
ಚಳ್ಳಕೆರೆ ಆ.27
ಕಾರಿನಲ್ಲಿದ್ದ ಹಣ ದೊಂದಿಗೆ ಆಂದ್ರಗಡೆ ಎಸ್ಕೇಪ್ ಆದ ಪ್ರಕರಣ ನಡೆದ 24 ಗಂಟೆಯೊಳಗೆ ಜೀವದ ಹಂಗು ತೊರೆದು ಸಿನಿಮೀಯ ರೀತಿ ಕಳ್ಳನ ಸೆರೆ ಹಿಡಿದ ಚಳ್ಳಕೆರೆ ಪೋಲಿಸರು.













ನಾಡಿನ
ಹೌದು ಇದು ಬೆಂಗಳೂರು ಮೂಲದ ನಿವೃತ್ತ ಸಿಬಿಐ ಎಸ್ಪಿ ಗುರುಪ್ರಸಾದ್ ಹಾಗೂ ಪತ್ನಿ ಇಬ್ಬರು ಮಗಳ ನದುವೆಗಾಗಿ ಬಳ್ಳಾರಿಯಲ್ಲಿದ್ದ ಜಮೀನು 97 ಲಕ್ಷ ರೂಗಳಿಗೆ ಮಾರಿಕೊಂಡು ಬಾಡಿಗೆ ಕಾರಿನಲ್ಲಿ ಬೆಂಗಳೂರಿಗೆ ಮರಳುವಾಗ ಚಳ್ಳಕೆರೆ ನಗರದ ಪೋಲಿಸ್ ಠಾಣೆ ಕೂಗಳತೆ ದೂರದಲ್ಲಿರುವ ಉಡುಪಿ ಕಾರ್ಡನ್ ಹೋಟೆಲ್ ಬಳಿ ನಿಲ್ಲಿ ಕಾರು ಚಾಲಕ ರಮೇಸ್ ಹಾಗೂ ಗುರುಪ್ರಸಾದ್ ಹಾಗೂ ಪತ್ನಿ ಮೂರು ಜನರು ಊಟ ಮಾಡುತ್ತಿರುವಾಗ ಕಾರು ಚಾಲಕ ರಮೇಶ್ ಹಣದೊಂದಿಗೆ ಎಸ್ಕೇಕ್ ಆಗಿದ್ದು ಚಳ್ಳಕೆರೆ ಪೋಲಿಸ್ ಠಾಣೆಗೆ ದೂರು ನೀಡಿದ ಆದಾರದ ಮೇಲೆ ಎಸ್ಪಿ ರಂಜಿತ್ ಕುಮಾರ್ ಬಂಡಾರ್ ಹಾಗೂ ಡಿವೈಎಸ್ಪಿ ರಾಜಣ್ಣ ಮಾರ್ಗದರ್ಶನದಲ್ಲಿ ಮೂರು ತಂಡಗಳನ್ನು ರಚನೆ ಮಾಡಿದ್ದು ಪಾವಗಡ ಸಮೀಪ ಸುಮಾರು 40 ಕೀಲೋ ಮೀಟರ್ ದೂರದವರೆಗೆ ಜೀವದ ಹಂಗು ತೊರೆದು ಆರೋಪಿ ಕಾರು ಚೇಜ್ ಮಾಡಲು ಬೆನ್ನಟ್ಟಿ ಠಾಣಾಧಿಕಾರಿ ಕುಮಾರ್ ಹಾಗೂ ಸಿಬ್ಬಗಳು ಹೋಗುವಾಗ ಆರೋಪಿ ಕಾರ್ ಪಲ್ಟಿಯಾಗಿ ನಜ್ಜು ಗುಜ್ಜಾಗಿದ್ದು ಪೋಲಿಸ್ ವಾಹನ ಸಹ ಅಪಘಾತವಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದು ಆರೋಪಿಯ ಅಜ್ಜಿ ಮನೆಯಲ್ಲಿಟ್ಟಿದ್ದ 97 ಲಕ್ಷರೂ ವಶಪಡಿಸಿಕೊಂಡು ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಹಣ ಕಳವು ಘಟನೆಯಾಗಿ 24 ಗಂಟೆಯೊಳಿಗೆ ಆರೋಪಿಯನ್ನು ಬಂದಿಸಿದ ಪೋಲಿಸ್ ಸಿಬ್ಬಂದಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸದರಿ ಪ್ರಕರಣದಲ್ಲಿ, ಆರೋಪಿಯನ್ನು ಮತ್ತು ಹಣವನ್ನು ಪತ್ತೆ ಮಾಡಲು ಶ್ರಮಿಸಿದ ಠಾಣಾಧಿಕಾರಿ ಕುಮಾರ್ ಕೆ .
ಮತ್ತು ಪಿಎಸ್‌ಐ ರಗಳಾದ ಈರೇಶ್,
ಶಿವರಾಜ್.ಜೆ, ಎಎಸ್ ಐ ರವಿಕುಮಾರ್ ಬಿ.ವಿ ಸಿಬ್ಬಂದಿಯರಾದ
ವಸಂತಕುಮಾರ್ ಹೆಚ್ ಸಿ, ಮಂಜುನಾಥ ಹೆಚ್ಸಿ,, ವೆಂಕಟೇಶ ಕೆ ಹೆಚ್ ಸಿ, ನಾಗರಾಜ ಸಿಹೆಚ್. ಪರಶುರಾಮ ಪಿಸಿ, ಶ್ರೀಧರ .ವಸಂತ., ರಮೇಶ್. ಶ್ರೀಧರ್, ಅಶೋಕರೆಡ್ಡಿ, ತಿಪ್ಪೇಸ್ವಾಮಿ ತಿಲಕರಾಜ್, ಶಿವರಾಜ್, ಮಂಜುನಾಥ ಎನ್, ಶ್ರೀನಿವಾಸ್ ದಾಳಿ ನೇತೃತ್ವದಲ್ಲಿ ಬಾಗಿಯಾಗಿದ್ದರು.


About The Author
Discover more from JANADHWANI NEWS
Subscribe to get the latest posts sent to your email.