September 14, 2025
IMG-20250827-WA0154.jpg

ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.

ನಾಯಕನಹಟ್ಟಿ:: ಆಗಸ್ಟ್ 28.
ನಾಯಕನಹಟ್ಟಿ ಪಟ್ಟಣದಲ್ಲಿ ಪಿಎಸ್ಐ ಪಾಂಡುರಂಗಪ್ಪ ನೇತೃತ್ವದಲ್ಲಿ ಪಥಸಂಚಲನ ನಡೆಯಿತು.
ನಾಯಕನಹಟ್ಟಿ ಪೊಲೀಸ್ ಠಾಣೆಯಿಂದ ಪಥ ಸಂಚಲನ ಆರಂಭಗೊಂಡು ಪಾದಗಟ್ಟೆಯವರೆಗೂ ತೆರಳಿ ಜಗಳೂರು ರಸ್ತೆಯ ಮೂಲಕ ಶ್ರೀಗುರು ತಿಪ್ಪೇರುದ್ರಸ್ವಾಮಿ ಒಳ ಮಠದವರೆಗೆ ಆಗಮಿಸಿತು.

ಹಿಂದೂಗಳ ಪವಿತ್ರ ಹಬ್ಬವಾದ ಗೌರಿ-ಗಣೇಶ ಹಬ್ಬ ಹಾಗೂ ಮುಸ್ಲಿಂರು ಆಚರಿಸುವ ಈದ್ ಮಿಲಾದ್ ಹಬ್ಬ ಒಟ್ಟಿಗೆ ಆಚರಣೆ ಮಾಡಲಾಗುತ್ತಿದ್ದೂ ಎರಡು ಕೋಮುಗಳ ಮಧ್ಯೆ ಸಾಮರಸ್ಯ ಬೆಸೆಯಲು ಮತ್ತು ಆಯಾಯ ಧರ್ಮದವರು ತಮ್ಮ ಹಬ್ಬಗಳನ್ನು ಶಾಂತಿ ರೀತಿಯಿಂದ ಆಚರಿಸಬೇಕು ಮತ್ತು ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು.

ಹಬ್ಬದ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪೊಲೀಸ್ ಪಡೆ ನಾಗರಿಕರಲ್ಲಿ ಭದ್ರತಾ ಭರವಸೆ ಮೂಡಿಸಿತು.

ಈ ಸಂದರ್ಭದಲ್ಲಿ ಎಎಸ್ಐ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಇ.ಎಂ. ಭಾಷಾ, ರಾಘವೇಂದ್ರ, ರುದ್ರಪ್ಪ,ಪಿ. ಕುಮಾರ್, ಅಣ್ಣಪ್ಪನಾಯ್ಕ,ದೇವರಾಜ್‌, ರಾಘವೇಂದ್ರ, ಅಜ್ಜಯ್ಯ, ಹಾಗೂ ಗೃಹರಕ್ಷಕ ದಳ ಸಿಬ್ಬಂದಿಗಳು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading