ ಕುಟುಂಬಗಳಿಗೆ ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕ ಭದ್ರತೆ ಹಾಗೂ ಸಾಲಸೌಲಭ್ಯ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗಿದೆ.
ಅಲ್ಲದೆ, ಸ್ವ-ಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಸೇರಿದಂತೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅವುಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಲಾಗುತ್ತಿವೆ. ಧರ್ಮಸ್ಥಳ ಯೋಜನೆಯ ಈ ಎಲ್ಲಾ ಕಾರ್ಯಕ್ರಮಗಳು ಸಮಾಜಕ್ಕೆ ತಲುಪಬೇಕಾದರೆ ನಗರದ ಮಾಧ್ಯಮ ಮಿತ್ರರುಗಳ ಸಹಕಾರ ಹಾಗೂ ಅವರಪಾತ್ರ ಬಹಳ ಪ್ರಮುಖವಾಗಿದೆ ಎಂದರಲ್ಲದೆ,
ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೊಡಲಾಗುತ್ತಿರುವ ಸೌಲಭ್ಯಗಳನ್ನು ಜನರಿಗೆ ತಿಳಿಸಿ, ಅವರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪತ್ರಿಕಾ ಮಾಧ್ಯಮಮಿತ್ರರ ಪಾತ್ರ ಬಹಳವಾಗಿದ್ದು, ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾವುಗಳು ಹಾಗೂ ತಾಲ್ಲೂಕಿನ ಮಾಧ್ಯಮ ಮಿತ್ರರು ಉತ್ತಮಬಾಂಧವ್ಯ ಬೆಳೆಸಿಕೊಂಡಾಗ ಮಾತ್ರ ನಮ್ಮ ಕಾರ್ಯಕ್ರಮಗಳಿಗೆ ಹೆಚ್ಚಿನ ಮೆರಗು ಸಿಕ್ಕಂತಾಗುತ್ತದೆ ಎಂಬುದಾಗಿ ಅವರು ಹೇಳಿದರರಲ್ಲದೆ,
ಈ ಕಾರಣದಿಂದತಾಲ್ಲೂಕಿನ ಎಲ್ಲಾ ಮಾಧ್ಯಮ ಪ್ರತಿನಿಧಿಗಳನ್ನು ನಮ್ಮ ಕಚೇರಿಗೆ ಕರೆಸಿ, ಪರಿಚಯ ಮಾಡಿಕೊಡಿಕೊಳ್ಳುವ ಮೂಲಕ ಮಾಧ್ಯಮಮಿತ್ರರು ಹಾಗೂ ನಮ್ಮ ಸಂಬಂಧಗಳನ್ನು ಗಟ್ಟಿಯಾಗಿಸಿಕೊಳ್ಳುವ ನಿಟ್ಟಿನಲ್ಲಿ ಅವರುಗಳಿಗೆ ಗೌರವ ಪುರಸ್ಕಾರ ಹಾಗೂ ಬೆಳಗಿನ ಫಲಹಾರ ಕಾರ್ಯಕ್ರಮ ಹಮ್ಮಿಕೊಂಡು, ಶ್ರೀ ಧರ್ಮಸ್ಥಳದಿಂದ ಪೂಜ್ಯರು ಕಳುಹಿಸಿದ್ದ ಪ್ರಸಾದ ಮತ್ತು ಬ್ಯಾಗ್ ಗಳನ್ನು ನೀಡಲಾಗುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಪುರ ವಿಭಾಗದ ಯೋಜನಾಧಿಕಾರಿಗಳಾದ ಅನಿಲ್ ಕುಮಾರ್, ಜಿಲ್ಲಾ ಕಚೇರಿಯ ವ್ಯವಸ್ಥಾಪಕರಾದ ಮನುಕುಮಾರ್, ಮೇಲ್ವಿಚಾರಕರು, ಲೆಕ್ಕಪರಿಶೋಧಕರು, ಜ್ಞಾನವಿಕಾಸ ಸಮನ್ವಯಅಧಿಕಾರಿಗಳು, ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಸೇರಿದಂತೆ ಪತ್ರಕರ್ತರುಗಳಾದ ಎಂ.ರವೀಂದ್ರನಾಥ್, ಪ್ರಶಾಂತ ನಾಯಕ್, ಪ್ರಕಾಶ್ ಬಬ್ಬೂರು, ಬಸವರಾಜ್ ಖಂಡೇನಹಳ್ಳಿ, ಹರ್ತಿಕೋಟೆ ರಾಜಣ್ಣ, ಪ್ರವೀಣ್ ಕುಮಾರ್, ವೀರಣ್ಣ ಧರ್ಮಪುರ, ಎಂ.ಎಲ್.ಗಿರಿಧರ್, ಕಿರಣ್ ಮಿರಜ್ಕರ್, ಆಲೂರು ಹನುಮಂತರಾಯಪ್ಪ, ಪಿ.ಆರ್.ಸತೀಶ್ ಬಾಬು, ಪಿ.ಎನ್.ಪರಮೇಶ್ವರಪ್ಪ, ಶಿವರಾಜ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading