ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಪಟ್ಟಣದ ಶ್ರೀಬನಶಂಕರಿ ಬೀದಿ ಕೋಟೆ ರಾಮದೇವರ ದೇವಸ್ಥಾನ ಶ್ರೀ ರಾಮದೇವರ ಬ್ರಹ್ಮರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು ಸ್ವಾಮಿಯ ಕೃಪೆಗೆ ಪಾತ್ರರಾಗಿ ಎಲ್ಲಾ ಸದ್ಭಕ್ತರು ಒಟ್ಟುಗೂಡಿ ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು ಇಲ್ಲಿನ ಪ್ರಮುಖರಾದ ಗುಡಿ ಗೌಡರು ಮತ್ತು ರಾಮನ ಭಕ್ತರು ಸೇರಿ ಸ್ವಾಮಿಯವರ ರಥೋತ್ಸವವನ್ನು ಯಶಸ್ವಿಗೊಳಿಸಿದರು.
ಇಲ್ಲಿನ ವಿಶೇಷವೆಂದರೆ ಅಕ್ಕ-ತಂಗಿಯರು ಅಣ್ಣತಮ್ಮಂದಿರು ಸ್ಥಳೀಯರು ಹಿರಿಯರು.ಕಿರಿಯರು ಎಂಬ ಯಾವ ಭೇದಭಾವ ಇಲ್ಲದೆ ನೀರು ಎರಚುವ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದ್ದು ಇಂದು ಸಹಾ ನೂರಾರು ಮಂದಿ ನೀರು ಎರಚಿ ಸಂಬ್ರಮಿಸಿದರು ಎಂದು ನೈಟ್ ಕ್ಯಾಂಟೀನ್ ಸೋಮಶೇಖರ್ ಹೇಳುತ್ತಾರೆ.
ರಾಮ ಮಂದಿರದಲ್ಲಿ ಆಚರಣೆ: ಪಟ್ಟಣದ ಕೋಟೆ ಬೀದಿಯಲ್ಲಿ ನೆಲೆಸಿರುವ ರಾಮಮಂದಿರದಲ್ಲಿ ಶುಕ್ರವಾರ ಅತ್ಯಂತ ಸಡಗರದಿಂದ ರಾಮನವಮಿ ಆಚರಿಸಲಾಯಿತು. ರಾಮನವಮಿ ಅಂಗವಾಗಿ ಯುಗಾದಿ ಪಾಂಡ್ಯದಿAದ ನಿತ್ಯ ವಿಶೇಷ ಪೂಜೆ ಕಾರ್ಯಗಳು ನಡೆದವು. ನಸುಕಿನಲ್ಲಿ ಶ್ರೀರಾಮ, ಶಾರದ ದೇವಿ ಸೇರಿದಂತೆ ಮಂದಿರದಲ್ಲಿನ ಎಲ್ಲಾ ದೇವರುಗಳಿಗೆ ಪಂಚಾಮೃತ ಅಭಿಷೇಕ ನಡೆಯುತ್ತಿತ್ತು. ಪ್ರತಿ ದಿನ ಬ್ರಾಹ್ಮಣ ಸಮಾಜ ಹಾಗೂ ಗಾಯಿತ್ರಿ ಮಹಿಳಾ ಸಂಘದ ವತಿಯಿಂದ ಭಜನೆ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ರಾಮನವಮಿ ಅಂಗವಾಗಿ ಲೋಕಕಲ್ಯಾಣಕ್ಕಾಗಿ ಶ್ರೀರಾಮ ಮೂರ್ತಿಗೆ ಅಭಿಷೇಕ ಪೂಜೆ ಮಹಾಮಂಗಳಾರತಿ ನಡೆಯಿತು.
ಸಂಜೆ ದೇವರ ಉತ್ಸವ ರಾಮಮಂದಿರದಿAದ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಪೂಜೆ ಕಾರ್ಯಕ್ರಮದ ನಂತರ ಅನ್ನದಾಸೋಹ ನಡೆಯಿತು.
ಪಟ್ಟಣದ ವಿವಿಧೆಡೆ ಪಾನಕ, ಕೋಸುಂಬರಿ ವಿತರಣೆ : ರಾಮನವಮಿ ಅಂಗವಾಗಿ ಪಟ್ಟಣದ ಟಿ.ಬಿ. ವೃತ್ತ, ವಾಸವಿ ಕಲ್ಯಾಣ ಮಂಟಪ ರಸ್ತೆಯಲ್ಲಿ, ಕೆನರಾ ಬ್ಯಾಂಕ್ ಮುಂಭಾಗ ಸೇರಿದಂತೆ ಹಲವೆಡೆ ಭಕ್ತರು ಪಾನಕ ಕೋಸುಂಬರಿ ಹಾಗೂ ಮಜ್ಜಿಗೆ ವಿತರಿಸಿದರು.
About The Author
Discover more from JANADHWANI NEWS
Subscribe to get the latest posts sent to your email.