
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಟೈಲರ್ ಕಾರ್ಮಿಕರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸರ್ಕಾರ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್ ಹೇಳಿದ್ದರು.
ಭಾನುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದ ಯಾತ್ರಿ ನಿವಾಸ ಆವರಣದಲ್ಲಿ
ನಾಯಕನಹಟ್ಟಿ ಹೋಬಳಿ ಮಟ್ಟದ ಟೈಲರ್ ಕಾರ್ಮಿಕರ ಸಂಘ ಉದ್ಘಾಟಿಸಿ ಸಮಾರಂಭದಲ್ಲಿ ಮಾತನಾಡಿದರು. ಹೋಬಳಿ ಮಟ್ಟದ ಟೈಲರ್ ಕಾರ್ಮಿಕರ ಸಂಘ ಸ್ಥಾಪನೆ ಮಾಡುವುದು ಸಂತಸ ತಂದಿದೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಟೈಲರ್ ಕಾರ್ಮಿಕರಿಗೆ ಆಶ್ರಯ ಯೋಜನೆ ಅಡಿ ಮನೆಗಳಿಗೆ ಅರ್ಜಿ ನೀಡಲು ಟೈಲರ್ ಕಾರ್ಮಿಕರಿಗೆ ಸೂಚನೆ ನೀಡಿದರು ಮತ್ತು ಟೈಲರ್ ಕಾರ್ಮಿಕರಿಗೆ ಪಟ್ಟಣ ಪಂಚಾಯತಿಯಲ್ಲಿ ದೊರೆಯುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಟೈಲರ್ ಕಾರ್ಮಿಕರ ಸಂಘದ ಅಧ್ಯಕ್ಷ ಶಾಪಿವುಲ್ಲಾ ಮಾತನಾಡಿದರು ಸಮಾಜದಲ್ಲಿ ಟೈಲರ್ ಕಾರ್ಮಿಕರ ಸೇವೆ ತುಂಬಾ ಮಹತ್ವವಾದದ್ದು ಟೈಲರ್ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಒಂದಾಗಬೇಕು ಎಂದು ತಿಳಿಸಿದರು.
ಇನ್ನೂ ಕಾರ್ಯಕ್ರಮದಲ್ಲಿ ಟೈಲರ್ ಕಾರ್ಮಿಕರಿಗೆ ಗುರುತಿನ ಚೀಟಿ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಹೋಬಳಿ ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಇಸ್ಮೈಲ್ ಭಾಷಾ, ಕಾರ್ಯದರ್ಶಿಯಾಗಿ ದಳವಾಯಿ ರಾಜಣ್ಣ, ಗೌರವಾಧ್ಯಕ್ಷರಾಗಿ ಮಂಜಣ್ಣ, ಸಂಘಟನೆ ಕಾರ್ಯದರ್ಶಿಯಾಗಿ ನಾಗಣ್ಣ, ಮತ್ತು ರಾಜೇಶ್, ಪ್ರಧಾನ ಕಾರ್ಯದರ್ಶಿ ಮಂಜು ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ, ಸೇರಿದಂತೆ ಹೋಬಳಿ ಮಟ್ಟದ ಟೈಲರ್ ಕಾರ್ಮಿಕರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.