ಚಿಕ್ಕಮಗಳೂರು:
ಜಿಲ್ಲೆಯ ತರೀಕೆರೆ ತಾಲ್ಲೂಕು ಲಿಂಗದಹಳ್ಳಿ ಬಲ್ಲಾವರ ವಿಲೇಜ್ ಹತ್ತಿರ ದಿ ಲಾಸ್ಟ್ ರೆಸಾರ್ಟ್ ಇದರ ಸಭಾಂಗಣದ ಹೊರಾಂಗಣ ಪರಿಸರದಲ್ಲಿ ಸಹಕಾರ ಇಲಾಖೆ ,ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಹಾಗೂ ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಚಿತ್ರದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಬರುವ ಆಯ್ದ ಇತರೆ ಸಹಕಾರ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು ಹಾಗೂ ಸಹಕಾರ ರತ್ನ ಪುರಸ್ಕೃತರು ಹಾಗೂ ನಿರ್ದೇಶಕರಾದ ಆರ್.ರಾಮರೆಡ್ಡಿ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಚ್.ಎಂ.ದ್ಯಾಮಣ್ಣಕೋಗುಂಡೆ ಇವರು ವಹಿಸಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಜಿಂಕಲ್ ಬಸವರಾಜು , ಸಹಕಾರ ರತ್ನ ಪುರಸ್ಕೃತರು ಹಾಗೂ ನಿರ್ದೇಶಕರು, ಜಿಲ್ಲಾ ಸಹಕಾರ ಯೂನಿಯನ್ ಇವರುಗಳು ಮಾತನಾಡಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಯೂನಿಯನ್ನಿನ ನಿರ್ದೇಶಕರುಗಳಾದ ಜಿ. ಈ. ಅಜ್ಜಪ್ಪ , ಸಹಕಾರರತ್ನ ಪುರಸ್ಕೃತರು, ಜಿ.ಬಿ.ಶೇಖರಪ್ಪ, ಎನ್. ಮಾತೃಶ್ರೀ ಮಂಜುನಾಥ್, ಜಿ ಎನ್.ಹರೀಶ್, ಕೆ.ಹೆಚ್.ಜಗನ್ನಾಥ್, ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಎಸ್. ವಿ. ಬಸವರಾಜಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕರು (ನಿವೃತ್ತ) ಚಿಕ್ಕಮಗಳೂರು ಇವರು ಚಿತ್ರದುಗ೯ ಜಿಲ್ಲೆಯಿಂದ ಬಂದಿರುವ ಇತರೆ ಸಹಕಾರ ಸಂಘಗಳ ಪ್ರತಿನಿಧಿಗಳಿಗೆ ಇತ್ತೀಚೆಗೆ ತಿದ್ದುಪಡಿಯಾದ ಸಹಕಾರ ಸಂಘಗಳ ಕಾಯ್ದೆ ಕಾನೂನುಗಳ ಬಗ್ಗೆ ಉಪನ್ಯಾಸ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಉಪಸ್ಥಿತರಿದ್ದರು
ಮೊದಲಿಗೆ ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಾಗರಾಜ್ ಪಾಟೀಲ್, ಜಿಲ್ಲಾ ಸಹಕಾರ ಶಿಕ್ಷಕರು, ಜಿಲ್ಲಾ ಸಹಕಾರ ಯೂನಿಯನ್ ಚಿತ್ರದುರ್ಗ ಇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜಯಶ್ರೀ ಪಿ ಹುನಗುಂದ ಇವರು ಸರ್ವರನ್ನು ಸ್ವಾಗತಿಸಿದರು. ಕೊನೆಯಲ್ಲಿ ಯೂನಿಯನ್ ವ್ಯವಸ್ಥಾಪಕರಾದ ಶ್ರೀಮತಿ ಸೌಮ್ಯ ಸರ್ವರನ್ನು ವಂದಿಸಿದರು.



About The Author
Discover more from JANADHWANI NEWS
Subscribe to get the latest posts sent to your email.