December 14, 2025
d27-tm5.jpg


ವರದಿ ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ತಿಮ್ಮರಾಜು ಸಂಬಂಧಿಕರು ಪಟ್ಟಣದ ಪುರಸಭೆಯ ಮುಂದೆ ಭಾನುವಾರ ಬೆಳಿಗ್ಗೆ ನೂರಾರು ಮಹಿಳೆಯರು ಹಾಗು ಪುರುಷರು ತಿಮ್ಮರಾಜು ಸಾವಿಗೆ ಕಾರಣರದವರನ್ನ ಬಂಧಿಸಿ ನ್ಯಾಯ ಕೋಡಿಸಿ ತಿಮ್ಮರಾಜು ಆತ್ಮಕ್ಕೆ ಶಾಂತಿ ದೋರಕಿಸಿ ಎಂದು ಪೋಲಿಸರ ಮುಂದೆ ಅಂಗಲಾಚಿದರು
ತಿಮ್ಮರಾಜು ಅವರನ್ನ ಲೋಕಾಯುಕ್ತ ಬಲೆಗೆ ಷಡ್ಯಂತ್ರ ಮಾಡಿ ಬೀಳಿಸಿದ ಪುರಸಭಾ ಸದಸ್ಯರನ್ನ ಸ್ಧಳಕ್ಕೆ ಕರೆಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು.ತಿಮ್ಮರಾಜು ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು ಇಲ್ಲವಾದರೆ ಶವವನ್ನ ತಂದು ಪುರಸಭೆಯ ಮುಂದೆ ಇಟ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವಿಷಯ ತಿಳಿದು ಸ್ಧಳಕ್ಕೆ ಆಗಮಸಿದ ಸಿಪಿಐ ರಮೇಶ್ ಪ್ರತಿಭಟನಾಕಾರರ ಮನವೋಲಿಸಿ ಕಾನೂನಿನಲ್ಲಿ ಅವರಿಗೆ ಏನು ಆಗಬೇಕೋ ಅದು ಹಾಗೇಹಾಗುತ್ತದೆ ಈ ಪ್ರತಿಭಟನೆಯನ್ನ ಇಲ್ಲಿಗೆ ನಿಲ್ಲಿಸಿ ಮೋದಲು ಮುಂದೆ ನಡೆಯಲಿರುವ ಅಂತ್ಯಕ್ರಿಯೆಯನ್ನ ಮುಗಿಸಿ ನ್ಯಾಯ ದೋರಕಿಸಿಕೊಡುವಲ್ಲಿ ನಾವೂ ಸಹಾ ಕಾನೂನು ಬದ್ದವಾಗಿ ಸಹಕರಿಸುತ್ತೇವೆ ಎಂಬ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನ ಹಿಂಪಡೆಯಲಾಯಿತು.
ನಂತರ ಕೆಲವು ಗಂಟೆಗಳ ಕಾಲ ತಿಮ್ಮರಾಜು ಪಾರ್ಧಿವ ಶರೀರವನ್ನ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಒಂದು ಗಂಟೆಗೂ ಹೆಚ್ಚು ಕಾಲ ಪೋಲಿಸ್ ಬಿಗಿ ಭದ್ರತೆಯಲ್ಲಿ ಇರಿಸಿ ನಂತರ ಅವರ ಸ್ವಗ್ರಾಮವಾದ ತಾಲೂಕಿನ ಶ್ರೀರಾಂಪುರ ಹೋಬಳಿ ಗರೀಂಬೀಳು ಗ್ರಾಮದ ಸಮೀಪವಿರುವ ಅವರ ಜಮೀನಿನಲ್ಲಿ ಪತ್ನಿ.ಮಗಳು,ಸಹೋದರು ಅಕ್ಕತಂಗಿಯರು ಮತ್ತು ಕುಟುಂಬಸ್ಧರು ಸೇರಿದಂತೆ ಅಪಾರ ಜನರ ಸಮ್ಮುಖದಲ್ಲಿ ಭಾನುವಾರ ಮದ್ಯಾಹ್ನ ಅಂತ್ಯ ಸಂಸ್ಕಾರ ಮಾಡಲಾಯಿತು. ಅಂತ್ಯ ಸಂಸ್ಕಾರ ಸಂಧರ್ಬದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ಪುರಸಭಾ ಸಬ್ಬಂಧಿವರ್ಗ,ನೌಕರರವರ್ಗ,ಗೌರಿಬಿದನೂರು,ಚಿಕ್ಕಬಳ್ಳಾಪುರ,ಮಾಲೂರು,ಶಿಡ್ಲಘಟ್ಟ ಸೇರಿದಂತೆ ಅನೇಕ ಕಡೆಯ ಪುರಸಭಾ ಸಿಬ್ಬಂಧಿ ವರ್ಗದವರು ರಾಜ್ಯ ಜಿಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಜನಪ್ರತಿನಿಧಿಗಳು, ಸಹಸ್ರ ಸಂಖ್ಯೆಯ ಸಾರ್ವಜನಿಕರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಅಂತ್ಯ ಸಂಸ್ಕರ ಸಂಧರ್ಬದಲ್ಲಿ ತಿಮ್ಮರಾಜು ಪತ್ನಿ ಕಾವ್ಯ, ಅವರ ಮಗಳು ಕುಟುಂಬಸ್ಧರು ಹಾಗು ಅವರ ಸಂಬಂಧಿಕರ ಅಕ್ರಂಧನ ಮುಗಿಲು ಮುಟ್ಟಿತು.

ಮೃತ ಮುಖ್ಯಾಧಿಕಾರಿ ತಿಮ್ಮರಾಜು ಜಿ.ವಿ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading