March 28, 2026
IMG-20260327-WA0218.jpg

ನಾಯಕನಹಟ್ಟಿ- ಶಿಕ್ಷಣದ ಅರಿವು ಮತ್ತು ಬದುಕಿನೋಡನೆ ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಹೇಳಿದರು.

ಶುಕ್ರವಾರ ಸಮೀಪದ ಗಜ್ಜುಗಾನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೊಡುಗೆ ಹಾಗೂ ಶಾರದಾ ಪೂಜೆ ಕಾರ್ಯಕ್ರಮದಲ್ಲಿ ಶಾರದಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ವಿದ್ಯಾರ್ಥಿಗಳು ಪೋಷಕರು ಹಾಗೂ ಶಿಕ್ಷಕರು ಶಿಕ್ಷಣದ ಕಲಿಕೆಗೆ ಆದ್ಯತೆ ನೀಡುವ ಮೂಲಕ ಪ್ರೇರಣೆಯಾಗಬೇಕು ಎಂದರು.

ಇದೇ ವೇಳೆ ನಾಗರಾಜ ಸಂಗಮ ದಂಪತಿಗಳು ಒಂದು ಲಕ್ಷ ಶಾಲೆಯ ಹೆಸರಿನಲ್ಲಿ ಠೇವಣಿ ಬಂದ ಬಡ್ಡಿ ಹಣದಿಂದ ಬಡ ಮಕ್ಕಳಿಗೆ ಪ್ರತಿ ವರ್ಷ ಲೇಖನೆ ಸಾಮಗ್ರಿಗಳ ವಿತರಣೆಗೆ 1 ಲಕ್ಷ ಚೆಕ್ ಶಿಕ್ಷಕರಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಡಿಐಇಟಿ ಉಪನ್ಯಾಸಕ ರೇವಣ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ಜಿ.ಎಸ್. ತಿಪ್ಪೇಸ್ವಾಮಿ, ಸಿಆರ್ಪಿ .
ಸಿ .ಹನುಮಂತಪ್ಪ, ಮುಖ್ಯ ಶಿಕ್ಷಕ ಬೊಮ್ಮಲಿಂಗಯ್ಯ, ನಿವೃತ್ತ ಶಿಕ್ಷಕ ಸ್ವಾಮಿನಾಥ, ಜಿ.ಒ. ನಾಗರಾಜ್, ಕೆ.ಒ.ಪೆನ್ನೋಬಳಿ,ಡಿ.ಸಿ. ಪಾಟೀಲ್, ಗ್ರಾಮಸ್ಥರಾದ ಸೋಮಣ್ಣ, ಬೊಮ್ಮಯ್ಯ, ಬಸವರಾಜ್, ಇಮ್ತಿಯಾಜ್, ಸೇರಿದಂತೆ ಶಿಕ್ಷಕಿಯರು ಹಾಗೂ ಅಡಿಗೆ ಸಿಬ್ಬಂದಿಗಳು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading