
: ಚಿತ್ರದುರ್ಗ : ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗಿಲಿಕೇನಹಳ್ಳಿ ಗ್ರಾಮಕ್ಕೆ ಸಚಿವ ಡಿ ಸುಧಾಕರ್ ಮಾಜಿ ಸಚಿವ ಎಚ್ ಆಂಜನೇಯ ಭೇಟಿ ನೀಡಿದರು
ಅನ್ಯ ಜಾತಿಯ ಹುಡುಗನೊಬ್ಬ ಅಪರಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸದ
ಹೊಳಲ್ಕೆರೆ ಪೊಲೀಸರ ವಿಳಂಬ ಮತ್ತು ನಿರ್ಲಕ್ಷತನದಿಂದ ಮನನೊಂದು
ಇತ್ತೀಚಿಗೆ ಹೊಳಲ್ಕೆರೆ ಪೊಲೀಸ್ ಠಾಣೆ ಆವರಣದಲ್ಲಿಯೇ
ವಿಷ ಸೇವಿಸಿ ಜಿಲ್ಲಾ ಆಸ್ಪತ್ರೆಯಲ್ಲಿ ಮರಣ ಹೊಂದಿದ ಯುವತಿ ತಂದೆ ದಿವಂಗತ ಅಜ್ಜಯ್ಯ ಅವರ ನಿವಾಸಕ್ಕೆ
ಸಚಿವ ಸುಧಾಕರ್ ಮಾಜಿ ಸಚಿವ ಎಚ್ ಆಂಜನೇಯ ಅವರೊಂದಿಗೆ ಭೇಟಿ ನೀಡಿದರು.
ಮೃತರ ಮತ್ತು ಕುಟುಂಬಸ್ಥರಿಗೆ ಸ್ವಂತನಾ ಹೇಳಿ ಸರ್ಕಾರ ಕುಟುಂಬದ ಜೊತೆ ಇರುವುದಾಗಿ ಧೈರ್ಯ ತುಂಬಿದರು.
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷತನ ನಿರ್ಲಕ್ಷ ತೋರಿದ ಪೊಲೀಸರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಭರವಸೆ ನೀಡಿದರು.
ಜೊತೆಗೆ ಕುಟುಂಬಕ್ಕೆ ಸರ್ಕಾರ ದಿಂದ ಸೂಕ್ತ ನೆರವು
ಒದಗಿಸಿ ಕುಟುಂಬ ಸದಸ್ಯರೊಂದಿಗೆ ಹೊರಗುತ್ತಿಗೆ ಕೆಲಸ ನೀಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ತಾಲೂಕ್ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎ.ಚ್.ಟಿ. ಹನುಮಂತಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಪಿಆರ್ ಶಿವಕುಮಾರ್ ಶಿವಪುರ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು
ವರದಿ ಹರೀಶ್ ನಾಯಕನಹಟ್ಟಿ
About The Author
Discover more from JANADHWANI NEWS
Subscribe to get the latest posts sent to your email.