September 15, 2025
IMG-20250527-WA0179.jpg

ನಾಯಕನಹಟ್ಟಿ : ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪಟ್ಟಣ ಪಂಚಾಯತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಅನರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.

ಇದೇ ಸಂದರ್ಭದಲ್ಲಿ ಬಿಲ್ ಕಲೆಕ್ಟರ್ ಸಂದೀಪ್ ಮಾತನಾಡಿ ಪಟ್ಟಣ ಪಂಚಾಯತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗೆ ಓ ಪಿ ಎಸ್ ಜಾರಿಗೊಳಿಸಬೇಕು. ಅರೆ ಸರ್ಕಾರಿ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು, ಸರ್ಕಾರದಿಂದ ಸಿಗುವ ಸೌಲಭ್ಯಗಳಾದ ಕೆ ಜೆ ಡಿ, ವಿಮಾ ಸೌಲಭ್ಯ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳು ನಮಗೆ ದೊರೆಯುವಂತಾಗಬೇಕು. ನೇರ ಪಾವತಿಯಲ್ಲಿ ಕೆಲಸ ಮಾಡುವ ನೌಕರವಾದ ನೀರು ಸರಬರಾಜು, ಕಸ ವಿಲೇವಾರಿ ವಾಹನ ಚಾಲಕರು ಹಾಗೂ ಪೌರಕಾರ್ಮಿಕರನ್ನು ಖಾಯಂ ನೌಕರರಾಗಿ ಘೋಷಿಸಬೇಕು. ಸರ್ಕಾರಕ್ಕೆ 45 ದಿನಗಳ ಗಡಿವು ನೀಡಿದ್ದವು, ಆದರೆ ಸರ್ಕಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರನ್ನು ನಿರ್ಲಕ್ಷಿಸಿದೆ. ಆದ್ದರಿಂದ ನಮ್ಮ ಬೇಡಿಕೆ ಈಡೇರುವರೆಗೆ ಅನರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಂತರ ನಾಯಕನಹಟ್ಟಿ ಪೌರಕಾರ್ಮಿಕರ ಸಂಘದ ನೂತನ ಅಧ್ಯಕ್ಷ ಎಸ್ಎಂ ಮಂಜುನಾಥ್ ಮಾತನಾಡಿ ರಾಜ್ಯದಲ್ಲಿರುವ ಪಾಲಿಕೆ, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಮತ್ತು ನೀರು ಸರಬರಾಜು ಸೇರಿದಂತೆ ವಾಹನ ಚಾಲಕರಿಗೂ ಸರ್ಕಾರಿ ನೌಕರರಿಗೆ ಸಿಗುವ ಎಲ್ಲಾ ಸೌಲಭ್ಯಗಳು ದೊರೆಯುವಂತಾಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಟಿ ತಿಪ್ಪೇಸ್ವಾಮಿ, ಕೆ ವಿ ತಿಪ್ಪೇಶಿ, ಆರ್ ಸಂದೀಪ್, ನಾಗರತ್ನಮ್ಮ, ದಯಾನಂದ ಸ್ವಾಮಿ, ಮಂಗಳ ಗೌರಮ್ಮ, ಮಧು, ಅಭಿಷೇಕ್, ಟಿ ಸುರೇಶ್, ತಿಪ್ಪಮ್ಮ, ತಿಪ್ಪೇಸ್ವಾಮಿ, ಎನ್ ಲತಾ, ಶಿವರುದ್ರಪ್ಪ, ಏ ಕೆ ತಿಪ್ಪೇಸ್ವಾಮಿ, ಹರಳಯ್ಯ, ಓಬಯ್ಯ, ಬೋರಯ್ಯ, ಎಸ್ ತಿಪ್ಪೇಸ್ವಾಮಿ, ಎಸ್ ಎಂ ಮಂಜುನಾಥ್, ಬಿ ತಿಪ್ಪೇಸ್ವಾಮಿ, ಹನುಮಂತಪ್ಪ, ಮುನಿಯಪ್ಪ, ಬಿ ರುದ್ರಪ್ಪ, ಕಾಶಿನಾಥ್, ಮೈಲಾರಪ್ಪ, ಎಚ್ಎಸ್ ಹಾಲಪ್ಪ, ರತ್ನಮ್ಮ, ರುದ್ರಣ್ಣ, ಗುಡದಯ್ಯ, ಜಿ ಪಿ ರತ್ನಮ್ಮ ಇನ್ನು ಮುಂತಾದವರು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading