March 16, 2026
IMG-20241026-WA0143.jpg

ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಶ್ರೀಶಂಕರಾಚಾರ್ಯ ವಿರಚಿತ “ಕಲ್ಯಾಣವೃಷ್ಟಿಸ್ತವ, ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರ, ಹಾಗೂ ಲಕ್ಷ್ಮಿನೃಸಿಂಹ ಕರುಣಾರಸ ಸ್ತೋತ್ರಗಳ ಪಾರಾಯಣ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ರು.

ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು “ಭಾರತದ ಸನಾತನ ಪರಂಪರೆಗೆ ಶಂಕರಾಚಾರ್ಯರು ನೀಡಿರುವ ಕೊಡುಗೆ ಅಪಾರವಾಗಿದ್ದು ಅವರು ರಚಿಸಿರುವ ವಿವಿಧ ಸ್ತೋತ್ರಗಳ ನಿತ್ಯ ಪಾರಾಯಣದಿಂದ ಮನಶಾಂತಿಯನ್ನು ಪಡೆಯಲು ಸಾಧ್ಯ ಎಂದರು, ಈ ಮೇಲಿನ ಮೂರು ಸ್ತೋತ್ರಗಳ ಪಾರಾಯಣದಿಂದ ಸಮೃದ್ಧ ಮಳೆ-ಬೆಳೆಯಾಗುತ್ತದೆ ಎಂಬ ಅಚಲವಾದ ನಂಬಿಕೆ ಇದ್ದು ಅದು ಇಂದು ಕಾಕತಳೀಯವೆಂಬಂತೆ ಸಾಕಾರಗೊಳ್ಳುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಶ್ರೀ ಶಂಕರಾಚಾರ್ಯ ವಿರಚಿತ ಕಲ್ಯಾಣವೃಷ್ಟಿಸ್ತವ ಶಿವಪಂಚಾಕ್ಷರ ನಕ್ಷತ್ರಮಾಲಾಸ್ತೋತ್ರ ಹಾಗೂ ಲಕ್ಷ್ಮಿನೃಸಿಂಹ ಕರುಣಾರಸಸ್ತೋತ್ರಗಳ ಪಾರಾಯಣ ಕಾರ್ಯಕ್ರಮ ನಡೆಯಿತು. ಈ ಪಾರಾಯಣ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಗೀತಾ ನಾಗರಾಜ್, ಶ್ರೀಮತಿ ವನಜಾಕ್ಷಮ್ಮ, ಸುಮನ ಕೋಟೇಶ್ವರ, ಡಿ.ಕಾವೇರಿ, ವಿಜಯಲಕ್ಷ್ಮೀ, ಸುಮ ಪ್ರಕಾಶ್,ಕಲ್ಪನ, ಯಶೋಧಾ ಪ್ರಕಾಶ್,ನಾಗರತ್ನಮ್ಮ, ಕೆ.ಎಸ್ ವೀಣಾ, ಕವಿತಮ್ಮ ಅಂಬುಜ,ಉಷಾ ಪ್ರಕಾಶ್,ಶಾರದಾಮ್ಮ , ಯತೀಶ್ ಎಂ ಸಿದ್ದಾಪುರ,ಉಷಾ ಶ್ರೀನಿವಾಸಲು, ಪ್ರೇಮಲೀಲಾ,ವೈಷ್ಣವಿ,ಮುಂತಾದ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading