January 29, 2026
CLK-Jayadeva-27.jpeg

ಚಳ್ಳಕೆರೆ: ಅ27
ಗ್ರಾಮಾಂತರ ಭಾಗದ ಪ್ರತಿಭಾವಂತರಾಗಿ ಓದಿಕೊಂಡು ಶಿಕ್ಷಣದಲ್ಲಿ ಸಾಧನೆ ಮಾಡಿದ ಡಾ.ಕೆ.ಎಸ್. ರವೀಂದ್ರನಾಥ್ ಅವರ ಬದುಕು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಚಟ್ಟೆಕಂಬ ಗ್ರಾಮದ ಸಿ.ಜಿ. ತಿಪ್ಪೇಸ್ವಾಮಿ ಹೇಳಿದರು.
ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸ್ನೇಹಿತ ಡಾ.ಕೆ.ಎಸ್. ರವೀಂದ್ರನಾಥ್ ಅವರ ಬಳಿ ಕುಟುಂಬ ಸಮೇತರಾಗಿ ಭಾನುವಾರ ತೆರಳಿ ಅಭಿನಂದಿಸಿ ಮಾತನಾಡಿದರು.
ಶಾಲೆಗಳಲ್ಲೂ ನಿರೀಕ್ಷಿತ ಅನುಕೂಲಗಳಿಲ್ಲದ ಪರಿಸ್ಥಿತಿಯಲ್ಲಿ ಪರಶುರಾಂಪುರ ಸರ್ಕಾರ ಪ್ರೌಢಶಾಲೆಯಲ್ಲಿ ಓದಿಕೊಂಡ ರವೀಂದ್ರನಾಥ್, ಕುಟುಂಬದ ಪರಿಸ್ಥಿತಿಯನ್ನು ಎದುರಿಸಿ ಪ್ರತಿಭಾವಂತರಾಗಿ ಓದಿಕೊಂಡವರು. ಪ್ರಸ್ತುತ ಹೆಸರಾಂತ ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿ ಸೇವೆ ಮಾಡುತ್ತಿರುವುದು ಚಳ್ಳಕೆರೆ ತಾಲೂಕಿನ ಗೌರವವಾಗಿದೆ. ವಿದ್ಯಾರ್ಥಿಗಳ ಬದುಕಿಗೆ ಇಂತಹ ಆದರ್ಶ ಸಾಧಕರ ಜೀವನ ಅನುಕರಣೆ ಆಗಬೇಕು ಎಂದು ಹೇಳಿದರು.
ಕುಟುಂಬದ ಅನುಸೂಯಮ್ಮ, ಕೆಇಬಿ ಇಲಾಖೆ ಅಧಿಕಾರಿ ಶಿವಪ್ಪ, ಶಿಕ್ಷಕಿ ಟಿ. ವಿನೋದಮ್ಮ, ಟಿ. ನೈರ್ಮಲ್ಯ ಇದ್ದರು.
ಫೋಟೋ: (ಸಿಎಲ್‌ಕೆ: ಜಯದೇವ, ಅ/೨೭)
ವಿಜಯವಾಣಿ ಚಿತ್ರ
ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿ ಕರ್ತವ್ಯದಲ್ಲಿರುವ ಚಳ್ಳಕೆರೆ ತಾಲೂಕಿನ ಪ್ರತಿಭಾವಂತ ಡಾ.ಕೆ.ಎಸ್. ರವೀಂದ್ರನಾಥ್ ಅವರನ್ನು ಸ್ನೇಹಿತ ಸಿ.ಜಿ. ತಿಪ್ಪೇಸ್ವಾಮಿ ಕುಟುಂಬ ಸಮೇತರಾಗಿ ಸೋಮವಾರ ಭೇಟಿ ಮಾಡಿ ಸನ್ಮಾನಿಸಿರುವುದು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading