ಚಳ್ಳಕೆರೆ: ಕಳೆದ 15 ದಿನಗಳಿಂದ ಸುರಿದ ಭಾರಿ ಮಳೆಯಿಂದ ತಾಲೂಕಿನಲ್ಲಿ ಅನೇಕ ಕೆರೆಗಳು ಭರ್ತಿಯಾಗಿ ತುಂಬಿ ಹರಿಯುತ್ತಿದ್ದು ಅದರಿಂದ ರೈತರಿಗೆ ಸಂತೋಷ ಒಂದು ಕಡೆಯಾದರೆ ಕೆಲವು ರೈತರಿಗೆ ಫಸಲಿಗೆ ಬಂದ ಬೆಳೆಗಳನ್ನು ಉಳಿಸಿಕೊಂಡು ರಕ್ಷಿಸಿಕೊಳ್ಳುವುದು ಕಷ್ಟಕರವಾಗಿದೆ.
ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೂಟ್ಟಜನ ಕಪಿಲೆ ಗ್ರಾಮದ ಹನುಮಕ್ಕ ಎಂಬುವರ 1.5 ಜಮೀನಿನಲ್ಲಿ 20 ಕೆಜಿ ಮೆಕ್ಕೆಜೋಳ ಬೆಳೆಯನ್ನು ಬೆಳೆದಿದ್ದು,
ಬೆಳೆಯು ಉತ್ತಮವಾಗಿ ಫಸಲಿಗೆ ಬಂದಿದ್ದ ಬೆಳೆಯನ್ನ ಕಟಾವು ಮಾಡಬೇಕು ಇನ್ನು ವಷ್ಟರಲ್ಲಿ
ಹತ್ತು ದಿನಗಳಿಂದ ಸುರಿದ ನಿರಂತರ ಮಳೆಯಿಂದ ಮೆಕ್ಕೆಜೋಳ ಬೆಳೆಯು ಸಂಪೂರ್ಣ ಜಲಾವೃತಗೊಂಡಿದ್ದು ಬೆಳೆಯನ್ನು ಉಳಿಸಿಕೊಳ್ಳಲು ರೈತರು ಜಲಾವೃತಗೊಂಡ ಬೆಳೆಯಲ್ಲಿ ರೈತನ ಕಾಲುಗಳು ಸಿಲುಕಿಕೊಂಡರು ಬೆಳೆಯನ್ನು ಉಳಿಸಿಕೊಳ್ಳುವ ಹಂಬಲದಲ್ಲಿ ನೀರನ್ನು ಲೆಕ್ಕಿಸದೆ ಬೆಳೆಯನ್ನು ಕಟಾವು ಮಾಡಿಕೊಂಡು 200 ಮೀಟರ್ ನಷ್ಟು ಕೆಸರುಗದ್ದೆಯಂತೆ ಇರುವ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯನ್ನು ಪುಟ್ಟಿಗಳ ಮೂಲಕ ಹೊತ್ತು ಟ್ಯಾಕ್ಟರ್ ಗೆ ಹಾಕಿಕೊಂಡು ಬೆಳೆ ಉಳಿಸಿಕೊಳ್ಳಲು ಅನ್ನದಾತರು ಮುಂದಾಗಿದ್ದಾರೆ.












About The Author
Discover more from JANADHWANI NEWS
Subscribe to get the latest posts sent to your email.