ನಾಯಕನಹಟ್ಟಿ::ಅಕ್ಟೋಬರ್ 27 .ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಂತಕೋಲಮ್ಮನಹಳ್ಳಿ ಗ್ರಾಮದಲ್ಲಿ ಶ್ರೀ ವಾಲ್ಮೀಕಿ ಸಂಘದ ವತಿಯಿಂದ ಭಾನುವಾರ ಮಧ್ಯಾಹ್ನ 3 ಗಂಟೆಗೆ ಮಹಾಋಷಿ ವಾಲ್ಮೀಕಿ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.









ಬಳಿಕ ಗ್ರಾಮದ ಬಯಲು ರಂಗ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಆಯೋಜನೆ ಮಾಡಲಾಯಿತು ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ದ್ರಾಕ್ಷ ರಸ ಮಂಡಳಿ ಅಧ್ಯಕ್ಷ ಡಾ. ಬಿ ಯೋಗೇಶ್ ಬಾಬು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆಯನ್ನು ನೀಡಿದರು ಬಳಿಕ ಮಾತನಾಡಿದರು. ಜಗತ್ತಿನ ಮೊಟ್ಟಮೊದಲ ಕವಿ ಮಹಾಋಷಿ ವಾಲ್ಮೀಕಿ ಇಡೀ ದೇಶದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ ಹಲಗಲಿ ಬೇಡರು ಏಕಲವ್ಯ ಶಬರಿ ಬೇಡರ ಕಣ್ಣಪ್ಪ ರಾಜವೀರ ಮದಕರಿ ನಾಯಕ ಇಂಥ ದಾರ್ಶರಿಕರು ಹುಟ್ಟಿದ ಸಮುದಾಯದಲ್ಲಿ ನಾವು ಇಟ್ಟಿದ್ದೇವೆ ಬೇರೆ ಸಮುದಾಯದವರು ಅನ್ಯಾಯ ತುಳಿತಕ್ಕೆ ಒಳಗಾದವರ ಚಿಕ್ಕ ಪುಟ್ಟ ಸಮುದಾಯಗಳ ಬೆನ್ನಿಗೆ ನಿಂತು ಅವರನ್ನು ರಕ್ಷಣೆ ಮಾಡುವುದರಿಂದ ನಾವು ನಾಯಕರಾಗಬೇಕು ಆದ್ದರಿಂದ ಗ್ರಾಮದಲ್ಲಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಆನಂದಪ್ಪ, ಉಪಾಧ್ಯಕ್ಷೆ ಅನಿತಮ್ಮ ಜಿ.ಎಂ ಜಯಣ್ಣ, ಸದಸ್ಯರಾದ ಗೌಡ್ರು ಗುಂಡಪ್ಪ, ಸಿದ್ದಲಿಂಗಮ್ಮ ಗುಂಡಪ್ಪ, ಮಂಜಮ್ಮ ದುರುಗೇಶ್, ಸದಸ್ಯ ಮಾಜಿ ಅಧ್ಯಕ್ಷ ಬಿ ಶಂಕರಸ್ವಾಮಿ, ಬಿ ಸಣ್ಣ ಪಾಲಯ್ಯ ಚೌಳಕೆರೆ,, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಬಿ ಚಂದ್ರಣ್ಣ, ಜೆಸಿಬಿ ಎನ್.ತಿಪ್ಪೇಸ್ವಾಮಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಡಿ.ಬಿ.ಕರಿಬಸಪ್ಪ ಚೌಳಕೆರೆ, ಕೆ .ಟಿ ಮಲ್ಲಿಕಾರ್ಜುನ್, ಗೊಂಚಿಕಾರ್ ಎಂ ಪಾಲಯ್ಯ, ಹೊಸಕಪಿಲೆ ಬೋರಯ್ಯ, ಮೀಸೆ ಓಬಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್, ಎಂ,ಒ. ಸುರೇಶ್ , ಗುರುಓಬಯ್ಯ, ರುದ್ರಮುನಿ, ಮಲ್ಲಜ್ಜ, ಬೂಟ್ ತಿಪ್ಪೇಸ್ವಾಮಿ, ಅಬ್ಬೇನಹಳ್ಳಿ ಎಂ ಎಸ್ ಪ್ರಕಾಶ್, ಬಿಲ್ ಕಲೆಕ್ಟರ್ ಎಸ್, ಶಿವತಿಪ್ಪೇಸ್ವಾಮಿ, ಕೊರಡಿಹಳ್ಳಿ ಸುರೇಂದ್ರಪ್ಪ, ಶಿವರಾಜ್ ಚೌಳಕೆರೆ, ರಮೇಶ್, ಪಾಲಯ್ಯ, ತಿಪ್ಪೇಸ್ವಾಮಿ, ಜಯಣ್ಣ ,ತಿಪ್ಪೇಸ್ವಾಮಿ ,
ಪಾಪಯ್ಯ, ಓಬಣ್ಣ, ಹಾಗೂ ಶ್ರೀ ವಾಲ್ಮೀಕಿ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಯುವಕರು ಹಾಗೂ ಸಮಸ್ತ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.