ವರದಿ ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಪಟ್ಟಣದ ಗ್ರಾಮದೇವತೆ ಶ್ರೀ ದುರ್ಗಾಂಬಿಕ ದೇವಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ಬೆಲ್ಲದ ರಾಶಿ ಉತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮಗಳಿಂದ ವಿಧಿಪೂರ್ವಕವಾಗಿ ಜರುಗಿತು.
ಭಕ್ತರು ಭಕ್ತಿಯಿಂದ ಸಮರ್ಪಿಸಿದ ಒಂಬತ್ತು ಭಾರಿ ಬೆಲ್ಲದ ರಾಶಿಯನ್ನು ದೈವ ಸಂತೃಪ್ತಿಗಾಗಿ ಸಜ್ಜುಗೊಳಿಸಲಾಗಿತ್ತು.
ನಡು ರಾತ್ರಿಯೂ ಸಹಾ ಅಬಾಲವೃದ್ಧರು ಯುವಕರು, ಯುವತಿಯರು ಮಕ್ಕಳು ಸೇರಿದಂತೆ ಸರ್ವ ಭಕ್ತರು ಬೆಲ್ಲದ ರಾಶಿ ಉತ್ಸವ ವೀಕ್ಷಿಸಿದರು. ನಂತರ ಶ್ರೀ ಸೋಮದೇವರ ಓಕುಳಿ ವರ್ಣನಾತೀತವಾಗಿ ಐದು ಭಾರಿ ಜರುಗಿತು. ಬೆಲ್ಲದ ರಾಶಿಗಳಿಂದ ಕೈವಾಡದಾದರರಿಗೆ ಮಡಿವಾಳರಿಗೆ, ಸೇವಾಕರ್ತರಿಗೆ, ಬೆಲ್ಲ ಹಂಚಲಾಯಿತು.
About The Author
Discover more from JANADHWANI NEWS
Subscribe to get the latest posts sent to your email.