March 16, 2026
IMG-20241026-WA0124.jpg

ಚಳ್ಳಕೆರೆ:ಕಳೆದ ಎರಡು ದಿನಗಳಿಂದ ಅನಿರ್ದಿಷ್ಟವಾಗಿ ಧರಣಿ ಸತ್ಯಾಗ್ರಹ ನಡೆಸುವ ಸ್ಥಳಕ್ಕೆ ಲೋಕಸಭಾ ಸದಸ್ಯರಾದ ಗೋವಿಂದ ಎಂ ಕಾರಜೋಳ ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡು ಧರಣಿ ನಿರತರ ಸಮಸ್ಯೆಗಳನ್ನು ಆಲಿಸಿದರು.

ನಗರದ ನಗರಸಭೆ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಅನಿರ್ದಿಷ್ಟವಾಗಿ ಧರಣಿ ನಡೆಸುವ ಸ್ಥಳಕ್ಕೆ ಆಗಮಿಸಿ ಮಾತನಾಡಿದರು.

ಇನ್ನೂ ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಸಂಪರ್ಕದ ಮೂಲಕ ಕರೆ ಮಾಡಿ ಸೋಮವಾರದೊಳಗೆ ಧರಣಿ‌ನಿರತರ ಸಮಸ್ಯೆಗಳನ್ನು  ಪರಿಹರಿಸಿ ಚಳ್ಳಕೆರೆ ನಗರದ ಮಾದಿಗ ಜನಾಂಗಕ್ಕೆ ಮೀಸಲಿಟ್ಟ ಭೂಮಿಗಳ ಹಕ್ಕುಪತ್ರಗಳನ್ನು ಈ ಕೂಡಲೇ ನೀಡಬೇಕು ಅಲ್ಲಿಯವರೆಗೆ ಧರಣಿ ನಿರತರಿಗೆ ರಕ್ಷಣೆ ನೀಡಿ ನ್ಯಾಯಯುತವಾಗಿ ತಮ್ಮ ಬೇಡಿಕೆಗೆ ಸಹಕರಿಸಿ ಎಂದರು.

ಮೂರು ತಲೆಮಾರಿನ ಹಿಂದೆ ನಮ್ಮ ಹಿರಿಯರು ನಮ್ಮ ಮಕ್ಕಳ ಭವಿಷ್ಯದ ಇತದೃಷ್ಟಿಯಿಂದ ನಗರದಲ್ಲಿ ಆದಿಕರ್ನಾಟಕ ಹಾಸ್ಟೆಲ್ ಜಾಗ, ಚರ್ಮ ಕೈಗಾರಿಕಾ ಕುಶಲ ಕರ್ಮಿ ಭೂಮಿ, ಚರ್ಮ ಕೈಗಾರಿಕಾ ಮಳಿಗೆಗಳು ಎಂದು ಮೂರು ಕಡೆ ಭೂಮಿಯನ್ನು ಅಂದಿನ ಸರಕಾರ ಮಾದಿಗ ಜನಾಂಗಕ್ಕೆ ನೀಡಿತ್ತು ಆದರೆ ಅಂದು ನೀಡಿದ ಭೂಮಿಯ ಕಡತಗಳು ಇಂದು ಇಲಾಖೆಯಲ್ಲಿ ಕೊಡಲು ಕೋರ್ಟ್ ಆದೇಶ ಆಗಬೇಕು ಎಂದು ಕುಂಟನೆಪ ಹೇಳುತ್ತಾರೆ ಎಂದು ಧರಣಿ ನಿರತ ಮಾದಿಗ ಮಹಾಸಭಾದ ಅಧ್ಯಕ್ಷ ಎಂ.ಶಿವಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಮಾದಿಗ ಸಮುದಾಯದ ಆಸ್ತಿಯನ್ನು ಅನ್ಯ ಸಮುದಾಯದವರು ಅತಿಕ್ರಮಣ ಮಾಡಿದ್ದಾರೆ, ಆದ್ದರಿಂದ ಮಾದಿಗರ ಆಸ್ತಿಯನ್ನು‌ ಮಾದಿಗರಿಗಾಗಿ ಮೀಸಲಿಡಬೇಕು, ಮಾದಿಗರ ಭೂಮಿಯ ಹಕ್ಕು ಪತ್ರಗಳನ್ನು ಈ ಕೂಡಲೇ ಕೊಡಬೇಕು ಎಂದು ಒತ್ತಾಯಿಸಿದರು.

ಹಳೆನಗರದ ಜಯಣ್ಣ ಮಾತನಾಡಿ, ಮಾದಿಗ ಸಮಾಜದ ಆಸ್ತಿಯ ಉಳಿವಿಗಾಗಿ

ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟನೆಯಲ್ಲಿ ತಾಲೂಕಿನ ಪ್ರತಿಯೊಬ್ಬ ಮಾದಿಗರು ಭಾಗವಹಿಸಬೇಕು,  ತಾಲ್ಲೂಕಿನ ಸಮಸ್ತ ಮಾದಿಗ ಸಮಾಜದ ಬೆಲೆಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುವಂತಹ

(ಡೇಲೈಟ್ ರಾಬರಿ) ಈ ಕಾನೂನು ಬಾಹಿರ ಕೆಲಸದ ವಿರುದ್ಧ ಪ್ರತಿಯೊಬ್ಬ ಪ್ರಜ್ಞಾವಂತ

ಮಾದಿಗ ಬಂಧು ಈ ಅನ್ಯಾಯದ ವಿರುದ್ಧ ಪ್ರತಿಭಟಿಸಲೇಬೇಕಾದ ಅನಿವಾರ್ಯತೆ

ಇದೆ ಎಂದರು.

ನಮ್ಮ ಪೂರ್ವಜರು ಸಮಾಜದ ಏಳಿಗೆಗಾಗಿ ಚಳ್ಳಕೆರೆ ನಗರದಲ್ಲಿ ನಿರ್ಮಿಸಿದ

ಚರ್ಮ ಹದಮಾಡುವ ಕೈಗಾರಿಕೆ. ಹಾಗೂ ಚರ್ಮಮಾರಾಟ ಮಾಡುವ ಮಳಿಗೆಯನ್ನು

ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಣ ಮಾಡುತ್ತಿದ್ದರೂ ಚಳ್ಳಕೆರೆ ನಗರಸಭೆ ಇದರ

ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಸೋಜಿಗದ ಸಂಗತಿ.ಅಲ್ಲದೇ ಚಿತ್ರದುರ್ಗ ರಸ್ತೆ

ಯಲ್ಲಿರುವ ಬಾಬೂ ಜಗಜೀವನರಾಂ ಭವನ ಹಾಗೂ ಗಾಂಧಿನಗರದಲ್ಲಿರುವ ಪುರಸಭಾ

ಕಲ್ಯಾಣ ಮಂಟಪಕ್ಕೆ, ಚಳ್ಳಕೆರೆ ನಗರಸಭೆ ಇದೇ ರೀತಿ ದ್ವಿ-ಮುಖ ನೀತಿಯನ್ನು ಅನುಸರಿ

ಸುತ್ತಿರುವುದು ನಗರಸಭೆಯ ಆಡಳಿತ ಮಾದಿಗ ಸಮಾಜದ ಪರ ಎಷ್ಟೆಂಬುದು ತಾವೇ

ಯೋಚಿಸಬೇಕು. ಈಗಾಗಲೇ  ಚರ್ಮ ಕೈಗಾರಿಕೆ ಮಳಿಗೆಯನ್ನು ಅನ್ಯ ಧರ್ಮಿಯರ ಸಂಘಟನೆ ವ್ಯಾಪ್ತಿಗೆ ಒಳಪಡಿಸುತ್ತಿರುವ ಹುನ್ನಾರ ನಡೆಯುತ್ತಿರುವುದುಗಮನಕ್ಕೆ ಬಂದಿರುತ್ತೆ. ಈ ರೀತಿ ಮಾದಿಗ ಸಮಾಜದ ಬೆಲೆ ಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುತ್ತಿರುವುದು ನಗರಸಭೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ನಿರ್ಲಕ್ಷ ತೋರುತ್ತಿರುವುದು, ಅತಿಕ್ರಮಣಗಾರರಿಗೆ ಕುಮ್ಮಕ್ಕು ನೀಡುತ್ತಿರುವುದು ಎಂದು ಅನುಮಾನ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂಧರ್ಭದಲ್ಲಿ ,  ಮಾದಿಗ ಮಹಾ ಸಭಾದ  ಅಧ್ಯಕ್ಷ ಎಂ ಶಿವಮೂರ್ತಿ, ಇಂದ್ರೇಶ್, ಸೂರನಹಳ್ಳಿ ಶ್ರೀನಿವಾಸ್, ಚೆನ್ನಿಗರಾಮಯ್ಯ, ಕೃಷ್ಣಮೂರ್ತಿ,  ಪಾಪಣ್ಣ ಜಯಣ್ಣ, ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಚೆನ್ನಾಗನಹಳ್ಳಿ ಮಲ್ಲೇಶ್ , ತಿಪ್ಪೇಸ್ವಾಮಿ , ಮಂಜುನಾಥ್, ವೆಂಕಟೇಶ್, ಚೆನ್ನಕೇಶವ ಮೂರ್ತಿ, ನಾಗರಾಜ್, ಅಂಜಿನಪ್ಪ, ಶಿವಮೂರ್ತಿ ಗಾಂಧಿನಗರದ ಯುವ ಮುಖಂಡ ಎಲ್ ಸಿದ್ದು , ಚಿರಂಜೀವಿ ,ಮನು ದೊರೆ, ಇತರ ಹಲವುಸಮಾಜದ ಮುಖಂಡರು, ಮಾದಿಗ ಸಮಾಜದಹಿರಿಯ ರಾಜಕಾರಣಿಗಳು, ನಿವೃತ್ತ ನೌಕರರು, ಕಲಾವಿದರು, ಎನ್.ಜಿ.ಓ. ಸಂಘಟನೆಗಳು,ಮಹಿಳಾ ಮತ್ತು ದಲಿತ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading